SRH vs PBKS IPL 2024: ಹೈದರಾಬಾದ್-ಪಂಜಾಬ್ ಬಲಾಬಲ ವರದಿ; ಉಭಯ ತಂಡಗಳಿಗೆ ಲೀಗ್ ಹಂತದ ಕೊನೆಯ ಮ್ಯಾಚ್
ಮೇ 19 ಭಾನುವಾರ, ಐಪಿಎಲ್ 2024ರ ಲೀಗ್ ಹಂತದ ತಮ್ಮ ಕೊನೆಯ ಪಂದ್ಯದಲ್ಲಿ ಪ್ಲೇ ಆಫ್‌ಗೆ ಆರ್ಹತೆ ಪಡೆದಿರುವ ಸನ್ ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಹೆಚ್) ಮತ್ತು ಟೂರ್ನಿನಿಂದ ಹೊರ ಬಿದ್ದಿರುವ ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ತಂಡಗಳು ಮುಖಾಮುಖಿಯಾಗಿವೆ.
ಇಂದು ಉಭಯ ತಂಡಗಳ ಪಂದ್ಯ ಹೈದರಾಬಾದ್‌ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಮಧ್ಯಾಹ್ನ 3.30ಕ್ಕೆ ಆರಂಭವಾಗಲಿದೆ.
ಈ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡದಲ್ಲಿ ದೊಡ್ಡ ಬದಲಾವಣೆ ಕಾಣಲಿದೆ.

ಸ್ಯಾಮ್ ಕುರ್ರಾನ್ ತಮ್ಮ ದೇಶಕ್ಕೆ ತೆರಳಿರುವ ಕಾರಣ ಯುವ ವಿಕೆಟ್ ಕೀಪರ್ ಮತ್ತು ಬ್ಯಾಟರ್ ಜಿತೇಶ್ ಶರ್ಮಾ ತಂಡವನ್ನು ಮುನ್ನಡೆಸಲಿದ್ದಾರೆ. ಇತ್ತ ಎಂದಿನಂತೆ ಪ್ಯಾಟ್ ಕಮ್ಮಿನ್ಸ್ ಅವರು ಹೈದರಾಬಾದ್ ತಂಡದ ನಾಯಕತ್ವ ವಹಿಸಲಿದ್ದಾರೆ.
ಈ ಋತುವಿನಲ್ಲಿ ಹೈದರಾಬಾದ್ ಇದುವರೆಗೆ 13 ಪಂದ್ಯಗಳನ್ನು ಆಡಿದ್ದು, 7 ರಲ್ಲಿ ಗೆಲುವು, 5 ರಲ್ಲಿ ಸೋಲು ಕಂಡಿದೆ. ಪ್ರಸ್ತುತ ಎಸ್‌ಆರ್‌ಹೆಚ್ 15 ಅಂಕಗಳನ್ನು ಹೊಂದಿದ್ದು ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಪಂಜಾಬ್ ಕಿಂಗ್ಸ್ 13 ಪಂದ್ಯಗಳನ್ನು ಆಡಿದೆ. 5 ಪಂದ್ಯ ಗೆದ್ದು 8 ಸೋಲು ಕಂಡಿದೆ. ಇದರೊಂದಿಗೆ 10 ಅಂಕ ಗಳಿಸಿ ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದ್ದಾರೆ.
ಎಸ್‌ಆರ್‌ಹೆಚ್ vs ಪಿಬಿಕೆಎಸ್ ಹೆಡ್ ಟು ಹೆಟ್
ಎಸ್‌ಆರ್‌ಹೆಚ್ ಮತ್ತು ಪಿಬಿಕೆಎಸ್ ತಂಡಗಳು ಇಲ್ಲಿಯವರೆಗೆ ಒಟ್ಟು 22 ಪಂದ್ಯಗಳಲ್ಲಿ ಸೆಣಸಾಡಿವೆ. ಈ ಪೈಕಿ ಎಸ್‌ಆರ್‌ಹೆಚ್ 15 ಪಂದ್ಯಗಳನ್ನು ಗೆದ್ದಿದೆ. ಪಂಜಾಬ್ 7 ಪಂದ್ಯಗಳನ್ನು ಗೆದ್ದಿದೆ. ಈ ಎರಡು ತಂಡಗಳ ನಡುವೆ ಕಳೆದ 5 ಪಂದ್ಯಗಳಲ್ಲಿ ಹೈದರಾಬಾದ್ 3 ಮತ್ತು ಪಂಜಾಬ್ 2 ಪಂದ್ಯಗಳನ್ನು ಗೆದ್ದಿದೆ.
ಉಭಯ ತಂಡಗಳ ನಡುವೆ ಈ ಋತುವಿನಲ್ಲಿ ಮೊದಲ ಪಂದ್ಯವು ಏಪ್ರಿಲ್ 9 ರಂದು ನಡೆದಿತ್ತು. ಈ ಪಂದ್ಯದಲ್ಲಿ ಹೈದರಾಬಾದ್ ತವರಿನಲ್ಲಿ ಪಂಜಾಬ್ ಅನ್ನು 2 ರನ್‌ಗಳಿಂದ ಸೋಲಿಸಿತು.
ಎಸ್‌ಆರ್‌ಹೆಚ್ vs ಪಿಬಿಕೆಎಸ್ ಪಂದ್ಯದ ಟಿವಿ, ಲೈವ್ ಸ್ಟ್ರೀಮಿಂಗ್ ವಿವರ
ಸನ್ ರೈಸರ್ಸ್ ಹೈದರಾಬಾದ್ ಮತ್ತು ಪಂಜಾಬ್ ಕಿಂಗ್ಸ್ ನಡುವಿನ ಐಪಿಎಲ್ 2024ರ ರೋಚಕ ಪಂದ್ಯವನ್ನು ಭಾರತದಲ್ಲಿ ಟಿವಿಯಲ್ಲಿ ಸ್ಟಾರ್ ಸ್ಪೋರ್ಟ್ಸ್ ಚಾನೆಲ್‌ನಲ್ಲಿ ನೇರಪ್ರಸಾರ ಮಾಡಲಿದ್ದರೆ, ಮೊಬೈಲ್‌ನಲ್ಲಿ ಜಿಯೋಸಿನಿಮಾ ಅಪ್ಲಿಕೇಶನ್‌ನಲ್ಲಿ ಲೈವ್ ಸ್ಟ್ರೀಮಿಂಗ್ ಆಗಲಿದೆ.
ಎಸ್‌ಆರ್‌ಹೆಚ್ vs ಪಿಬಿಕೆಎಸ್ ಆಡುವ 11ರ ಬಳಗ
ಸನ್ ರೈಸರ್ಸ್ ಹೈದರಾಬಾದ್ ತಂಡ: ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ, ಐಡೆನ್ ಮಾರ್ಕ್ರಾಮ್, ಹೆನ್ರಿಚ್ ಕ್ಲಾಸೆನ್ (ವಿ.ಕೀ), ನಿತೀಶ್ ಕುಮಾರ್ ರೆಡ್ಡಿ, ಅಬ್ದುಲ್ ಸಮದ್, ಶಹಬಾಜ್ ಅಹ್ಮದ್, ಪ್ಯಾಟ್ ಕಮಿನ್ಸ್ (ನಾಯಕ), ಭುವನೇಶ್ವರ್ ಕುಮಾರ್, ಮಯಾಂಕ್ ಮಾರ್ಕಂಡೆ, ಟಿ ನಟರಾಜನ್.
ಪಂಜಾಬ್ ಕಿಂಗ್ಸ್ ತಂಡ: ಪ್ರಭಾಸಿಮ್ರಾನ್ ಸಿಂಗ್, ರಿಲೆ ರಿಸೌ, ಅಥರ್ವ ತೈಡೆ, ಶಶಾಂಕ್ ಸಿಂಗ್, ಅಶುತೋಷ್ ಶರ್ಮಾ, ಜಿತೇಶ್ ಶರ್ಮಾ (ನಾಯಕ ಮತ್ತು ವಿ.ಕೀ), ಅರ್ಶ್ದೀಪ್ ಸಿಂಗ್, ಹರ್ಪ್ರೀತ್ ಬ್ರಾರ್ ರಾಹುಲ್ ಚಾಹರ್, ನಾಥನ್ ಎಲ್ಲಿಸ್, ಹರ್ಷಲ್ ಪಟೇಲ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications