ಆ ಪ್ಲೇಯರ್ ಆಟವೇ ಸನ್‌ರೈಸರ್ಸ್ ಮೂರನೇ ಸ್ಥಾನಕ್ಕೆ ಬಡ್ತಿ ಪಡೆಯಲು ಕಾರಣ
ಜೈಪುರ್: 19ನೇ ಆವೃತ್ತಿಯ ಐಪಿಎಲ್ ರೋಚಕತೆ ಹೆಚ್ಚಿಸಿದೆ. ಶನಿವಾರ ನಡೆದ ಎರಡನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಕಾದಾಟ ನಡೆಸಿದವು. ಈ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ ರಾಯಲ್ಸ್ ಉತ್ತಮ ಮೊತ್ತ ಕಲೆ ಹಾಕಿತು. 15 ವರ್ಷದ ಯುವ ಆಟಗಾರ ವೈಭವ್ ಸೂರ್ಯವಂಶಿ ಶತಕ ಬಾರಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು. ಧ್ರುವ್ ಜುರೇಲ್ ಅರ್ಧಶತಕ ಬಾರಿಸಿದರು. ರಾಯಲ್ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 228 ರನ್ ಕಲೆ ಹಾಕಿತು.
ಸವಾಲಿನ ಮೊತ್ತವನ್ನು ಬೆನ್ನಟ್ಟಿದ ಸನ್ ತಂಡದ ಆರಂಭಿಕ ಟ್ರಾವಿಸ್ ಹೆಡ್ (6) ರನ್ ಕಲೆ ಹಾಕುವಲ್ಲಿ ವಿಫಲರಾದರು. ಇಶಾನ್ ಕಿಶನ್ ಹಾಗೂ ಆರಂಭಿಕ ಅಭಿಷೇಕ್ ಶರ್ಮಾ ಅಮೋಘ ಬ್ಯಾಟಿಂಗ್ ನಡೆಸಿ ತಂಡಕ್ಕೆ ಆಧಾರವಾದರು. ಈ ಜೋಡಿ ಮೊದಲ 6 ಓವರ್‌ಗಳಲ್ಲಿ 89 ರನ್ ಸೇರಿಸಿತು. ಅಭಿಷೇಕ್ ಶರ್ಮಾ 29 ಎಸೆತಗಳಲ್ಲಿ 11 ಬೌಂಡರಿ, 1 ಸಿಕ್ಸರ್ ಸಹಾಯದಿಂದ 57 ರನ್ ಬಾರಿಸಿದರು.

ಕಳೆದ ಕೆಲವು ಪಂದ್ಯಗಳಲ್ಲಿ ನಾಯಕರಾಗಿ ಕಾಣಿಸಿಕೊಂಡಿದ್ದ ಇಶಾನ್ ಕಿಶನ್ ರಾಯಲ್ಸ್ ವಿರುದ್ಧ ಆ ಜವಾಬ್ದಾರಿಯನ್ನು ಪ್ಯಾಟ್ ಕಮಿನ್ಸ್‌ಗೆ ನೀಡಿದರು. ತಮ್ಮ ನೈಜ ಆಟವನ್ನು ಆಡಿದ ಇಶಾನ್ 31 ಎಸೆತಗಳಲ್ಲಿ 11 ಬೌಂಡರಿ, 3 ಸಿಕ್ಸರ್ ಸಹಾಯದಿಂದ 74 ರನ್ ಬಾರಿಸಿದರು.
ಸನ್ ಗೆಲುವಿನ ಹೀರೋ
ನಾಲ್ಕನೆ ವಿಕೆಟ್‌ಗೆ ಹೆನ್ರಿಕ್ ಕ್ಲಾಸೆನ್ ಹಾಗೂ ನಿತೀಶ್ ಕುಮಾರ್ ರೆಡ್ಡಿ ತಾಳ್ಮೆಯಿಂದ ಬ್ಯಾಟಿಂಗ್ ನಡೆಸಿ, ತಂಡವನ್ನು ಜಯದ ಗೆರೆಯ ಪಕ್ಕದಲ್ಲಿ ತಂದು ನಿಲ್ಲಿಸಿತು. ಈ ಜೋಡಿ 31 ಎಸೆತಗಳಲ್ಲಿ 53 ರನ್ ಬಾರಿಸಿ ಮಿಂಚಿತು. ಕ್ಲಾಸೆನ್ 29, ನಿತೀಶ್ 36 ರನ್ ಬಾರಿಸಿ ಜಯದಲ್ಲಿ ಮಿಂಚಿದರು. ಎಸ್‌ಆರ್‌ಎಚ್ ತಂಡದ ಗೆಲುವಿನಲ್ಲಿ ಭರವಸೆಯ ಆಟಗಾರ ಇಶಾನ್ ಕಿಶನ್ ಅಬ್ಬರಿಸಿದರು. ಇವರು ಜವಾಬ್ದಾರಿ ಅರಿತು ಆಡಿದ್ದರಿಂದ ಸನ್ ಇನ್ನು 9 ಎಸೆತಗಳು ಬಾಕಿ ಇರುವಂತೆ ಜಯ ಸಾಧಿಸಿತು.
ರಾಜಸ್ಥಾನ್ ಪರ ಒಟ್ಟು 8 ಜನ ಬೌಲರ್‌ಗಳು ಬೌಲ್ ಮಾಡಿದರು. ಆದರೆ ಜೋಫ್ರಾ ಆರ್ಚರ್ ಅವರನ್ನು ಹೊರತು ಪಡಿಸಿ ಉಳಿದ ಆಟಗಾರರ ಎಕಾನಮಿ ಎರಡಂಕಿ ಮುಟ್ಟಿತ್ತು.
ಸಂಕ್ಷಿಪ್ತ ಸ್ಕೋರ್
ರಾಜಸ್ಥಾನ್ ರಾಯಲ್ಸ್ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 228 ರನ್: ವೈಭವ್ ಸೂರ್ಯವಂಶಿ 101, ಧ್ರುವ್ ಜುರೇಲ್ 51, ಇಶಾನ್ ಮಲಿಂಗ್ 38ಕ್ಕೆ 2
ಸನ್‌ರೈಸರ್ಸ್ ಹೈದರಾಬಾದ್ 18.3 ಓವರ್‌ಗಳಲ್ಲಿ 5 ವಿಕೆಟ್‌ಗೆ 229 ರನ್; ಇಶಾನ್ ಕಿಶನ್ 74, ಅಭಿಷೇಕ್ ಶರ್ಮಾ 57, ನಿತೀಶ್ ಕುಮಾರ್ ರೆಡ್ಡಿ 36, ಜೋಫ್ರಾ ಆರ್ಚರ್ 34ಕ್ಕೆ 2
ಪಂದ್ಯದ ಫಲಿತಾಂಶ: ಹೈದರಾಬಾದ್ ತಂಡಕ್ಕೆ 5 ವಿಕೆಟ್ ಜಯ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications