SRH vs RR, IPL 2025: ಸನ್‌ಗೆ 44 ರನ್ ಜಯ: ಪಂದ್ಯ ನಿರ್ಣಾಯಕ ಕ್ಷಣ ಯಾವುದು?
ಹೈದರಾಬಾದ್‌ನಲ್ಲಿ ಐಪಿಎಲ್ ಪ್ರಸಕ್ತ ಆವೃತ್ತಿಯ ಎರಡನೇ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ಅಮೋಘ ಪ್ರದರ್ಶನ ನೀಡಿ ಜಯ ಸಾಧಿಸಿತು. 44 ರನ್‌ಗಳಿಂದ ರಾಜಸ್ಥಾನ ರಾಯಲ್ಸ್ ತಂಡವನ್ನು ಮಣಿಸಿದ ಸನ್ ಆರ್ಭಟಿಸಿದೆ. ಈ ಮೂಲಕ ಸನ್‌ರೈಸರ್ಸ್ ಕಪ್ ಗೆಲುವಿನ ಅಭಿಯಾನಕ್ಕೆ ಗೆಲುವಿನ ಆರಂಭ ನೀಡಿದೆ. ಈ ಪಂದ್ಯದಲ್ಲಿ ಸನ್ ಸಂಘಟಿತ ಆಟವನ್ನು ಪ್ರದರ್ಶಿಸಿದೆ. ಈ ಪಂದ್ಯದ ಟರ್ನಿಂಗ್ ಪಾಯಿಂಟ್ ಯಾವುದು ಎಂಬ ಬಗ್ಗೆ ವರದಿ ಇಲ್ಲಿದೆ.
ಸನ್ ರೈಸರ್ಸ್ ತಂಡ ಟಾಸ್ ಸೋತರೂ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿತು. ತವರಿನ ಅಂಗಳದಲ್ಲಿ ಅಭಿಮಾನಿಗಳ ಸಮ್ಮುಖದಲ್ಲಿ ಅಮೋಘ ಬ್ಯಾಟಿಂಗ್ ನಡೆಸಿ ಬೃಹತ್ ಮೊತ್ತವನ್ನು ಕಲೆ ಹಾಕಿತು. ಈ ಪಂದ್ಯದಲ್ಲಿ ಸನ್ ತಂಡದ ಟಾಪ್ ಆರ್ಡರ್ ಬ್ಯಾಟರ್‌ಗಳು 200ಕ್ಕೂ ಹೆಚ್ಚು ಸ್ಟ್ರೈಕ್ ರೇಟ್‌ನಲ್ಲಿ ರನ್ ಕಲೆ ಹಾಕಿದರು. ಈ ಮೂಲಕ ತಂಡಕ್ಕೆ ಆಧಾರವಾದ್ರು. ಅಭಿಷೇಕ್ ಶರ್ಮಾ ಚಿಕ್ಕ ಇನಿಂಗ್ಸ್ ಕಟ್ಟಿದ್ರೂ ಇಂಪ್ಯಾಕ್ಟ್ ಮಾಡಿದ್ರು. ಟ್ರಾವಿಸ್ ಹೆಡ್ ಹಾಗೂ ಇಶಾನ್ ಕಿಶನ್ ಭರ್ಜರಿ ಜತೆಯಾಟದ ಕಾಣಿಕೆ ನೀಡಿದರು. ಟ್ರಾವಿಸ್ ಹೆಡ್ ಐಪಿಎಲ್‌ನಲ್ಲಿ ಮತ್ತೊಂದು ಅರ್ಧಶತಕ ಬಾರಿಸಿ ಅಬ್ಬರಿಸಿದ್ರು.

ಇಶಾನ್ ಕಿಶನ್ ಹೊಸ ಫ್ರಾಂಚೈಸಿ ಪರ ಆಡಿದ ಮೊದಲ ಪಂದ್ಯದಲ್ಲಿ ಕ್ಲಾಸಿಕ್ ಬ್ಯಾಟಿಂಗ್ ನಡೆಸಿದರು. ತಮ್ಮ ನೈಜ್ಯ ಸ್ಥಳವನ್ನು ಬಿಟ್ಟು ಬೇರೆ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದರು. ಇವರು ಸಾಮಾನ್ಯವಾಗಿ ಐಪಿಎಲ್‌ನಲ್ಲಿ ಆರಂಭಿಕರಾಗಿ ಕಣಕ್ಕೆ ಇಳಿದಿದ್ದರು. ಆದರೆ ಈ ಬಾರಿ ಸನ್ ಪರವಾಗಿ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿ ಶತಕ ಬಾರಿಸಿ ಅಬ್ಬರಿಸಿದರು. ಇನ್ನು ಹ್ಯಾನ್ರಿಕ್ ಕ್ಲಾಸೇನ್ ತಮ್ಮ ಚಿಕ್ಕ ಇನಿಂಗ್ಸ್ ಮೂಲಕ ತಂಡಕ್ಕೆ ಆಧಾರವಾದ್ರು.
ಪಂದ್ಯ ತಿರುವು ಏನು?
ಬಿಗ್ ಸ್ಕೋರ್ ಬೆನ್ನಟ್ಟಿದ ರಾಜಸ್ಥಾನ ತಂಡದ ಆರಂಭ ಕಳಪೆಯಾಗಿತ್ತು. ಭರವಸೆಯ ಬ್ಯಾಟರ್‌ಗಳು ರನ್ ಕಲೆ ಹಾಕುವಲ್ಲಿ ವಿಫಲರಾದರು. ಮೂರು ವಿಕೆಟ್ ಗಳನ್ನು ಕಳೆದುಕೊಂಡು ಸಂಕಷ್ಟಟದಲ್ಲಿದ್ದ ತಂಡಕ್ಕೆ ಅನುಭವಿ ಸಂಜು ಸ್ಯಾಮ್ಸನ್ ಹಾಗೂ ಧ್ರುವ್ ಜುರೇಲ್ ಉತ್ತಮ ಜೊತೆಯಾಟದ ಕಾಣಿಕೆ ನೀಡಿದರು. ಇವರಿಬ್ಬರು ಬ್ಯಾಟ್ ಮಾಡುವಾಗ ರಾಜಸ್ಥಾನ ಅಭಿಮಾನಿಗಳ ಮುಖದಲ್ಲಿ ಮಂದಹಾಸ ಮೂಡಿತ್ತು. ಆದರೆ ಈ ಆಸೆ ಹೆಚ್ಚು ಹೊತ್ತು ನಿಲ್ಲಲೇ ಇಲ್ಲ.

ಜುರೇಲ್ ಹಾಗೂ ಸಂಜು ಸ್ಯಾಮ್ಸನ್ ಜೋಡಿ 60 ರನ್‌ಗಳಿಗೆ 111 ರನ್ ಸೇರಿಸಿದ್ದಾಗ ಹರ್ಷಲ್ ಪಟೇಲ್ ಬ್ರೇಕ್ ಥ್ರೂ ತಂದು ಕೊಟ್ಟರು. ಹರ್ಷಲ್ ಎಸೆತದಲ್ಲಿ ಬಿಗ್ ಹಿಟ್ ಬಾರಿಸುವಾಗ ಹೆನ್ರಿಕ್ ಕ್ಲಾಸೇನ್‌ಗೆ ಸಂಜು (66 ರನ್) ಕ್ಯಾಚ್ ನೀಡಿದರು. ಈ ವಿಕೆಟ್ ಬಿದ್ದ ಮುಂದಿನ ಓವರ್‌ನ ಎರಡನೇ ಎಸೆತದಲ್ಲಿ ಧ್ರುವ್ ಜುರೇಲ್ (70 ರನ್) ಅವರಿಗೆ ಆಡಂ ಜಂಪಾ ಖೆಡ್ಡಾ ತೋಡಿದ್ರು. ಇದು ಪಂದ್ಯದ ಗತಿಯನ್ನು ಕೊಂಚ ಬದಲಿಸಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications