SRH vs RR: ಪಂದ್ಯದ ದಿಕ್ಕನೇ ಬದಲಿಸಿದ ಸನ್ ತಂಡದ ಯಂಗ್ ಬೌಲರ್
19ನೇ ಆವೃತ್ತಿಯಲ್ಲಿ ರಾಜಸ್ಥಾನ್ ರಾಯಲ್ಸ್ ಅಜೇಯ ಓಟಕ್ಕೆ ಬ್ರೇಕ್ ಬಿದ್ದಿದೆ. ಸತತ 4 ಪಂದ್ಯಗಳನ್ನು ಗೆದ್ದು ಅಬ್ಬರಿಸಿದ್ದ ರಾಯಲ್ಸ್ ಆಟಕ್ಕೆ ಸನ್‌ರೈಸರ್ಸ್ ಹೈದರಾಬಾದ್ ತಂಡ ಬ್ರೇಕ್ ಹಾಕಿದೆ. ಹೈದರಾಬಾದ್ ತಂಡ ಈ ಗೆಲುವಿನ ಮೂಲಕ ಅಂಕ ಪಟ್ಟಿಯಲ್ಲಿ ಭರ್ಜರಿ ಬಡ್ತಿ ಪಡೆದಿದೆ. ಇಶಾನ್ ಕಿಶನ್ ಪಡೆ ಈ ಪಂದ್ಯವನ್ನು ಸುಲಭವಾಗಿ ಗೆಲ್ಲುವಂತೆ ಮಾಡಿದ್ದು ಆ ಒಬ್ಬ ಯುವ ಬೌಲರ್.
ಟಾಸ್ ಸೊತರೂ ಮೊದಲು ಬ್ಯಾಟ್ ಮಾಡಿದ ಸನ್‌ರೈಸರ್ಸ್ ತಂಡದ ಸ್ಫೋಟಕ ಆಟಗಾರ ಅಭಿಷೇಕ್ ಶರ್ಮಾ (0) ಸುತ್ತಿದರು. ಟ್ರಾವಿಸ್ ಹೆಡ್ (18) ತಂಡಕ್ಕೆ ಕೊಂಚ ಆಧಾರವಾದರು. ನಾಯಕ ಇಶಾನ್ ಕಿಶನ್ ಜವಾಬ್ದಾರಿಯುತ ಆಟವಾಡಿ 91 ರನ್ ಸಿಡಿಸಿದರು. ಇದು ಸಹ ಪಂದ್ಯ ಜಯಿಸಲು ಕಾರಣವಾಯಿತು. ಬ್ಯಾಟರ್‌ಗಳ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶನದ ಬಲದಿಂದ ಸನ್ ತಂಡ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 212 ರನ್ ಸೇರಿಸಿತು.

ರಾಯಲ್ಸ್ ಬ್ಯಾಟಿಂಗ್ ಲೈನ್ ಅಪ್ ಹಾಗೂ ಸದ್ಯ ಇರುವ ಆಟಗಾರರ ಫಾರ್ಮ್ ಗಮನಿಸಿದರೆ, ಈ ಮೊತ್ತವನ್ನು ಸುಲಭವಾಗಿ ಚೇಸ್ ಮಾಡಬಹುದು ಎಂದೇ ಎಲ್ಲರೂ ಅಂದಾಜಿಸಿದ್ದರು. ಆದರೆ ಇದೆ ಮೊದಲ ಬಾರಿಗೆ ಐಪಿಎಲ್ ವೇದಿಕೆಯ ಮೇಲೆ ತನ್ನ ಪ್ರತಿಭೆ ಪ್ರದರ್ಶಿಸುವ ಅವಕಾಶ ಪಡೆದ ಪ್ರಫುಲ್ ಹಿಂಗೆ ಅದ್ಭುತ ಪ್ರದರ್ಶನ ನೀಡಿದರು. ಡ್ರೀಮ್ ಸ್ಪೆಲ್ ಮಾಡಿದ ಪ್ರಫುಲ್ ಹಿಂಗೆ ಎಸ್‌ಆರ್‌ಎಚ್ ಅಭಿಮಾನಿಗಳ ನೂತನ ಸೂಪರ್ ಸ್ಟಾರ್ ಆದರು.
ಪಂದ್ಯಕ್ಕೆ ತಿರುವು ನೀಡಿದ್ದು ಇವರೇ..
ಇನಿಂಗ್ಸ್ ಹಾಗೂ ತಮ್ಮ ಮೊದಲ ಓವರ್‌ನ ಎರಡನೇ ಎಸೆತದಲ್ಲಿ ಈ ಬಾರಿಯ ಆರೆಂಜ್ ಕ್ಯಾಪ್ ರೇಸ್‌ನಲ್ಲಿ ಮುಂಚೂಣಿಯಲ್ಲಿರುವ ವೈಭವ್ ಸೂರ್ಯವಂಶಿ ಅವರಿಗೆ ಖೆಡ್ಡಾ ತೋಡಿದರು. 15 ವರ್ಷದ ಯುವ ಆಟಗಾರ ವೈಭವ್‌ಗೆ ಬೌನ್ಸರ್ ಎಸೆದರು. ಈ ಎಸೆತವನ್ನು ವೈಭವ್ ಬಿಗ್ ಹಿಟ್ ಬಾರಿಸಲು ಹೋಗಿ ಸಲಿಲ್ ಆರೋರಾಗೆ ಕ್ಯಾಚ್ ನೀಡಿದರು. ರಾಯಲ್ಸ್ ಅಭಿಮಾನಿಗಳ ಮುಖದಲ್ಲಿ ನಿರಾಸೆ ಕಂಡು ಬಂದಿತು. ಇದೇ ಓವರ್‌ನ ನಾಲ್ಕನೇ ಎಸೆತದಲ್ಲಿ ಹಿಂಗೆ, ಬ್ಯಾಕ್ ಆಫ್ ಲೆಂಥ್ ಔಟ್ ಸೈಡ್ ಆಫ್ ಸ್ಟಂಪ್ ಎಸೆತವನ್ನು ಎಸೆದರು. ಈ ಎಸೆತವನ್ನು ಎದುರಿಸುವಲ್ಲಿ ಧ್ರುವ್ ಜುರೇಲ್ ವಿಫಲರಾಗಿ ಬೋಲ್ಡ್ ಆದರು.
ದಕ್ಷಿಣ ಆಫ್ರಿಕಾದ 20 ವರ್ಷದ ಆಟಗಾರ ಲ್ಹುವಾನ್-ಡ್ರೆ ಪ್ರಿಟೋರಿಯಸ್ ಅವರನ್ನು ಪ್ರಫುಲ್ ಹಿಂಗೆ ಕೊನೆಯ ಎಸೆತದಲ್ಲಿ ಪೆವೆಲಿಯನ್‌ಗೆ ಅಟ್ಟಿದರು. ಅಲ್ಲದೆ ತಮ್ಮ ಎರಡನೇ ಓವರ್‌ನಲ್ಲಿ ನಾಯಕ ರಿಯಾನ್ ಪರಾಗ್ ಅವರನ್ನು ಔಟ್ ಮಾಡಿ ಆರಂಭದಲ್ಲಿ ಸನ್‌ರೈಸರ್ಸ್ ಗೆಲುವಿನ ಕನಸು ಕಾಣಲು ನೆರವಾದರು. ಇವರ ಭರ್ಜರಿ ಬೌಲಿಂಗ್ ಪ್ರದರ್ಶನದಿಂದಲೇ ಎಸ್‌ಆರ್‌ಎಚ್ 57 ರನ್ ಜಯ ದಾಖಲಿಸಿತು. ಪ್ರಫುಲ್ ಹಿಂಗೆ 4 ಓವರ್‌ಗಳಲ್ಲಿ 34 ರನ್ ನೀಡಿ 4 ವಿಕೆಟ್ ಪಡೆದರು. ಇವರ ಅಮೋಘ ದಾಳಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಸಹ ಲಭಿಸಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications