Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

SRH vs RR: ಪಂದ್ಯದ ನೇರ ಪ್ರಸಾರ, ಪಂದ್ಯದ ಸಮಯ, ಪಿಚ್‌ ವರದಿ, ಪ್ಲೇಯಿಂಗ್ ಇಲೆವೆನ್ ಸಂಪೂರ್ಣ ಮಾಹಿತಿ

ನ್ಯೂ ಚಂಡೀಗಢ: 19ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ( ಐಪಿಎಲ್) ಎಲಿಮಿನೇಟರ್‌ ಪಂದ್ಯದಲ್ಲಿ ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವ ಸನ್‌ರೈಸರ್ಸ್‌ ಹೈದರಾಬಾದ್ (ಎಸ್‌ಆರ್‌ಎಚ್‌) ಹಾಗೂ ರಾಜಸ್ಥಾನ್ ರಾಯಲ್ಸ್ (ಆರ್‌ಆರ್‌) ತಂಡಗಳು ಕಾದಾಟ ನಡೆಸಲಿವೆ. ಈ ಪಂದ್ಯದಲ್ಲಿ ಜಯ ಸಾಧಿಸಿದ ತಂಡ ಶುಕ್ರವಾರ ಎರಡನೇ ಕ್ವಾಲಿಫೈಯರ್‌ನಲ್ಲಿ ಗುಜರಾತ್ ಟೈಟಾನ್ಸ್‌ ವಿರುದ್ಧ ಕಾದಾಟ ನಡೆಸಲಿದೆ.

ಉಭಯ ತಂಡಗಳು ಒಟ್ಟಾರೆ ಐಪಿಎಲ್‌ನಲ್ಲಿ 23 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಈ ವೇಳೆ ಎಸ್‌ಆರ್‌ಎಚ್‌ 14, ಆರ್‌ಆರ್‌ 9 ಪಂದ್ಯಗಳಲ್ಲಿ ಜಯ ಸಾಧಿಸಿದೆ. ಎರಡೂ ತಂಡಗಳಿಗೆ ಯುವಕರ ಬ್ಯಾಟಿಂಗ್ ಬಲವಿದ್ದು, ಪಂದ್ಯದ ರೋಚಕತೆ ಹೆಚ್ಚಿಸಿದೆ. ಈ ಪಂದ್ಯದ ಪ್ರಮುಖ ಮಾಹಿತಿ ಇಲ್ಲಿದೆ.

SRH vs RR

ಪಿಚ್ ವರದಿ ಏನು ಹೇಳುತ್ತದೆ?

ಈ ಪಂದ್ಯವು ಮುಲ್ಲನ್‌ಪುರದ ಮಹಾರಾಜ ಯಾದವೀಂದ್ರ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ. ಇಲ್ಲಿನ ಪಿಚ್ ಬ್ಯಾಟಿಂಗ್‌ಗೆ ಹೆಚ್ಚು ಸೂಕ್ತವಾಗಿದೆ. ಸ್ಥಿರವಾದ ಬೌನ್ಸ್ ಹೊಂದಿರುವ ಫ್ಲಾಟ್ ಮೇಲ್ಮೈಯನ್ನು ಹೊಂದಿದೆ. ಈ ಮೈದಾನದಲ್ಲಿ ಮೊದಲ ಇನ್ನಿಂಗ್ಸ್ ಸರಾಸರಿ ಸ್ಕೋರ್ 214 ರನ್‌ ಆಗಿದೆ. ಎರಡನೇ ಇನಿಂಗ್ಸ್‌ನಲ್ಲಿ ಇಬ್ಬನಿ ಬೀಳುವ ಸಾಧ್ಯತೆ ಇದೆ. ಹೀಗಾಗಿ ಟಾಸ್‌ ಮಹತ್ವದ ಪಾತ್ರ ವಹಿಸಲಿದೆ.

ಸನ್‌ರೈಸರ್ಸ್‌ ಹೈದರಾಬಾದ್ ತಂಡದ ಪ್ಲೇಯಿಂಗ್ ಇಲೆವೆನ್‌ ಹೇಗಿರಲಿದೆ?

ಅಭಿಷೇಕ್ ಶರ್ಮಾ, ಟ್ರಾವಿಸ್ ಹೆಡ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಹೆನ್ರಿಚ್ ಕ್ಲಾಸೆನ್, ಅನಿಕೇತ್ ವರ್ಮಾ, ಸಲೀಲ್ ಅರೋರಾ, ನಿತೀಶ್ ಕುಮಾರ್ ರೆಡ್ಡಿ, ಹರ್ಷ್ ದುಬೆ, ಶಿವಂಗ್ ಕುಮಾರ್, ಹರ್ಷಲ್ ಪಟೇಲ್, ಈಶಾನ್ ಮಾಲಿಂಗ, ಇಂಪ್ಯಾಕ್ಟ್ ಪ್ಲೇಯರ್: ಪ್ಯಾಟ್ ಕಮಿನ್ಸ್

ಫೈನಲ್ಸ್ ಸಿಂಹಾಸನದತ್ತ RCB ಲಗ್ಗೆ; ಈ ಬಾರಿಯೂ ಕಪ್‌ ನಮ್ದೇ ಎನ್ನಲೊಂದೇ ಹೆಜ್ಜೆ

ಫೈನಲ್ಸ್ ಸಿಂಹಾಸನದತ್ತ RCB ಲಗ್ಗೆ; ಈ ಬಾರಿಯೂ ಕಪ್‌ ನಮ್ದೇ ಎನ್ನಲೊಂದೇ ಹೆಜ್ಜೆ

ಸನ್‌ರೈಸರ್ಸ್‌ ಪರ ಅಬ್ಬರದ ಪ್ರದರ್ಶನ ನೀಡಿರುವ ಪ್ಲೇಯರ್ಸ್‌ ಯಾರು?

ಹೆನ್ರಿಕ್ ಕ್ಲಾಸೇನ್‌ (606), ಇಶಾನ್‌ ಕಿಶನ್‌ (569), ಅಭಿಷೇಕ್ ಶರ್ಮಾ (563) ಭರ್ಜರಿ ಪ್ರದರ್ಶನ ನೀಡಿದ್ದಾರೆ. ಬೌಲಿಂಗ್‌ನಲ್ಲಿ ಇಶಾನ್‌ ಮಲಿಂಗ (19), ಸಕಿಬ್‌ ಹುಸೇನ್‌ (15), ಪ್ರಫುಲ್‌ ಹಿಂಗೆ (11) ವಿಕೆಟ್‌ ಬೇಟೆಯಲ್ಲಿ ಮುಂಚೂಣಿಯಲ್ಲಿದ್ದಾರೆ.

ರಾಜಸ್ಥಾನ್ ರಾಯಲ್ಸ್ ತಂಡ ಯಾರಿಗೆಲ್ಲಾ ಅವಕಾಶ ನೀಡಬಹುದು?

ವೈಭವ್ ಸೂರ್ಯವಂಶಿ, ಯಶಸ್ವಿ ಜೈಸ್ವಾಲ್, ಧ್ರುವ್ ಜುರೆಲ್ (ವಿಕೆಟ್ ಕೀಪರ್), ರಿಯಾನ್ ಪರಾಗ್ (ನಾಯಕ), ಶಿಮ್ರಾನ್ ಹೆಟ್ಮೆಯರ್, ಡೊನೊವನ್ ಫೆರೇರಾ, ರವೀಂದ್ರ ಜಡೇಜಾ, ಜೋಫ್ರಾ ಆರ್ಚರ್, ನಾಂದ್ರೆ ಬರ್ಗರ್, ಸಂದೀಪ್ ಶರ್ಮಾ, ರವಿ ಬಿಷ್ಣೋಯ್.

ರಾಯಲ್ಸ್‌ ಪರ ಭರವಸೆ ಮೂಡಿಸಿರುವ ಆಟಗಾರರು ಯಾರು?

ರಾಜಸ್ಥಾನ್ ರಾಯಲ್ಸ್ ಪರ ಆರಂಭಿಕ ಆಟಗಾರ ವೈಭವ್ ಸೂರ್ಯವಂಶಿ (583), ಧ್ರುವ್ ಜುರೇಲ್‌ (458), ಯಶಸ್ವಿ ಜೈಸ್ವಾಲ್‌ (397) ರನ್‌ ಕಲೆ ಹಾಕಿ ಮಿಂಚುತ್ತಿದ್ದಾರೆ. ಇನ್ನು ವಿಕೆಟ್‌ ಬೇಟೆಯಲ್ಲಿ ಜೋಫ್ರಾ ಆರ್ಚರ್‌ (21), ಬ್ರಿಜೇಶ್‌ ಶರ್ಮಾ (13), ನಾಂದ್ರೆ ಬರ್ಗರ್‌ (11) ವಿಕೆಟ್‌ ಪಡೆದು ಬೀಗಿದ್ದಾರೆ.

IPL 2026: ರಜತ್ ಪಾಟೀದಾರ್‌ ಮಾಸ್ಟರ್‌ ಸ್ಟ್ರೋಕ್‌ಗೆ ವಿರಾಟ್‌ ಕೊಹ್ಲಿ ಸ್ಟನ್‌: ವೈರಲ್ ವಿಡಿಯೋ

IPL 2026: ರಜತ್ ಪಾಟೀದಾರ್‌ ಮಾಸ್ಟರ್‌ ಸ್ಟ್ರೋಕ್‌ಗೆ ವಿರಾಟ್‌ ಕೊಹ್ಲಿ ಸ್ಟನ್‌: ವೈರಲ್ ವಿಡಿಯೋ

ಮುಲ್ಲನ್‌ಪುರದಲ್ಲಿ ಆರ್‌ಆರ್ ಸಾಧನೆ ಹೇಗಿದೆ?

ರಾಜಸ್ಥಾನ್ ರಾಯಲ್ಸ್ ತಂಡವು ಈ ಮೈದಾನದಲ್ಲಿ ಉತ್ತಮ ದಾಖಲೆಯನ್ನು ಹೊಂದಿದ್ದು, ಐಪಿಎಲ್ 2026ರಲ್ಲಿ ಇಲ್ಲಿ ಆಡಿದ ತನ್ನ ಎರಡೂ ಪಂದ್ಯಗಳನ್ನು ಗೆದ್ದಿದೆ.

ಎಲಿಮಿನೇಟರ್‌ ಪಂದ್ಯವನ್ನು ಎಲ್ಲಿ ನೋಡಬಹುದು?

ರಾಜಸ್ಥಾನ್ ರಾಯಲ್ಸ್‌ ಹಾಗೂ ಸನ್‌ರೈಸರ್ಸ್‌ ಹೈದರಾಬಾದ್ ನಡುವಣ ಎಲಿಮಿನೇಟರ್‌ ಪಂದ್ಯ ಸ್ಟಾರ್‌ ಸ್ಪೋರ್ಟ್ಸ್‌ ನೆಟ್‌ವರ್ಕ್‌ನಲ್ಲಿ ನೋಡಬಹುದು. ಅಲ್ಲದೆ ಆನ್‌ಲೈನ್‌ನಲ್ಲಿ ಜಿಯೋ ಹಾಟ್‌ಸ್ಟಾರ್‌ನಲ್ಲಿ ವೀಕ್ಷಿಸಬಹುದು.

ಆರ್‌ಆರ್‌ ಹಾಗೂ ಎಸ್‌ಆರ್‌ಎಚ್‌ ನಡುವಣ ಪಂದ್ಯ ನಡೆಯುವುದು ಯಾವಾಗ?

19ನೇ ಆವೃತ್ತಿ ಐಪಿಎಲ್‌ನ ಎಲಿಮಿನೇಟರ್ ಪಂದ್ಯ ಸಂಜೆ 7.30ಕ್ಕೆ ಆರಂಭವಾಗಲಿದೆ. ಪಂದ್ಯ ಆರಂಭಕ್ಕೂ ಅರ್ಧ ಗಂಟೆ ಮುನ್ನ ಟಾಸ್‌ ನಡೆಯಲಿದೆ.

Story first published: Wednesday, May 27, 2026, 5:10 [IST]
Other articles published on May 27, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+