SRH vs RCB: ಕೊಹ್ಲಿ ಸಂಪೂರ್ಣಗೊಳಿಸುತ್ತಾರಾ ಬೃಹತ್ ಮೈಲಿಗಲ್ಲು?: ಪ್ರಮುಖ ದಾಖಲೆಗಳ ಮೇಲೆ ದಿಗ್ಗಜರ ಕಣ್ಣು
ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಫಾಫ್ ಡು ಪ್ಲೆಸಿಸ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇಂದು ಸೆಣೆಸಾಟ ನಡೆಸಲಿದೆ. ಈ ಪಂದ್ಯದಲ್ಲಿ ಆರ್‌ಸಿಬಿ ತಂಡಕ್ಕೆ ಅತ್ಯಂತ ಮಹತ್ವದ್ದಾಗಿದ್ದು ಟೂರ್ನಿಯಲ್ಲಿ ಪ್ಲೇಆಫ್‌ಗೆ ಪ್ರವೇಶಿಸಲು ನಿರ್ಣಾಯಕವೆನಿಸಿದೆ. ಅಲ್ಲದೆ ಇಂದಿನ ಫಲಿತಾಂಶ ಉಳಿದ ತಂಡಗಳ ಮೇಲೆಯೂ ನೇರವಾಗಿ ಪರಿಣಾಮ ಬೀಡುವ ಕಾರಣ ಕುತೂಹಲ ಮೂಡಿಸಿದೆ.
ಇನ್ನು ಹೈದರಾಬಾದ್‌ನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಕೆಲ ಪ್ರಮುಖ ಮೈಲಿಗಲ್ಲುಗಳ ಮೇಲೆ ದಿಗ್ಗಜ ಆಟಗಾರರು ಕಣ್ಣಿಟ್ಟಿದ್ದಾರೆ. ಆರ್‌ಸಿಬಿ ನಾಯಕ ಫಾಫ್ ಡು ಪ್ಲೆಸುಸ್, ಮಾಜಿ ನಾಯಕ ವಿರಾಟ್ ಕೊಹ್ಲಿ ದೊಡ್ಡ ಮೈಲಿಗಲ್ಲು ಸಾಧಿಸುವ ನಿರೀಕ್ಷೆಯಲ್ಲಿದ್ದಾರೆ. ಇನ್ನು ಸನ್‌ರೈಸರ್ಸ್ ಹೈದರಾಬಾದ್ ತಂಡದ ವೇಗಿ ಭುವನೇಶ್ವರ್ ಕುಮಾರ್ ಕೂಡ ಪ್ರಮುಖ ಮೈಲಿಗಲ್ಲೊಂದನ್ನು ದಾಟುವ ಅವಕಾಶ ಹೊಂದಿದ್ದಾರೆ.

ಆರ್‌ಸಿಬಿ ಪರ ಪ್ರಮುಖ ಮೈಲಿಗಲ್ಲು ದಾಟುವ ವಿಶ್ವಾಸದಲ್ಲಿ ಫಾಫ್
ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಫಾಫ್ ಡು ಪ್ಲೆಸಿಸ್ ಅದ್ಭುತ ಫಾರ್ಮ್‌ನಲ್ಲಿದ್ದು ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಇದೀಗ ಐಪಿಎಲ್‌ನ ಇತಿಹಾಸದಲ್ಲಿ ಆರ್‌ಸಿಬಿ ಪರವಾಗಿ ಅತ್ಯಂತ ಹೆಚ್ಚು ರನ್‌ಗಳಿಸಿದ ಆಟಗಾರರ ಪಟ್ಟಿಯಲ್ಲಿ ಐದನೇ ಸ್ಥಾನಕ್ಕೇರುವ ಅವಕಾಶ ಫಾಫ್ ಡು ಪ್ಲೆಸಿಸ್ ಮುಂದಿದೆ. ಕಳೆದ ವರ್ಷ ಆರ್‌ಸಿಬಿ ತಂಡಕ್ಕೆ ಸೇರ್ಪಡೆಯಾದಾಗಿನಿಂದಲೂ ಅಮೋಘ ಫಾರ್ಮ್‌ನಲ್ಲಿರುವ ಫಾಫ್ ಡು ಪ್ಲೆಸಿಸ್ ಸ್ಥಿರ ಪ್ರದರ್ಶನ ನೀಡುತ್ತಿದ್ದು ಪ್ರಸ್ತಿತ ನಡೆಯುತ್ತಿರುವ ಟೂರ್ನಿಯಲ್ಲಿ ಆರೆಂಜ್ ಕ್ಯಾಪ್ ಧರಿಸಿದ್ದಾರೆ.
ಐಪಿಎಲ್‌ನಲ್ಲಿ ಆರ್‌ಸಿಬಿ ಪರವಾಗಿ ಫಾಫ್ ಕೇವಲ 28 ಪಂದ್ಯಗಳನ್ನು ಆಡಿದ್ದು ಇದರಲ್ಲಿ 1099 ರನ್‌ಗಳನ್ನು ಗಳಿಸಿದ್ದಾರೆ. ಎಸ್‌ಆರ್‌ಹೆಚ್ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ ನಾಯಕ 34 ರನ್‌ಗಳನ್ನು ಗಳಿಸಿದರೆ ಜಾಕ್ ಕ್ಯಾಲಿಸ್ ದಾಖಲೆಯನ್ನು ಹಿಂದಿಕ್ಕಿ ಆರ್‌ಸಿಬಿ ತಂಡದ ಪರವಾಗಿ ಐಪಿಎಲ್‌ನಲ್ಲಿ ಅತಿ ಹೆಚ್ಚು ರನ್‌ಗಳಿಸಿದ ಆಟಗಾರರ ಪಟ್ಟಿಯಲ್ಲಿ ಫಾಫ್ 5ನೇ ಸ್ಥಾನಕ್ಕೇರಲಿದ್ದಾರೆ. ಕ್ಯಾಲಿಸ್ ಆರ್‌ಸಿಬಿ ಪರವಾಗಿ 42 ಇನ್ನಿಂಗ್ಸ್‌ಗಳಲ್ಲಿ ಬ್ಯಾಟಿಂಗ್ ನಡೆಸಿದ್ದು 1132 ರನ್‌ಗಳನ್ನು ಗಳಿಸಿದ್ದಾರೆ.
ದಾಖಲೆ ಮೇಲೆ ಕಣ್ಣಿಟ್ಟ ಭುವಿ
ಇನ್ನು ಸನ್‌ರೈಸರ್ಸ್ ಹೈದರಾಬಾದ್ ತಂಡದ ವೇಗ ಬೌಲರ್ ಭುವನೇಶ್ವರ್ ಕುಮಾರ್ ಐಪಿಎಲ್ ಇತಿಹಾಸದ ಶ್ರೇಷ್ಠ ಸಾಧನೆ ಮಾಡುವ ಅವಕಾಶ ಹೊಂದಿದ್ದಾರೆ. ಐಪಿಎಲ್‌ನ ಅತ್ಯಂತ ಯಶಸ್ವಿ ಬೌಲರ್‌ಗಳಲ್ಲಿ ಒಬ್ಬರೆನಿಸಿರುವ ಭುವನೇಶ್ವರ್ ಕುಮಾರ್ 7.36ರ ಎಕಾನಮಿಯಲ್ಲಿ 168 ವಿಕೆಟ್‌ಗಳನ್ನು ಪಡೆದುಕೊಂಡಿದ್ದಾರೆ. ಐಪಿಎಲ್‌ನಲ್ಲಿ ವೇಗಿಗಳ ಪೈಕಿ ಅತಿ ಹೆಚ್ಚು ವಿಜೆಟ್ ಪಡೆದ ಮೂರಬೇ ಬೌಲರ್ ಎನಿಸಿಕೊಂಡಿದ್ದಾರೆ ಭುವಿ.
ಇದೀಗ ಈ ಪಟ್ಟಿಯಲ್ಲಿ 2ನೇ ಸ್ಥಾನಕ್ಕೇರುವ ಅವಕಾಶ ಭುವಿ ಮೇಲಿದೆ. ಅತಿ ಹೆಚ್ಚು ವಿಕೆಟ್ ಪಡೆದ ವೇಗದ ಬೌಲರ್‌ಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಲಸಿತ್ ಮಲಿಂಗ 1709 ವಿಕೆಟ್‌ಗಳನ್ನು ಪಡೆದುಕೊಂಡಿದ್ದು ಇಂದಿನ ಪಂದ್ಯದಲ್ಲಿ 3 ವಿಕೆಟ್ ಪಡೆದರೆ ಭುವಿ ಈ ದಾಖಲೆ ಮುರಿದಂತಾಗಲಿದೆ. ಡ್ವೇಯ್ನ್ ಬ್ರಾವೋ ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದು 183 ವಿಕೆಟ್ ಪದುಕೊಂಡಿದ್ದಾರೆ.
ಆರ್‌ಸಿಬಿ ಪರವಾಗಿ 7500 ರನ್ ಗಳಿಸುವ ಸನಿಹದಲ್ಲಿ ವಿರಾಟ್
ಇನ್ನು ಆರ್‌ಸಿಬಿ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಐಪಿಎಲ್‌ನಲ್ಲಿ ಆರಂಭದಿಂದಲೂ ಒಂದೇ ತಂಡದ ಪರವಾಗಿ ಆಡಿರುವ ಏಕೈಕ ಕ್ರಿಕೆಟಿಗ. ಆರಂಭಿಕ ಆವೃತ್ತಿ 2008ರಿಂದಲೂ ಕೊಹ್ಲಿ ಆರ್‌ಸಿಬಿ ತಂಡದ ಆಟಗಾರ. ಲೀಗ್ ಕ್ರಿಕೆಟ್‌ನಲ್ಲಿ ಒಂದೇ ತಂಡದ ಪರವಾಗಿ ಅತಿ ಹೆಚ್ಚು ರನ್‌ಗಳಿಸಿರುವ ದಾಖಲೆ ಹೊಂದಿರುವ ವಿರಾಟ್ ಕೊಹ್ಲಿ ಈ ಪಂದ್ಯದಲ್ಲಿ ಆರ್‌ಸಿಬಿ ಪರವಾಗಿ 7500 ರನ್‌ಗಳನ್ನು ದಾಖಲಿಸುವ ಅವಕಾಶ ಹೊಂದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications