ಹೈದರಾಬಾದ್ ಓಪನರ್ಸ್ ನಿಂದ ಆರ್‌ಸಿಬಿಗೆ ಖಡಕ್ ವಾರ್ನಿಂಗ್ : ಏನಿದು ಎಚ್ಚರಿಕೆ!
ಸನ್ ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಹೆಚ್) ತಂಡವು 2024ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ವಿಭಿನ್ನವಾಗಿ ಮೂಡಿಬಂದಿದೆ. ಹೊಸ ನಾಯಕ ಪ್ಯಾಟ್ ಕಮಿನ್ಸ್ ಆಗಮನದ ನಂತರ ಎಸ್‌ಆರ್‌ಹೆಚ್ ಪಾಳಯದಲ್ಲಿ ಉತ್ಸಾಹ ತುಂಬಿ ತುಳುಕುತ್ತಿದೆ.
ಅನುಭವಿ ಮತ್ತು ಯುವ ಆಟಗಾರ ಸಂಘಟಿತ ಪ್ರದರ್ಶನ ಎದುರಾಳಿ ತಂಡಗಳ ಗೆಲುವಿಗೆ ತಣ್ಣೀರು ಎರಚಿದಂತಾಗಿದೆ. ಅಷ್ಟರ ಮಟ್ಟಿಗೆ ಎಸ್‌ಆರ್‌ಹೆಚ್ ಆಟಗಾರರು ನಡುಕ ಹುಟ್ಟಿಸಿರುವುದು ಸುಳ್ಳಲ್ಲ. ಈಗಾಗಲೇ ಪ್ರಸ್ತುತ 17ನೇ ಆವೃತ್ತಿವೊಂದರಲ್ಲೆ ಎಸ್‌ಆರ್‌ಹೆಚ್ ಹಲವು ದಾಖಲೆಗಳನ್ನು ಬರೆದಿದೆ.

ಐಪಿಎಲ್ ಇತಿಹಾಸದಲ್ಲೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಕಲೆಹಾಕಿದ್ದ 263 ರನ್‌ಗಳ ಟಾರ್ಗೆಟ್ ದಾಖಲೆ ಅನ್ನು ಅದೇ ತಂಡದ ಎದುರು 287 ರನ್‌ಗಳನ್ನು ಹೊಡೆಯುವ ಮೂಲಕ ಎಸ್‌ಆರ್‌ಹೆಚ್ ಅಳಿಸಿ ಹಾಕಿದೆ. ಅಲ್ಲದೆ ಕಳೆದ ಪಂದ್ಯ ಡೆಲ್ಲಿ ಕ್ಯಾಪಿಟಲ್ಸ್ ಎದರು ಹೈದರಾಬಾದ್ ಓಪನರ್ಸ್‌ಗಳಾದ ಟ್ರಾವಿಸ್ ಹೆಡ್ ಮತ್ತು ಅಭಿಷೇಕ್ ಶರ್ಮಾ ನಂಬಲಾಗದ ಮತ್ತು ಹಿಂದೆಂದೂ ನೋಡಿರದ ಸಿಡಿಲಬ್ಬರ ಬ್ಯಾಟಿಂಗ್ ಮಾಡಿದ್ದರು.
ಇದರ ಫಲವಾಗಿ ಪವರ್ ಫ್ಲೇ ನಲ್ಲಿ ಅತಿ ಹೆಚ್ಚು (120) ರನ್‌ಗಳಿಸಿದ ತಂಡ ಎಂಬ ಕೀರ್ತಿಯನ್ನು ಈ ಜೋಡಿ ತಂದುಕೊಟ್ಟಿತ್ತು. ಜೊತೆಗೆ ಐಪಿಎಲ್‌ನಲ್ಲಿ 220ಕ್ಕೂ ಅಧಿಕ ರನ್‌ಗಳನ್ನು ಅತಿ ಹೆಚ್ಚು ಬಾರಿ ಹೊಡೆದ ತಂಡವಾಗಿಯೂ ಹೈದರಾಬಾದ್ ಹೊರಹೊಮ್ಮಿದೆ. ಮೂರು ಬಾರಿ 220ಕ್ಕೂ ಅಧಿಕ ರನ್‌ಗಳಿಸಿದ ಮುಂಬೈ ಮತ್ತು ಚೆನ್ನೈ ದಾಖಲೆಯನ್ನು ಎಸ್‌ಆರ್‌ಹೆಚ್ ಒಂದೇ ಆವೃತ್ತಿಯಲ್ಲಿ ಸರಿಗಟ್ಟಿರುವ ಮತ್ತೊಂದು ವಿಶೇಷವಾಗಿದೆ.
ಹೀಗೆ ಅದ್ಭುತವಾಗಿ ಆಡುತ್ತಿರುವ ಹೈದರಾಬಾದ್ ತಂಡ ಏಪ್ರಿಲ್ 25 ರಂದು ತವರಿನಲ್ಲಿ ನಡೆಯಲಿರುವ ಪಂದ್ಯದಲ್ಲಿ ಮತ್ತೆ ಆರ್‌ಸಿಬಿ ಎದುರು ಗೆಲುವಿನ ನಿರೀಕ್ಷೆಯಲ್ಲಿದೆ. ಈ ಪಂದ್ಯಕ್ಕೂ ಮುನ್ನ ಆರ್‌ಸಿಬಿಗೆ, ಎಸ್‌ಆರ್‌ಹೆಚ್ ಆರಂಭಿಕರಾದ ಟ್ರಾವಿಸ್ ಹೆಡ್ ಮತ್ತು ಅಭಿಷೇಕ್ ಶರ್ಮಾ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ.
ಐಪಿಎಲ್‌ನಲ್ಲಿ ಮತ್ತೊಮ್ಮೆ ರನ್ ಮಳೆ ಸುರಿಸುವ ಮೂಲಕ ಆರ್‌ಸಿಬಿ ವಿರುದ್ಧ 300 ರನ್‌ಗಳನ್ನು ಹೊಡೆಯುವ ಲೆಕ್ಕಚಾರದಲ್ಲಿ ಟ್ರಾವಿಸ್ ಹೆಡ್ ಮತ್ತು ಅಭಿಷೇಕ್ ಶರ್ಮಾ ಜೋಡಿ ಈ ಖಡಕ್ ಎಚ್ಚರಿಕೆ ನೀಡಿದೆ. ದುರ್ಬಲ ಬೌಲಿಂಗ್ ವಿಭಾಗ ಹೊಂದಿರುವ ಆರ್‌ಸಿಬಿ ಹೇಗೆ ಈ ಎಚ್ಚರಿಕೆಯನ್ನು ಎದುರಿಸುತ್ತದೆ ಎಂಬುದು ಕ್ರಿಕೆಟ್ ಗಲ್ಲಿಯಲ್ಲಿ ಚರ್ಚೆಗೆ ವೇದಿಕೆ ಮಾಡಿಕೊಟ್ಟಿದೆ. ಏಕೆಂದರೆ ಎಸ್‌ಆರ್‌ಹೆಚ್ ವಿರುದ್ಧ ಕಳೆದ ಪಂದ್ಯದಲ್ಲಿ ಆರ್‌ಸಿಬಿ 287 ಹೊಡೆಸಿಕೊಂಡ ತಂಡ ಎಂಬ ಅಪಕೀರ್ತಿಗೆ ಗುರಿಯಾಗಿದೆ.
ಹೈದರಾಬಾದ್ ಗೆಲುವಿನ ಅಂಕಿ-ಅಂಶ :
ಸನ್ ರೈಸರ್ಸ್ ಹೈದರಾಬಾದ್ ಆಡಿರುವ ಏಳು ಪಂದ್ಯಗಳ ಪೈಕಿ 5 ರಲ್ಲಿ ಅಮೋಘವಾದ ಜಯ ಗಳಿಸಿದೆ. ಜೊತೆಗೆ ಎದುರಾಳಿ ತಂಡಗಳ ಎದೆಯಲ್ಲಿ ಭಯದ ವಾತಾವರಣ ನಿರ್ಮಿಸಿದೆ. ಈ ಮೂಲಕ ಪಾಯಿಂಟ್ ಟೇಬಲ್‌ನಲ್ಲಿ 10 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ಮುಂಬರುವ ಪಂದ್ಯಗಳಲ್ಲಿ ಎಸ್‌ಆರ್‌ಹೆಚ್ ಆರು ಅಂಕಗಳು ಗಳಿಸಿದರೆ ಫ್ಲೇ ಆಪ್ ಟಿಕೆಟ್ ಕಾಯ್ದಿರಿಸಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications