For Quick Alerts
ALLOW NOTIFICATIONS  
For Daily Alerts
 

SRH vs PBKS IPL 2024: ಪಂಜಾಬ್‌ ಬ್ಯಾಟರ್‌ಗಳ ಅಬ್ಬರ; ಎಸ್‌ಆರ್‌ಹೆಚ್‌ಗೆ ಸವಾಲಿನ ಗುರಿ

ಮೇ 19 ಭಾನುವಾರ, ಹೈದರಾಬಾದ್‌ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ 2024ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌(ಐಪಿಎಲ್‌)ನ 69ನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಹೆಚ್‌) ವಿರುದ್ಧ ಪಂಜಾಬ್‌ ಕಿಂಗ್ಸ್‌ (ಪಿಬಿಕೆಎಸ್‌) ಸವಾಲಿನ ಗುರಿ ಕಲೆಹಾಕಿದೆ.

ಹೈದರಾಬಾದ್‌ ಬೌಲಿಂಗ್‌ ದಾಳಿಯನ್ನು ದಿಟ್ಟವಾಗಿ ಎದುರಿಸಿದ ಪ್ರಭಾಸಿಮ್ರಾನ್ ಸಿಂಗ್, ಅಥರ್ವ ಟೈಡೆ, ರಿಲೀ ರೊಸೊವ್ ಸ್ಪೋಟಕ ಬ್ಯಾಟಿಂಗ್ ಮಾಡಿದರು. ಪರಿಣಾಮ ಪಂಜಾಬ್‌ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 214 ರನ್‌ ಗಳಿಸಿದೆ. ಹೀಗಾಗಿ ಎಸ್‌ಆರ್‌ಹೆಚ್‌ ಗೆಲುವಿಗೆ 215 ರನ್‌ಗಳ ಅವಶ್ಯಕತೆಯಿದೆ.

SRH vs PBKS IPL 2024 Sunrisers Hyderabad vs Punjab Kings First innings IPL 2024 Match

ಟಾಸ್‌ ಗೆದ್ದು ಬ್ಯಾಟಿಂಗ್‌ ಆರಂಭಿಸಿದ ಪಂಜಾಬ್‌ ಪರ ಪ್ರಭಾಸಿಮ್ರಾನ್ ಸಿಂಗ್ ಮತ್ತು ಅಥರ್ವ ಟೈಡೆ ಉತ್ತಮ ಅಡಿಪಾಯ ಹಾಕಿಕೊಟ್ಟರು. ಮೊದಲ ವಿಕೆಟ್‌ಗೆ ಈ ಜೋಡಿ 97 ರನ್‌ಗಳ ಜೊತೆಯಾಟವಾಡಿತು.

ಭರ್ಜರಿ ಬ್ಯಾಟಿಂಗ್‌ ಮಾಡಿದ ಆರಂಭಿಕ ಅಥರ್ವ ಟೈಡೆ 27 ಎಸೆತಗಳಲ್ಲಿ 2 ಸಿಕ್ಸರ್‌ ಹಾಗು 5 ಬೌಂಡರಿ ಮೂಲಕ 46 ರನ್‌ ಗಳಿಸಿ ಟಿ ನಟರಾಜನ್‌ ಬೌಲಿಂಗ್‌ನಲ್ಲಿ ವಿಕೆಟ್‌ ಕಳೆದುಕೊಂಡರು.

ಮೂರನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದ ರಿಲೀ ರೊಸೊವ್ ಮತ್ತು ಪ್ರಭಾಸಿಮ್ರಾನ್ ಸಿಂಗ್ ಒಂದಾಗಿ ಅದ್ಭುತ ಇನ್ನಿಂಗ್ಸ್‌ ಕಟ್ಟಿದರು. ಹೈದರಾಬಾದ್‌ ಬೌಲರ್ಸ್‌ ಬೆಂಡೆತ್ತಿದ ಈ ಜೋಡಿ 54 ರನ್‌ ಜೊತೆಯಾಟವಾಡಿದರು.

ಸ್ಪೋಟಕ ಬ್ಯಾಟಿಂಗ್‌ ಮಾಡಿದ ಪ್ರಭಾಸಿಮ್ರಾನ್ ಸಿಂಗ್ 45 ಎಸೆತಗಳಲ್ಲಿ 4 ಸಿಕ್ಸರ್‌ ಮತ್ತು 7 ಬೌಂಡರಿಯೊಂದಿಗೆ 71 ರನ್‌ ಗಳಿಸಿ ವಿಜಯಕಾಂತ್ ವ್ಯಾಸಕಾಂತ್ ಬೌಲಿಂಗ್‌ನಲ್ಲಿ ಔಟ್‌ ಆದರು. ಬಳಿಕ ಬಂದ ಶಶಾಂಕ್‌ ಸಿಂಗ್‌ (2) ದುರದೃಷ್ಟಕರ ರನ್‌ ಔಟ್‌ಗೆ ಬಲಿಯಾದರು.

ಮತ್ತೊಂದೆಡೆ ಸಿಡಿಲಬ್ಬರದ ಬ್ಯಾಟಿಂಗ್‌ ಮಾಡಿದ ರಿಲೀ ರೊಸೊವ್‌ ಕೇವಲ 24 ಎಸೆತಗಳಲ್ಲಿ 4 ಸಿಕ್ಸರ್‌ ಹಾಗು 3 ಬೌಂಡರಿ ನೆರವಿನಿಂದ (49) ಅರ್ಧಶತಕ ವಂಚಿತರಾಗಿ ಪ್ಯಾಟ್ ಕಮಿನ್ಸ್ ಬೌಲಿಂಗ್‌ ವಿಕೆಟ್‌ ಕಳೆದುಕೊಂಡರು.

ನಂತರ ಅಶುತೋಷ್ ಶರ್ಮಾ (2) ಕೂಡ ಟಿ ನಟರಾಜನ್‌ ಅವರಿಗೆ ವಿಕೆಟ್‌ ಒಪ್ಪಿಸಿದರು. ಕೊನೆಯಲ್ಲಿ ನಾಯಕ ಜಿತೇಶ್‌ ಶರ್ಮಾ ಅಜೇಯ 32 ಮತ್ತು ಶಿವಂ ಸಿಂಗ್‌ 2 ರನ್‌ ಗಳಿಸಿದರು.

ಹೈದರಾಬಾದ್‌ ಪರ ಟಿ ನಟರಾಜನ್ 2 ವಿಕೆಟ್‌ ಪಡೆದುಕೊಂಡರೆ, ವಿಜಯಕಾಂತ್ ವ್ಯಾಸಕಾಂತ್ ಮತ್ತು ಪ್ಯಾಟ್ ಕಮಿನ್ಸ್ 1 ವಿಕೆಟ್‌ಗೆ ತೃಪ್ತಿಪಟ್ಟರು.

Story first published: Sunday, May 19, 2024, 17:24 [IST]
Other articles published on May 19, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+