IPL 2024: ಸೋಲಿನಲ್ಲೂ ರಾಜಸ್ಥಾನ ಬ್ಯಾಟರ್ ಶಿಮ್ರಾನ್ ಹೆಟ್ಮೆಯರ್ ಗೆ ಬಿತ್ತು ದಂಡ!
ಮೇ 25 ಶನಿವಾರ, ಚೆಪಾಕ್ ಎಂದೇ ಕರೆಯುವ ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಪ್ಯಾಟ್ ಕಮ್ಮಿನ್ಸ್ ನೇತೃತ್ವದ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ 36 ರನ್ ಗಳ ಸೋಲು ಅನುಭವಿಸಿದ ರಾಜಸ್ಥಾನ ರಾಯಲ್ಸ್ ಟೂರ್ನಿಯಿಂದ ಹೊರಬಿದ್ದಿದೆ.
ಐಪಿಎಲ್ 2024ರ ಫೈನಲ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಹೈದರಾಬಾದ್ ಸೆಣಸಾಡಲು ಸಜ್ಜಾಗಿದೆ. ಇತ್ತ ಸೋಲಿನ ನೋವಿನಲ್ಲಿದ್ದ ರಾಜಸ್ಥಾನ ತಂಡದ ಸ್ಪೋಟಕ ಬ್ಯಾಟರ್ ಶಿಮ್ರಾನ್ ಹೆಟ್ಮೆಯರ್ ಅವರಿಗೆ ದಂಡ ಬಿದ್ದಿದೆ.

ಹೈದರಾಬಾದ್ ವಿರುದ್ಧದ ಕ್ವಾಲಿಫೈಯರ್-2 ಪಂದ್ಯದ ವೇಳೆ ಐಪಿಎಲ್ ನೀತಿ ಸಂಹಿತೆ ಉಲ್ಲಂಘನೆಗಾಗಿ ಶಿಮ್ರಾನ್ ಹೆಟ್ಮೆಯರ್ ಅವರು ತಮ್ಮ ಪಂದ್ಯದ ಶುಲ್ಕದ ಶೇಕಡಾ 10 ರಷ್ಟು ದಂಡವನ್ನು ಬಿಸಿಸಿಐ ವಿಧಿಸಿದೆ. ಈ ಬಗ್ಗೆ ಐಪಿಎಲ್ ಮೂಲಗಳು ಪ್ರಕಟಣೆ ಹೊರಡಿಸಿವೆ.
ಹೆಟ್ಮೆಯರ್ ಐಪಿಎಲ್ ನೀತಿ ಸಂಹಿತೆಯ ಆರ್ಟಿಕಲ್ 2.2 ರ ಅಡಿಯಲ್ಲಿ ಲೆವೆಲ್ 1 ಅಪರಾಧವನ್ನು ಮಾಡಿದ್ದಾರೆ. ಅವರು ಅಪರಾಧವನ್ನು ಒಪ್ಪಿಕೊಂಡಿದ್ದು, ಪಂದ್ಯದ ರೆಫರಿಯ ಅನುಮತಿಯನ್ನು ಸ್ವೀಕರಿಸಿದ್ದಾರೆ. ನೀತಿ ಸಂಹಿತೆಯ ಹಂತ 1 ಉಲ್ಲಂಘನೆಗಾಗಿ, ಪಂದ್ಯದ ರೆಫರಿಯ ನಿರ್ಧಾರವು ಅಂತಿಮ ಮತ್ತು ಬದ್ಧವಾಗಿದೆ ಎಂದು ಪ್ರಕಟಣೆ ಹೇಳಿಕೆಯಲ್ಲಿ ಸೇರಿಸಲಾಗಿದೆ.
ಮೊದಲು ಟಾಸ್ ಸೋತು ಬ್ಯಾಟಿಂಗ್ ಮಾಡಿದ ಹೈದರಾಬಾದ್ ಹೆನ್ರಿಚ್ ಕ್ಲಾಸಿನ್ ಅವರ ಅರ್ಧಶತಕದ ನೆರವಿನಿಂದ 9 ವಿಕೆಟ್‌ಗೆ 175 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ರಾಜಸ್ಥಾನವನ್ನು 7 ವಿಕೆಟ್‌ಗೆ 139 ಕ್ಕೆ ಕಟ್ಟಿ ಹಾಕುವಲ್ಲಿ ಹೈದರಾಬಾದ್ ಬೌಲರ್ಸ್ ಯಶಸ್ವಿಯಾದರು. ಹೀಗಾಗಿ 36 ರನ್‌ಗಳಿಂದ ಎಸ್‌ಆರ್‌ಹೆಚ್ ಗೆದ್ದು ಫೈನಲ್‌ಗೆ ಎಂಟ್ರಿ ಕೊಟ್ಟಿದೆ.
ಮುಂದಿನ ಋತುವಿನ ಒಂದು ಪಂದ್ಯಕ್ಕೆ ಪಾಂಡ್ಯ ಅಲಭ್ಯ
ಮೇ 17ಕ್ಕೆ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ನಿಧಾನಗತಿಯ ಓವರ್‌ನಿಂದಾಗಿ ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಐಪಿಎಲ್ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ. ಇದರಿಂದಾಗಿ ಅವರಿಗೆ ಪಂದ್ಯದ ಶೇ.30 ರಷ್ಟು ದಂಡದೊಂದಿಗೆ 2025ರ ಐಪಿಎಲ್ ಪಂದ್ಯವೊಂದರಿಂದ ನಿಷೇಧ ಹೇರಲಾಗಿದೆ.
ಈ ಬಾರಿ ಐಪಿಎಲ್‌ನಲ್ಲಿ ಹಾರ್ದಿಕ್ ಪಾಂಡ್ಯ ಪಂದ್ಯವೊಂದಕ್ಕೆ ನಿಷೇಧಕ್ಕೊಳಗಾದ ಎರಡನೇ ನಾಯಕರಾಗಿದ್ದಾರೆ. ಇದಕ್ಕೂ ಮುನ್ನ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ರಿಷಬ್ ಪಂತ್ ಕೂಡ ನಿಧಾನಗತಿಯ ಓವರ್‌ನಿಂದಾಗಿ ಆರ್‌ಸಿಬಿ ವಿರುದ್ಧ 1 ಪಂದ್ಯದಿಂದ ನಿಷೇಧಿಸಿಲ್ಪಟ್ಟಿದ್ದರು.
ಈ ಇಬ್ಬರು ಆಟಗಾರರು ಮೂರು ಬಾರಿಗೆ ದಂಡಕ್ಕೆ ಗುರಿಯಾಗಿದ್ದಾರೆ. ಆರಂಭದಲ್ಲಿ ಎರಡು ಬಾರಿ ದಂಡ ವಿಧಿಸಲಾಗಿತ್ತು. ಆದರೆ, ಐಪಿಎಲ್ ನಿಯಮಗಳ ಪ್ರಕಾರ ಮೂರನೇ ಬಾರಿಯೂ ನಿಧಾನಗತಿಯ ಓವರ್ ಕಂಡು ಬಂದ ಕಾರಣ ಈ ಕ್ರಮ ಜರುಗಿಸಲಾಗಿದೆ.
ಈ ಋತುವಿನಲ್ಲಿ ಮುಂಬೈ ಇಂಡಿಯನ್ಸ್‌ನ ಪಂದ್ಯಗಳು ಈಗಾಗಲೇ ಮುಕ್ತಾಯಗೊಂಡಿವೆ. ಹಾಗಾಗಿ ಐಪಿಎಲ್ 2025ರ ಮೊದಲ ಪಂದ್ಯಕ್ಕೆ ಹಾರ್ದಿಕ್ ಮೇಲೆ ನಿಷೇಧ ಹೇರಲಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications