SRH vs PBKS IPL 2024: ಸೋಲಿನೊಂದಿಗೆ ಲೀಗ್ ಮುಗಿಸಿದ ಪಂಜಾಬ್; ಎಸ್‌ಆರ್‌ಹೆಚ್‌ಗೆ ಭರ್ಜರಿ ಜಯ
ಮೇ 19 ಭಾನುವಾರ, ಹೈದರಾಬಾದ್‌ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ 2024ರ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್)ನ 69ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ಎದುರು ಸನ್ ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಹೆಚ್) ಭರ್ಜರಿ ಗೆಲುವು ಕಂಡಿದೆ.
ಹೈದರಾಬಾದ್ ಪರ ಅಭಿಷೇಕ್ ಶರ್ಮಾ ಮತ್ತು ಹೆನ್ರಿಚ್ ಕ್ಲಾಸೆನ್ ಸ್ಪೋಟಕ ಬ್ಯಾಟಿಂಗ್ ಪ್ರದರ್ಶನ ಮಾಡಿದರು. ಎಸ್‌ಆರ್‌ಹೆಚ್ 6 ವಿಕೆಟ್ ಕಳದುಕೊಂಡು 19.1 ಓವರ್‌ಗಳಲ್ಲಿ ಪಂಜಾಬ್ ನೀಡಿದ 215 ರನ್‌ಗಳ ಗುರಿಯನ್ನು ಮುಟ್ಟಿತ್ತು.

ಎರಡನೇ ಇನ್ನಿಂಗ್ಸ್ ಶುರು ಮಾಡಿದ ಎಸ್‌ಆರ್‌ಹೆಚ್ ಆರಂಭಿಕ ಎಡಗೈ ಬ್ಯಾಟರ್ ಟ್ರಾವಿಸ್ ಹೆಡ್ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆದರೆ ಮೂರನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದ ರಾಹುಲ್ ತ್ರಿಪಾಠಿ ಮತ್ತು ಅಭಿಷೇಕ್ ಶರ್ಮಾ ಭರ್ಜರಿ ಆಟವಾಡಿದರು.
ಸಿಕ್ಕ ಅವಕಾಶ ಬಳಸಿಕೊಂಡು ಮಿಂಚಿದ ರಾಹುಲ್ ತ್ರಿಪಾಠಿ 18 ಎಸೆತಗಳಲ್ಲಿ 33 ರನ್ ಗಳಿಸಿ ಔಟ್ ಆದರು. ಅಭಿಷೇಕ್ ಶರ್ಮಾ ಬೌಂಡರಿ-ಸಿಕ್ಸರ್ ಹೊಡೆಯುವ ಮೂಲಕ ಪಂಜಾಬ್ ಬೌಲಿಂಗ್ ಅನ್ನು ಧೂಳಿಪಟ ಮಾಡಿದರು. ಕೇವಲ 28 ಎಸೆತಳಲ್ಲಿ 6 ಸಿಕ್ಸರ್ ಹಾಗು 5 ಬೌಂಡರಿ ನೆರವಿನಿಂದ 66 ರನ್ ಗಳಿಸಿದ ಅಭಿಷೇಕ್ ಶರ್ಮಾ ಔಟ್ ಆದರು.
ನಾಲ್ಕನೇ ಕ್ರಮಾಂಕದಲ್ಲಿ ಆಗಮಿಸಿದ ನಿತೀಶ್ ರೆಡ್ಡಿ ಕೂಡ 37 ರನ್ ಹೊಡೆದು ನಿರ್ಗಮಿಸಿದರು. ಈ ಹಂತ ಸಿಡಿದೆದ್ದ ಹೆನ್ರಿಚ್ ಕ್ಲಾಸೆನ್ ಅವರು ಪಂಜಾಬ್ ಬೌಲರ್ಸ್ ಅನ್ನು ತರಾಟೆಗೆ ತೆಗೆದುಕೊಂಡರು. ಹೆನ್ರಿಚ್ ಕ್ಲಾಸೆನ್ ಕೇವಲ 26 ಎಸೆತಗಳಲ್ಲಿ 42 ರನ್ ಹೊಡೆದು ಎಸ್‌ಆರ್‌ಹೆಚ್ ತಂಡವನ್ನು ಗೆಲುವಿನ ಸನಿಹ ಕರೆ ತಂದರು.
ಹೆನ್ರಿಚ್ ಕ್ಲಾಸೆನ್ ಔಟ್ ಆದ ಬಳಿಕ ಶಹಬಾಜ್ ಅಹ್ಮದ್ ಕೂಡ (3) ವಿಕೆಟ್ ಕಳೆದುಕೊಂಡರು. ಅಂತಿಮವಾಗಿ ಅಬ್ದುಲ್ ಸಮದ್ ಅಜೇಯ 11 ರನ್ ಮತ್ತು ಸನ್ವಿರ್ ಸಿಂಗ್ 6 ಗಳಿಸಿ ಎಸ್‌ಆರ್‌ಹೆಚ್‌ಗೆ ಗೆಲುವು ತಂದು ಕೊಟ್ಟರು.
ಪಂಜಾಬ್ ಪರ ಹರ್ಷಲ್ ಪಟೇಲ್ ಮತ್ತು ಅರ್ಷದೀಪ್ ಸಿಂಗ್ 2 ಕಬಳಿಸಿದರೆ, ಹರ್ಪ್ರೀತ್ ಬ್ರಾರ್ ಹಾಗು ಶಶಾಂಕ್ ಸಿಂಗ್ 1 ವಿಕೆಟ್ ಪಡೆದುಕೊಂಡರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications