Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

SRH vs MI IPL 2025: ಸನ್‌ ವಿರುದ್ಧ ಮುಂಬೈ ಆರ್ಭಟ: ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಬಡ್ತಿ

ಅನುಭವಿ ಬ್ಯಾಟರ್‌ ರೋಹಿತ್ ಶರ್ಮಾ ಬಾರಿಸಿದ ಅರ್ಧಶತಕ ಹಾಗೂ ವೇಗಿ ಟ್ರೆಂಟ್‌ ಬೌಲ್ಟ್‌ ಪಡೆದ ನಾಲ್ಕು ವಿಕೆಟ್‌ಗಳ ಬಲದಿಂದ ಮುಂಬೈ ಇಂಡಿಯನ್ಸ್ ತಂಡ 18ನೇ ಆವೃತ್ತಿಯಲ್ಲಿ ಸತತ ನಾಲ್ಕನೇ ಗೆಲುವಿನ ನಗೆ ಬೀರಿದೆ. ಬುಧವಾರ ನಡೆದ 41ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ 7 ವಿಕೆಟ್‌ಗಳಿಂದ ಸನ್‌ರೈಸರ್ಸ್‌ ಹೈದರಾಬಾದ್ ತಂಡವನ್ನು ಮಣಿಸಿ ಅಬ್ಬರಿಸಿತು.

ಟಾಸ್‌ ಸೋತರೂ ಮೊದಲು ಬ್ಯಾಟ್ ಮಾಡಿದ ಸನ್‌ರೈಸರ್ಸ್‌ ಹೈದರಾಬಾದ್ ತಂಡದ ಹ್ಯಾನ್ರಿಕ್‌ ಕ್ಲಾಸೇನ್‌ ಬಾರಿಸಿದ ಅರ್ಧಶತಕ ಬಾರಿಸಿದ ಬಲದಿಂದ 20 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 143 ರನ್‌ ಸೇರಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್‌ 15.4 ಓವರ್‌ಗಳಲ್ಲಿ 3 ವಿಕೆಟ್‌ ನಷ್ಟಕ್ಕೆ 146 ರನ್‌ ಸೇರಿಸಿ ಜಯ ಸಾಧಿಸಿತು. ಈ ಮೂಲಕ ಮುಂಬೈ ಇಂಡಿಯನ್ಸ್‌ ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಬಡ್ತಿ ಪಡೆದಿದೆ. ಈ ಸೋಲಿನ ಬಳಿಕ ಸನ್‌ರೈಸರ್ಸ್ ಹೈದರಾಬಾದ್ ತಂಡದ ಪ್ಲೇ ಆಫ್‌ ತಲುಪುವ ಆಸೆ ಮತ್ತಷ್ಟು ಕಠಿಣವಾಗಿದೆ. ಸನ್‌ ತಂಡ ಟೂರ್ನಿಯಲ್ಲಿ 6ನೇ ಸೋಲು ಕಂಡಿದೆ.

SRH vs MI IPL 2025 Toss Match Report Score batting and bowling performance kannada

144 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಮುಂಬೈ ಇಂಡಿಯನ್ಸ್‌ ತಂಡದ ಕಳಪೆಯಾಗಿತ್ತು. ಭರವಸೆಯ ಬ್ಯಾಟರ್‌ ರಯಾನ್‌ ರಿಕಲ್ಟನ್‌ 8 ಎಸೆತಗಳಲ್ಲಿ 2 ಬೌಂಡರಿ ಸೇರಿದಂತೆ 11 ರನ್‌ ಬಾರಿಸಿ ಇಲ್ಲದ ಹೊಡೆತಕ್ಕೆ ಜಯದೇವ್ ಉನಾದ್ಕಟ್‌ ಅವರ ಎಸೆತದಲ್ಲಿ ಅವರಿಗೆ ಕ್ಯಾಚ್ ನೀಡಿದರು.

ರೋಹಿತ್ ಶರ್ಮಾ ಅರ್ಧಶತಕ

13 ರನ್‌ಗಳಿಗೆ ಒಂದು ವಿಕೆಟ್‌ ಕಳೆದುಕೊಂಡು ಸಂಷಕ್ಟದಲ್ಲಿದ್ದ ತಂಡಕ್ಕೆ ರೋಹಿತ್ ಶರ್ಮಾ ಹಾಗೂ ವಿಲ್‌ ಜಾಕ್ಸ್‌ ಆಧಾರವಾದರು. ಈ ಜೋಡಿ ಪವರ್‌ ಪ್ಲೇನಲ್ಲಿ ವಿಕೆಟ್‌ ಬೀಳದಂತೆ ಕಾಯ್ದುಕೊಂಡು ಬ್ಯಾಟ್ ಮಾಡಿದ ಜೋಡಿ ತಂಡದ ಮೊತ್ತವನ್ನು ಹಿಗ್ಗಿಸುತ್ತಾ ಸಾಗಿತು. ಅಲ್ಲದೆ ಅಗತ್ಯ ರನ್‌ಗಳನ್ನು ಕಲೆ ಹಾಕುತ್ತಾ ಸಾಗಿದರು. ಈ ಜೋಡಿ 46 ಎಸೆತಗಳಲ್ಲಿ 64 ರನ್‌ ಸೇರಿಸಿತು. ವಿಲ್‌ ಜಾಕ್ಸ್‌ 19ನೇ ಎಸೆತದಲ್ಲಿ ಜೀಶಾನ್‌ ಅನ್ಸಾರಿಯ ಎಸೆತವನ್ನು ಸಿಕ್ಸರ್ ಬಾರಿಸಲು ಹೋಗಿ ಅಭಿನವ್‌ ಮನೋಹರ್‌ ಅವರಿಗೆ ಕ್ಯಾಚ್ ನೀಡಿದರು.

ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ ತಂಡದ ಇಂಪ್ಯಾಕ್ಟ್‌ ಪ್ಲೇಯರ್‌ ಆಗಿ ಕಾಣಿಸಿಕೊಂಡು ಅಮೋಘ ಬ್ಯಾಟಿಂಗ್ ನಡೆಸಿದರು. ಇವರು 18ನೇ ಆವೃತ್ತಿಯಲ್ಲಿ ಬ್ಯಾಕ್ ಟು ಬ್ಯಾಕ್‌ ಅರ್ಧಶತಕ ಬಾರಿಸಿ ಮಿಂಚಿದರು. ಸನ್‌ರೈಸರ್ಸ್‌ ಹೈದರಾಬಾದ್ ವಿರುದ್ಧ 35 ಎಸೆತಗಳಲ್ಲಿ ಅರ್ಧಶತಕ ಬಾರಿಸಿದರು. ಈ ಅರ್ಧಶತಕದ ಮೂಲಕ ರೋಹಿತ್‌ ಐಪಿಎಲ್‌ನಲ್ಲಿ 47ನೇ ಅರ್ಧಶತಕ ಬಾರಿಸಿದರು.

ಮೂರನೇ ವಿಕೆಟ್‌ಗೆ ರೋಹಿತ್ ಶರ್ಮಾ ಹಾಗೂ ಸೂರ್ಯಕುಮಾರ್ ಯಾದವ್ ಸೊಗಸಾದ ಜೊತೆಯಾಟವನ್ನು ನೀಡಿ ತಂಡಕ್ಕೆ ಆಧಾರವಾದರು. ಈ ಜೋಡಿ ಮಿಡ್ಲ್ ಓವರ್‌ಗಳಲ್ಲಿ ರನ್‌ಗಳನ್ನು ಕಲೆ ಹಾಕಿ ಅಬ್ಬರಿಸಿತು. ಈ ಜೋಡಿ 32 ಎಸೆತಗಳಲ್ಲಿ 53 ರನ್‌ ಸಿಡಿಸಿತು. ಈ ವೇಳೆ ಭರ್ಜರಿ ಟಚ್‌ನಲ್ಲಿ ಕಾಣಿಸಿಕೊಂಡಿದ್ದ ರೋಹಿತ್ ಶರ್ಮಾ ಔಟ್ ಆದರು. ಇವರು 46 ಎಸೆತಗಳಲ್ಲಿ 8 ಬೌಂಡರಿ, 3 ಸಿಕ್ಸರ್ ಸಿಡಿಸಿ ಔಟ್ ಆದರು.

ಸೂರ್ಯಕುಮಾರ್ ಯಾದವ್ ಅಜೇಯ 40 ರನ್‌ ಬಾರಿಸಿ ಗೆಲುವಿನಲ್ಲಿ ಮಿಂಚಿದರು.

ಕಳಪೆ ಆರಂಭ

ಟಾಸ್‌ ಸೋತರೂ ಮೊದಲು ಬ್ಯಾಟ್ ಮಾಡಿದ ಸನ್‌ರೈಸರ್ಸ್‌ ಹೈದರಾಬಾದ್ ತಂಡದ ಆರಂಭ ಕಳಪೆಯಾಗಿತ್ತು, ತಂಡದ ಸ್ಟಾರ್‌ ಆಟಗಾರರು ಪವರ್‌ ಪ್ಲೇನಲ್ಲಿ ರನ್‌ ಕಲೆ ಹಾಕುವಲ್ಲಿ ವಿಫಲರಾದರು. ಸನ್‌ ರೈಸರ್ಸ್‌ ತಂಡದ ಭರವಸೆಯ ಆಟಗಾರ ಟ್ರಾವಿಸ್ ಹೆಡ್‌ ದೊಡ್ಡ ಆಟವನ್ನು ಆಡಲೇ ಇಲ್ಲ. ಇವರು ಮೂರು ಎದುರಿಸಿ ರನ್‌ ಬಾರಿಸದೆ ಒತ್ತಡದಲ್ಲಿದ್ದಾಗ ಟ್ರೆಂಟ್‌ ಬೌಲ್ಟ್‌ ಎಸೆದ ಮೊದಲ ಓವರ್‌ನ ಎರಡನೇ ಎಸೆತದಲ್ಲಿ ಬಿಗ್ ಹಿಟ್‌ ಮಾಡಲು ಹೋಗಿ ಡಿಪ್‌ ಬ್ಯಾಕ್‌ವರ್ಡ್‌ ಪಾಯಿಂಟ್‌ನಲ್ಲಿ ಫೀಲ್ಡ್‌ ಮಾಡುತ್ತಿದ್ದ ನಮನ್ ಧೀರ್‌ ಓಡಿ ಬಂದ ಹಿಡಿದ ಕ್ಯಾಚ್‌ಗೆ ಬಲಿಯಾದರು.

ಪವರ್‌ ಕಟ್‌

ಸ್ಪೋಟಕ ಬ್ಯಾಟರ್‌ ಅಭಿಷೇಕ್ ಶರ್ಮಾ ಸಹ ತಮ್ಮ ಕ್ಷಮತೆಯನ್ನು ಸಾಬೀತು ಪಡಿಸುವಲ್ಲಿ ವಿಫಲರಾದರು. ಇವರು ಸಹ ಟ್ರೆಂಟ್‌ ಬೌಲ್ಟ್‌ ಎಸೆದ 127 ಕಿಲೋ ಮೀಟರ್‌ ವೇಗದ ಲೆಂತ್‌ ಬೌಲ್‌ನ್ನು ಬೌಂಡರಿ ಗೆರೆ ದಾಟಿಸುವಲ್ಲಿ ವಿಫಲರಾಗಿ ವಿಘ್ನೇಶ್ ಪುತ್ತೂರ್‌ ಅವರು ಹಿಡಿದ ಕ್ಯಾಚ್‌ಗೆ ಬಲಿಯಾದರು. ಇನ್ನು ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲು ಬಂದ ಇಶಾನ್‌ ಕಿಶನ್‌ ಕ್ರೀಡಾ ಸ್ಪೂರ್ತಿ ಮೆರೆಯಲು ಹೋಗಿ ಪೆವಿಲಿಯನ್‌ ಸೇರಿದರು. ದೀಪಕ್‌ ಚಹಾರ್‌ ಎಸೆತವನ್ನು ಎದುರಿಸುವಲ್ಲಿ ವಿಫಲರಾದಗ ಚೆಂಡು ಇವರ ಬ್ಯಾಟ್‌ನ ಸಮಿಪದಿಂದ ಪಾಸ್ ಆಯಿತು. ವಿಕೆಟ್‌ ಕೀಪರ್‌ ಕ್ಯಾಚ್ ಪಡೆದರು. ಇವರು ಪೆವಿಲಿಯನ್‌ತ್ತ ಹೆಜ್ಜೆ ಹಾಕಿದರು. ಆದರೆ ಸ್ನಿಕೋದಲ್ಲಿ ಇದು ನಾಟೌಟ್‌ ಎಂದು ತೋರಿಸಿತು.

ಭರವಸೆಯ ಬ್ಯಾಟರ್‌ ನಿತೀಶ್‌ ಕುಮಾರ್ ರೆಡ್ಡಿ ಹಾಗೂ ಅನಿಕೇತ್ ವರ್ಮಾ ಜವಾಬ್ದಾರಿಯನ್ನು ಮರೆತರು. ಪವರ್‌ ಪ್ಲೇನಲ್ಲಿ ಸನ್‌ರೈಸರ್ಸ್‌ ಹೈದರಾಬಾದ್ 24 ರನ್‌ ನೀಡುವಷ್ಟರಲ್ಲಿ 4 ವಿಕೆಟ್‌ ಕಳೆದುಕೊಂಡಿತು.

SRH vs MI IPL 2025 Toss Match Report Score batting and bowling performance kannada

ಕ್ಲಾಸೇನ್‌ ಅರ್ಧಶತಕ

ಸಂಕಷ್ಟದಲ್ಲಿದ್ದ ತಂಡಕ್ಕೆ ಹ್ಯಾನ್ರಿಕ್‌ ಕ್ಲಾಸೇನ್‌ ಹಾಗೂ ಅಭಿನವ್ ಮನೋಹರ್ ಆಧಾರವಾದರು. ಒತ್ತಡವನ್ನು ಮೆಟ್ಟಿನಿಂತು ಬ್ಯಾಟ್ ಮಾಡಿದ ಜೋಡಿ ಅಬ್ಬರಿಸಿತು. ಈ ಜೋಡಿ ಸನ್‌ರೈಸರ್ಸ್‌ ಹೈದರಾಬಾದ್ ಸ್ಪರ್ಧಾತ್ಮಕ ಮೊತ್ತವನ್ನು ಕಲೆ ಹಾಕುವಲ್ಲಿ ಸಫಲವಾಯಿತು. ಇನ್ನು ಅಭಿನವ್‌ ಮನೋಹರ್‌ ಹಾಗೂ ಹ್ಯಾನ್ರಿಕ್‌ ಕ್ಲಾಸೇನ್‌ ಜೋಡಿ 10 ಓವರ್‌ ವಿಕೆಟ್‌ ಬೀಳದಂತೆ ಕಾಯ್ದುಕೊಂಡು ಬ್ಯಾಟ್ ಮಾಡಿತು. ಈ ಜೋಡಿ 63 ಎಸೆತಗಳಲ್ಲಿ 99 ರನ್‌ ಸೇರಿಸಿತು.

ಹ್ಯಾನಿಕ್‌ ಕ್ಲಾಸೇನ್‌ ತಮ್ಮ ನೈಜ್ಯ ಆಟವನ್ನು ಆಡಿದರು. ಇವರು 44 ಎಸೆತಗಳಲ್ಲಿ 9 ಬೌಂಡರಿ, 2 ಸಿಕ್ಸರ್ ನೆರವಿನಿಂದ 71 ರನ್‌ ಬಾರಿಸಿದರು. ಕನ್ನಡಿಗ ಅಭಿನವ್ ಮನೋಹರ್ 37 ಎಸೆತಗಳಲ್ಲಿ 2 ಬೌಂಡರಿ, 3 ಸಿಕ್ಸರ್ ನೆರವಿನಿಂದ 43 ರನ್‌ ಬಾರಿಸಿ ಔಟ್ ಆದರು. ಅಂತಿಮವಾಗಿ ಸನ್‌ರೈಸರ್ಸ್‌ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 143 ರನ್‌ ಸೇರಿಸಿತು.

ಟ್ರೆಂಟ್‌ 4 ವಿಕೆಟ್‌

ಮುಂಬೈ ಇಂಡಿಯನ್ಸ್ ತಂಡದ ವೇಗದ ಬೌಲರ್‌ ಟ್ರೆಂಟ್‌ ಬೌಲ್ಟ್‌ ಅಮೋಘ ಬೌಲಿಂಗ್ ನಡೆಸಿದರು. ಇವರು 4 ಓವರ್ ಬೌಲಿಂಗ್ ಮಾಡಿ ಆರಂಭದಲ್ಲಿ ಟ್ರಾವಿಸ್‌ ಹೆಡ್‌, ಅಭಿಷೇಕ್‌ ಶರ್ಮಾ ಅವರನ್ನು ಔಟ್ ಮಾಡಿ ಸನ್‌ ಬ್ಯಾಟರ್‌ಗಳಿಗೆ ಕಾಟ ನೀಡಿದ್ದರು. ಬಳಿಕ ಕೊನೆಯ ಓವರ್‌ನಲ್ಲಿ ಅಭಿನವ್ ಮನೋಹರ್, ಪ್ಯಾಟ್‌ ಕಮಿನ್ಸ್‌ ಅವರ ವಿಕೆಟ್‌ ಪಡೆದು ಅಬ್ಬರಿಸಿದರು. ಉಳಿದಂತೆ ದೀಪಕ್‌ ಚಾಹರ್‌ 2 ವಿಕೆಟ್‌ ಪಡೆದರು.

Story first published: Wednesday, April 23, 2025, 21:18 [IST]
Other articles published on Apr 23, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+