SRH vs PBKS: ಪಂಜಾಬ್‌ಗೆ ಶಾಕ್ ನೀಡಿದ ಸನ್‌ರೈಸರ್ಸ್‌ಗೆ ಅಗ್ರಪಟ್ಟ: ಕಿಂಗ್ಸ್‌ಗೆ ಹ್ಯಾಟ್ರಿಕ್ ಸೋಲು
ಹೈದರಾಬಾದ್: ತವರಿನಲ್ಲಿ ಸಂಘಟಿತ ಆಟದ ಪ್ರದರ್ಶನ ನೀಡಿರುವ ಸನ್‌ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಎಚ್) 33 ರನ್‌ಗಳಿಂದ ಪಂಜಾಬ್ ಕಿಂಗ್ಸ್ ತಂಡವನ್ನು 19ನೇ ಆವೃತ್ತಿ ಇಂಡಿಯನ್ ಪ್ರೀಮಿಯರ್ ಲೀಗ್ ( ಐಪಿಎಲ್)ನ 49ನೇ ಪಂದ್ಯದಲ್ಲಿ ಸೋಲಿಸಿತು. ಈ ಮೂಲಕ ಸನ್ ತಂಡ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಬಡ್ತಿ ಪಡೆದಿದೆ. ಪಂಜಾಬ್ ಕಿಂಗ್ಸ್ ಈ ಲೀಗ್‌ನಲ್ಲಿ ಹ್ಯಾಟ್ರಿಕ್ ಸೋಲಿನ ಕಹಿಯನ್ನು ಕಂಡಿದೆ.
236 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಪಂಜಾಬ್ ಕಿಂಗ್ಸ್ ತಂಡದ ಆರಂಭ ಕಳಪೆಯಾಗಿತ್ತು. ಲೀಗ್ ಉದ್ದಕ್ಕೂ ಉತ್ತಮ ಲಯದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ಪ್ರಿಯಾಂಶ್ ಆರ್ಯ (1) ಪ್ಯಾಟ್ ಕಮಿನ್ಸ್ ಅವರ ಎಸೆತದಲ್ಲಿ ಡೀಪ್ ಸ್ಕ್ವೇರ್ ಲೆಗ್‌ನಲ್ಲಿ ಇಶಾನ್ ಮಲಿಂಗ್ ಹಿಡಿದ ಅಮೋಘ ಕ್ಯಾಚ್‌ಗೆ ಬಲಿಯಾದರು. ಭರವಸೆಯ ಆರಂಭಿಕ ಆಟಗಾರ ಪ್ರಭ್‌ಸಿಮ್ರನ್ ಸಿಂಗ್ (3) ಎರಡನೇ ಓವರ್‌ನ ಮೊದಲ ಎಸೆತದಲ್ಲಿ ನಿತೀಶ್ ಕುಮಾರ್ ರೆಡ್ಡಿ ಅವರಿಗೆ ವಿಕೆಟ್ ಒಪ್ಪಿಸಿದರು. ಚೇಸ್ ಮಾಡುವಾಗ ಅಮೋಘ ಬ್ಯಾಟಿಂಗ್ ನಡೆಸುತ್ತಿದ್ದ ನಾಯಕ ಶ್ರೇಯಸ್ ಅಯ್ಯರ್ ಹೈದರಾಬಾದ್ ವಿರುದ್ಧ ಒತ್ತಡವನ್ನು ಮೆಟ್ಟಿನಿಲ್ಲುವಲ್ಲಿ ವಿಫಲರಾದರು. ಪಂಜಾಬ್ ಪವರ್ ಪ್ಲೇನಲ್ಲಿ ರನ್ ಕಲೆ ಹಾಕುವ ಭರದಲ್ಲಿ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.

23 ರನ್‌ಗಳಿಗೆ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಪಂಜಾಬ್ ತಂಡಕ್ಕೆ ಮಾರ್ಕಸ್ ಸ್ಟೋಯ್ನಿಸ್ (28) ಹಾಗೂ ಕೂಪರ್ ಕಾನೋಲಿ ಜೋಡಿ 21 ಎಸೆತಗಳಲ್ಲಿ 40 ರನ್ ಸೇರಿಸಿತು. 5ನೇ ವಿಕೆಟ್‌ಗೆ ಸೂರ್ಯಾಂಶ್ ಶೆಡ್ಗೆ (25) ಹಾಗೂ ಕೂಪರ್ ಜೋಡಿ 47 ರನ್ ಸೇರಿಸಿತು. ಒಂದು ಬದಿಯಲ್ಲಿ ವಿಕೆಟ್‌ಗಳು ಬೀಳುತ್ತಿದ್ದರೂ ಸಹ ಇನ್ನೊಂದು ತುದಿಯಲ್ಲಿ ತಳವೂರಿದ್ದ ಕೂಪರ್ ಕಾನೋಲಿ ಕ್ಲಾಸಿಕ್ ಬ್ಯಾಟಿಂಗ್ ನಡೆಸಿದರು.
ಕಾನೋಲಿ ಶತಕದ ಅಬ್ಬರ
ಯುವ ಆಟಗಾರ ಕೂಪರ್ ಕಾನೋಲಿ ಸೋಲಿನಲ್ಲಿ ಮಿಂಚಿದರು. ಇವರು 59 ಎಸೆತಗಳಲ್ಲಿ 7 ಬೌಂಡರಿ, 8 ಸಿಕ್ಸರ್ ಸಹಾಯದಿಂದ ಅಜೇಯ 107 ರನ್ ಸಿಡಿಸಿದರು. ಇವರ ಭರ್ಜರಿ ಶತಕ ತಂಡದ ಗೆಲುವಿನಲ್ಲಿ ಸಹಾಯಕವಾಗದ ನೋವು ಯುವ ಆಟಗಾರನ ಮುಖದಲ್ಲಿ ಎದ್ದು ಕಾಣುತ್ತಿತ್ತು. ಅಂತಿಮವಾಗಿ ಪಂಜಾಬ್ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 202 ರನ್ ಸೇರಿಸಿ ಸೋಲು ಕಂಡಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಸನ್‌ರೈಸರ್ಸ್ ಹೈದರಾಬಾದ್ ತಂಡದ ಆರಂಭ ಭರ್ಜರಿಯಾಗಿತ್ತು. ಆರಂಭಿಕರಾದ ಅಭಿಷೇಕ್ ಶರ್ಮಾ (35 ರನ್, 13 ಎಸೆತ) ಮತ್ತು ಟ್ರಾವಿಸ್ ಹೆಡ್ (38 ರನ್, 19 ಎಸೆತ) ಕೇವಲ 3.3 ಓವರ್‌ಗಳಲ್ಲಿ 54 ರನ್ ಸೇರಿಸಿ ಸ್ಫೋಟಕ ಆರಂಭ ನೀಡಿದರು. ಪವರ್ ಪ್ಲೇ ಅಂತ್ಯಕ್ಕೆ ಹೈದರಾಬಾದ್ ತಂಡ 79 ರನ್ ಸೇರಿಸಿತು.
ಇಶಾನ್, ಕ್ಲಾಸೆನ್ ಜುಗಲ್‌ಬಂಧಿ
3ನೇ ವಿಕೆಟ್ ಜೊತೆಯಾದ ಇಶಾನ್ ಕಿಶನ್ ಹಾಗೂ ಹೆನ್ರಿಕ್ ಕ್ಲಾಸೆನ್ ಜೋಡಿ 88 ರನ್‌ಗಳ ಭರ್ಜರಿ ಕಾಣಿಕೆ ನೀಡಿತು. ಕಿಶನ್ 55 ರನ್ ಗಳಿಸಿ ಔಟಾದರೆ, ಅಮೋಘ ಫಾರ್ಮ್‌ನಲ್ಲಿರುವ ಕ್ಲಾಸೆನ್ ಈ ಆವೃತ್ತಿಯ 5ನೇ ಅರ್ಧಶತಕ (69 ರನ್) ಸಿಡಿಸಿ ಮಿಂಚಿದರು. ಈ ಮೂಲಕ ಐಪಿಎಲ್‌ನ ಎಲ್ಲಾ ತಂಡಗಳ ವಿರುದ್ಧ ಅರ್ಧಶತಕ ಬಾರಿಸಿದ ಸಾಧನೆ ಮಾಡಿದರು.

ಅಂತಿಮ ಹಂತದಲ್ಲಿ ನಿತೀಶ್ ಕುಮಾರ್ ರೆಡ್ಡಿ ಅಜೇಯ 29 ರನ್ ಗಳಿಸಿ ತಂಡದ ಮೊತ್ತವನ್ನು 230ರ ಗಡಿ ದಾಟಿಸಿದರು. ಪಂಜಾಬ್ ಪರ ಯುಜುವೇಂದ್ರ ಚಹಾಲ್ ಮತ್ತು ಅರ್ಷದೀಪ್ ಸಿಂಗ್ ತಲಾ ಒಂದು ವಿಕೆಟ್ ಪಡೆದು ಗಮನ ಸೆಳೆದರು. ಸನ್‌ರೈಸರ್ಸ್ ಹೈದರಾಬಾದ್ ತಂಡ, ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 235 ರನ್ ಸೇರಿಸಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications