SRH vs RR: ರಾಯಲ್ಸ್‌ಗೆ 217 ರನ್ ಗುರಿ ನೀಡಿದ ಎಸ್‌ಆರ್‌ಎಚ್
ಹೈದರಾಬಾದ್: ನಾಯಕ ಇಶಾನ್ ಕಿಶನ್ (91) ಹಾಗೂ ಹೆನ್ರಿಕ್ ಕ್ಲಾಸೆನ್ (40) ಇವರುಗಳ ಭರ್ಜರಿ ಪ್ರದರ್ಶನದ ಬಲದಿಂದ ಸನ್‌ರೈಸರ್ಸ್ ಹೈದರಾಬಾದ್ 217 ರನ್‌ಗಳ ಸವಾಲಿನ ಗುರಿಯನ್ನು ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ನೀಡಿದೆ.
19ನೇ ಆವೃತ್ತಿಯ ಐಪಿಎಲ್‌ನ 21ನೇ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಸನ್‌ರೈಸರ್ಸ್ ತಂಡದ ಆರಂಭ ಕಳಪೆಯಾಗಿತ್ತು. ಸನ್ ತಂಡದ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಸೊನ್ನೆ ಸುತ್ತಿದರು. ಈ ಮೂಲಕ ಅಭಿಷೇಕ್ ಶರ್ಮಾ ಈ ವರ್ಷದ ಟಿ20 ಫಾರ್ಮೆಟ್‌ನಲ್ಲಿ ಅತಿ ಹೆಚ್ಚು ಬಾರಿ ಸೊನ್ನೆ ಸುತ್ತಿದ ಕಳಪೆ ದಾಖಲೆ ತಮ್ಮದಾಗಿಸಿಕೊಂಡರು.

ಎರಡನೇ ವಿಕೆಟ್‌ಗೆ ಟ್ರಾವಿಸ್ ಹೆಡ್ ಹಾಗೂ ಇಶಾನ್ ಕಿಶನ್ ಜೋಡಿ ಭರ್ಜರಿ ಜೊತೆಯಾದ ಕಾಣಿಕೆ ನೀಡಿದರು. ಈ ಜೋಡಿ 42 ಎಸೆತಗಳಲ್ಲಿ 55 ರನ್ ಬಾರಿಸಿತು. ಈ ವೇಳೆ 18 ರನ್ ಬಾರಿಸಿದ್ದಾಗ ಟ್ರಾವಿಸ್ ಹೆಡ್ ಇಲ್ಲದ ಹೊಡೆತಕ್ಕೆ ಮುಂದಾಗಿ ರಿಯಾನ್ ಪರಾಗ್ ಅವರು ವಿಕೆಟ್ ಒಪ್ಪಿಸಿದರು. ಮೂರನೇ ವಿಕೆಟ್‌ಗೆ ಇಶಾನ್ ಹಾಗೂ ಹೆನ್ರಿಕ್ ಕ್ಲಾಸೆನ್ ಜೋಡಿ ಸಹ ಉತ್ತಮ ಜೊತೆಯಾಟವನ್ನು ನೀಡಿತು.
ಇಶಾನ್ ಅಬ್ಬರ
ಇಶಾನ್, ಕ್ಲಾಸೆನ್ ಜೋಡಿ ಮಿಡ್ಲ್ ಓವರ್‌ನಲ್ಲಿ ತಂಡದ ಮೊತ್ತವನ್ನು ಹಿಗ್ಗಿಸುವಲ್ಲಿ ಸಫಲವಾಯಿತು. ಈ ಜೋಡಿ ಆರ್‌ಆರ್ ತಂಡದ ಬೌಲರ್‌ಗಳನ್ನು ಬಹುವಾಗಿ ಕಾಡಿತು. ದೊಡ್ಡ ದೊಡ್ಡ ಹೊಡೆತಗಳ ಮೂಲಕ ರನ್ ವೇಗಕ್ಕೆ ಚುರುಕು ಮುಟ್ಟಿಸಿತು. ಇಶಾನ್, ಕ್ಲಾಸೆನ್ ಜೋಡಿ 38 ಎಸೆತಗಳಲ್ಲಿ 88 ರನ್ ಸೇರಿಸಿತು. ಈ ಹಂತದಲ್ಲಿ ಇಶಾನ್ 44 ಎಸೆತಗಳಲ್ಲಿ 8 ಬೌಂಡರಿ, 6 ಸಿಕ್ಸರ್ ಸಹಾಯದಿಂದ 91 ರನ್ ಸಿಡಿಸಿ ಔಟ್ ಆದರು.

ನಿತೀಶ್ ಕುಮಾರ್ ರೆಡ್ಡಿ 28, ಸಲಿಲ್ ಆರೋರ್ ಅಜೇಯ 24 ರನ್ ಬಾರಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು. ಅಂತಿಮವಾಗಿ ಸನ್‌ರೈಸರ್ಸ್ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 216 ರನ್ ಸಿಡಿಸಿತು. ರಾಜಸ್ಥಾನ್ ರಾಯಲ್ಸ್ ತಂಡದ ಪರ ಜೋಫ್ರಾ ಆರ್ಚರ್ 2 ವಿಕೆಟ್ ಪಡೆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications