Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

SRH vs RCB: ಹೆಡ್‌ ಜೊತೆಗೆ ವಿರಾಟ್‌ ಕೊಹ್ಲಿ ಹ್ಯಾಂಡ್‌ಶೇಕ್ ಮಾಡದಿರಲು ಕಾರಣವೇನು?

ಶುಕ್ರವಾರ ನಡೆದ 19ನೇ ಆವೃತ್ತಿ ಐಪಿಎಲ್‌ನ 67ನೇ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್ ತಂಡ ಭರ್ಜರಿ ಪ್ರದರ್ಶನ ನೀಡಿದೆ. ಲೀಗ್‌ ಹಂತದ ಕೊನೆಯ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲವಾಗಿದ್ದು, 55 ರನ್‌ಗಳಿಂದ ಸೋಲು ಕಂಡಿದೆ. ಈ ಪಂದ್ಯದ ವೇಳೆ ಆರ್‌ಸಿಬಿ ಆಟಗಾರ ವಿರಾಟ್ ಕೊಹ್ಲಿ ಮತ್ತು ಟ್ರಾವಿಸ್ ಹೆಡ್ ನಡುವಿನ ವಾಗ್ವಾದ ಎಲ್ಲರ ಗಮನ ಸೆಳೆಯಿತು.

ಕೊಹ್ಲಿ ಟ್ರಾವಿಸ್ ಹೆಡ್‌ಗೆ ಬೌಲಿಂಗ್ ಮಾಡಿ ಎಂದರು. ಕೊಹ್ಲಿ ನಾನ್-ಸ್ಟ್ರೈಕರ್ ಎಂಡ್‌ನಲ್ಲಿದ್ದರು, ಆದರೆ ವೆಂಕಟೇಶ್ ಅಯ್ಯರ್ ಶಿವಾಂಗ್ ಕುಮಾರ್ ವಿರುದ್ಧ ನಿರಂತರವಾಗಿ ಬೌಂಡರಿಗಳನ್ನು ಬಾರಿಸುತ್ತಿದ್ದರು. ವಿರಾಟ್ ಕೊಹ್ಲಿ ಪದೇ ಪದೇ ಟ್ರಾವಿಸ್ ಹೆಡ್‌ ಜೊತೆಗೆ ಮಾತುಕತೆ ನಡೆಸುತ್ತಿರುವುದು ಕಂಡು ಬಂದಿತು. ಕೊಹ್ಲಿ ಟ್ರಾವಿಸ್ ಹೆಡ್‌ಗೆ ಏನು ಹೇಳಿದರು ಎಂಬುದು ಸ್ಪಷ್ಟವಾಗಿಲ್ಲ.

SRH vs RCB

ಪಂದ್ಯದಲ್ಲಿ ಕಿಂಗ್ ಕೊಹ್ಲಿ 15 ರನ್‌ ಬಾರಿಸಿದ್ದಾಗ ಔಟ್ ಆದರು. ಆಗ ಹೆಡ್ ಸ್ನೇಹಿತ, ನಾನು ಬೌಲಿಂಗ್ ಮಾಡಲು ಬರುವ ಮೊದಲೇ ನೀವು ಔಟಾಗಿದ್ದೀರಿ." ಈ ತಿರುಗೇಟು ಆರ್‌ಸಿಬಿ ಸ್ಟಾರ್ ಆಟಗಾರನನ್ನು ಇನ್ನಷ್ಟು ಕೆರಳಿಸಿತು.

ಪಂದ್ಯದ ನಂತರ ಉಭಯ ತಂಡಗಳು ಸಾಂಪ್ರದಾಯಿಕವಾಗಿ ಹ್ಯಾಂಡ್‌ಶೇಕ್ ವೇಳೆಯೂ ಕಾಣಿಸಿಕೊಂಡಿತು. ಟ್ರಾವಿಸ್ ಹೆಡ್ ಹಸ್ತಲಾಘವಕ್ಕೆ ಬಂದಾಗ, ಕೊಹ್ಲಿ ಅವರನ್ನು ಕಡೆಗಣಿಸಿ ಮುಂದೆ ಸಾಗಿದರು. ಆದರೆ, ನಾಯಕ ಪ್ಯಾಟ್ ಕಮಿನ್ಸ್ ಸೇರಿದಂತೆ ಇತರೆ ಎಸ್‌ಆರ್‌ಹೆಚ್ ಆಟಗಾರರಿಗೆ ಕೊಹ್ಲಿ ಶುಭಾಶಯ ಕೋರಿದರು.

ಪಂದ್ಯದ ಫಲಿತಾಂಶ

ಲೀಗ್‌ ಹಂತದ ಕೊನೆಯ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಸನ್‌ರೈಸರ್ಸ್ ಹೈದರಾಬಾದ್ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 255 ರನ್‌ ಸೇರಿಸಿತು. ಈ ವೇಳೆ ತಂಡದ ಟಾಪ್‌ ಆರ್ಡರ್‌ ಬ್ಯಾಟರ್‌ಗಳು ಅಬ್ಬರದ ಬ್ಯಾಟಿಂಗ್ ನಡೆಸಿದರು. ಟ್ರಾವಿಸ್‌ ಹೆಡ್‌ (26) ಸ್ಫೋಟಕ ಆರಂಭ ನೀಡಿ ಔಟ್ ಆದರು. ಅಭಿಷೇಕ್‌ ಶರ್ಮಾ 254ರ ಸ್ಟ್ರೈಕ್‌ ರೇಟ್‌ನಲ್ಲಿ 56 ರನ್‌ ಬಾರಿಸಿದರೆ, ಇಶಾನ್‌ ಕಿಶನ್‌ 46 ಎಸೆತಗಳಲ್ಲಿ 79 ರನ್‌ ಬಾರಿಸಿ ಔಟ್ ಆದರು. ಮಧ್ಯಮ ಕ್ರಮಾಂಕದ ಸ್ಟಾರ್ ಆಟಗಾರ ಹೆನ್ರಿಕ್‌ ಕ್ಲಾಸೆನ್‌ 51 ರನ್ ಬಾರಿಸಿದರು. ಈ ವೇಳೆ ಇವರ ಸ್ಟ್ರೈಕ್‌ ರೇಟ್‌ 212 ಆಗಿತ್ತು. ಗುರಿಯನ್ನು ಬೆನ್ನಟ್ಟಿದ ಆರ್‌ಸಿಬಿ ತಂಡದ ಆರಂಭಿಕ ವೆಂಕಟೇಶ್‌ ಅಯ್ಯರ್ 44, ದೇವದತ್ ಪಡಿಕ್ಕಲ್ 21, ರಜತ್ ಪಾಟಿದಾರ್‌ 56, ಕೃನಾಲ್ ಪಾಂಡ್ಯ 41 ರನ್‌ ಬಾರಿಸಿದರು. ಅಂತಿಮವಾಗಿ ಆರ್‌ಸಿಬಿ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 200 ರನ್‌ ಸೇರಿಸಿ ಸೋಲು ಕಂಡಿತು.

Story first published: Saturday, May 23, 2026, 11:56 [IST]
Other articles published on May 23, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+