ಆಸಿಸ್ ವಿರುದ್ಧದ ಟಿ20 ಸರಣಿಗೆ ಶ್ರೀಲಂಕಾ ತಂಡ ಪ್ರಕಟ: ತಂಡಕ್ಕೆ ಮರಳಿದ ಐಪಿಎಲ್ ಸ್ಟಾರ್‌ಗಳು!

ಆಸ್ಟ್ರೇಲಿಯಾ ಹಾಗೂ ಶ್ರೀಲಂಕಾ ನಡುವಿನ ಟಿ20 ಸರಣಿಗೆ ದಿನಗಣನೆ ಆರಂಭವಾಗಿದ್ದು ಶ್ರೀಲಂಕಾ ತಂಡ ಈ ಸರಣಿಗೆ ತನ್ನ ಬಳಗವನ್ನು ಹೆಸರಿಸಿದೆ. ಟಿ20 ಸ್ಟಾರ್‌ಗಳನ್ನು ಹೊಂದಿರುವ ಬಲಿಷ್ಠ ತಂಡ ಇದಾಗಿದ್ದು ಚಾಂಪಿಯನ್ ಆಸ್ಟ್ರೇಲಿಯಾ ವಿರುದ್ಧ ಅದ್ಭುತ ಪ್ರದರ್ಶನ ನೀಡಿ ಸರಣಿ ಗೆಲ್ಲುವ ಯೋಜನೆಯಲ್ಲಿದೆ ಶ್ರೀಲಂಕಾ ಪಡೆ. 18 ಆಟಗಾರರ ತಂಡವನ್ನು ಶ್ರೀಲಂಕಾ ಕ್ರಿಕೆಟ್ ಮಂಡಳಿ ಘೋಷಣೆ ಮಾಡಿದೆ.
ಜೂನ್ 7ರಿಂದ ಆಸ್ಟ್ರೇಲಿಯಾದ ಶ್ರೀಲಂಕಾ ಪ್ರವಾಸ ಆರಂಭವಾಗಲಿದ್ದು ಮೊದಲಿಗೆ ಮೂರು ಪಂದ್ಯಗಳ ಟಿ20 ಸರಣಿ ಆಯೋಜನೆಯಾಗಲಿದ್ದು ನಂತರ ಐದು ಪಂದ್ಯಗಳ ಏಕದಿನ ಸರಣಿ ಹಾಗೂ ಬಳಿಕ ಎರಡು ಟೆಸ್ಟ್ ಪಂದ್ಯಗಳಲ್ಲಿ ಈ ಎರಡು ತಂಡಗಳು ಮುಖಾಮುಖಿಯಾಗಲಿದೆ. ದಸುನ್ ಶನಕ ಸೀಮಿತ ಓವರ್‌ಗಳ ತಂಡವನ್ನು ಮುನ್ನಡೆಸಿದರೆ ದಿಮುತ್ ಕರುಣರತ್ನೆ ಟೆಸ್ಟ್ ತಂಡದ ನಾಯಕತ್ವ ವಹಿಸಿಕೊಳ್ಳಲಿದ್ದಾರೆ.

ತಂಡಕ್ಕೆ ಮರಳಿದ ಐಪಿಎಲ್ ಸ್ಟಾರ್‌ಗಳು
ಇನ್ನು ಈ ಬಾರಿಯ ಐಪಿಎಲ್‌ನಲ್ಲಿ ಅದ್ಬುತ ಪ್ರದರ್ಶನ ನೀಡಿ ಮಿಂಚಿದ ಶ್ರೀಲಂಕಾದ ಆಟಗಾರರಾದ ವನಿಂದು ಹಸರಂಗ ಹಾಗೂ ಭಾನುಕಾ ರಾಜಪಕ್ಷ ರಾಷ್ಟ್ರೀಯ ತಂಡಕ್ಕೆ ಮರಳಿದ್ದಾರೆ. ಕಳೆದ ಆಸ್ಟ್ರೇಲಿಯಾ ಪ್ರವಾಸದಲ್ಲಿ ಶ್ರೀಲಂಕಾ ಪರವಾಗಿ ಆಡಿದ್ದ ಹಸರಂಗ ಭಾರತ ವಿರುದ್ಧದ ಸರಣಿಯಲ್ಲಿ ಭಾಗಿಯಾಗಿರಲಿಲ್ಲ. ಹಸರಂಗಾ ಐಪಿಎಲ್‌ನಲ್ಲಿ ಒಂದು ವಿಕೆಟ್‌ನಿಂದ ಆರೆಂಜ್ ಕ್ಯಾಪ್ ತಪ್ಪಿಸಿಕೊಂಡರೆ ಭಾನುಕ ರಾಜಪಕ್ಷ ಸ್ಪೋಟಕ ಬ್ಯಾಟಿಂಗ್ ಮೂಲಕ ಮಯಾಂಕ್ ಅಗರ್ವಾಲ್ ನೇತೃತ್ವದ ಪಂಜಾಬ್ ಕಿಂಗ್ಸ್ ಪರವಾಗಿ ಅದ್ಭುತ ಪ್ರದರ್ಶನ ನೀಡಿ ಗಮನಸೆಳೆದಿದ್ದಾರೆ.

ಮಥೀಶ ಪಥಿರಣಗೂ ದೊರೆತ ಅವಕಾಶ
ಇನ್ನು ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರವಾಗಿ ಆಡಿ ಭರವಸೆಯ ಪ್ರದರ್ಶನ ನೀಡಿದ್ದ ಮಥೀಶ ಪಥಿರಣ ಕೂಡ ಈ ಸರಣಿಯಲ್ಲಿ ಅವಕಾಶ ಪಡೆದುಕೊಂಡಿದ್ದಾರೆ. ಶ್ರೀಲಂಕಾದ ಅಂಡರ್ 19 ತಂಡದ ವೇಗದ ಬೌಲರ್ ಐಪಿಎಲ್‌ನಲ್ಲಿ ನೀಡಿದ ಪ್ರದರ್ಶನಕ್ಕೆ ಸಿಎಸ್‌ಕೆ ನಾಯಕ ಎಂಎಸ್ ಧೋನಿ ಕೂಡ ಪ್ರಶಂಸೆಯನ್ನು ವ್ಯಕ್ತಪಡಿಸಿದ್ದರು. ಆಡಂ ಮಿಲ್ನೆ ಬದಲಾಗಿ ಸಿಎಸ್‌ಕೆ ತಂಡದಲ್ಲಿ ಪಥಿರಣ ಅವಕಾಶ ಪಡೆದುಕೊಂಡಿದ್ದರು.

ಮೂರು ಮಾದರಿಯ ಸರಣಿ
ಮೂರು ಮಾದರಿಯ ಸರಣಿ ಮೊದಲಿಗೆ ಟಿ20 ಸರಣಿ ನಡೆಯಲಿದ್ದು ಮೂರು ಪಂದ್ಯಗಳ ಈ ಸರಣಿ ಜೂನ್ 7ರಿಂದ ಜೂನ್ 11ರ ಮಧ್ಯೆ ನಡೆಯಲಿದೆ. ಅದಾದ ಬಳಿಕ ಏಕದಿನ ಸರಣಿ ಆಯೋಜನೆಯಾಗಲಿದ್ದು ಐದು ಪಂದ್ಯಗಳ ಈ ಸರಣಿ ಜೂನ್ 14ರಿಂದ 24ರ ಮಧ್ಯೆ ನಿಗದಿಯಾಗಿದೆ. ಎರಡು ಪಂದ್ಯಗಳ ಟೆಸ್ಟ್ ಸರಣಿಯೊಂದಿಗೆ ಆಸ್ಟ್ರೇಲಿಯಾದ ಈ ಪ್ರವಾಸ ಅಂತ್ಯವಾಗಲಿದ್ದು ಜೂನ್ 29ರಿಂದ ಜುಲೈ3ರ ವರೆಗೆ ಮೊದಲ ಟೆಸ್ಟ್ ಹಾಗೂ ಜುಲೈ 8-12ರವರೆಗೆ 2ನೇ ಟೆಸ್ಟ್ ನಡೆಯಲಿದೆ.

ಶ್ರೀಲಂಕಾ ಸ್ಕ್ವಾಡ್ ಹೀಗಿದೆ
ದಾಸುನ್ ಶನಕ (ನಾಯಕ), ಪಾತುಮ್ ನಿಸ್ಸಾಂಕ, ದನುಷ್ಕ ಗುಣತಿಲಕ, ಕುಸಲ್ ಮೆಂಡಿಸ್, ಚರಿತ್ ಅಸಲಂಕ, ಭಾನುಕ ರಾಜಪಕ್ಸೆ, ನುವಾನಿದು ಫೆರ್ನಾಂಡೋ, ಲಹಿರು ಮಧುಶಂಕ, ವನಿಂದು ಹಸರಂಗ, ಚಾಮಿಕ ಕರುಣಾರತ್ನ, ದುಷ್ಮಂತ ಚಮೀರ, ಕಸುನ್ ರಜಿತ, ನುವಾನ್ ತುಷಾನ, ಮಥೀಶ ಮೆಣೇಶ ಠೇಷ್ಣ, ನುವಾನ್ ತುಷಾನ, ಮಥೀಶಾ, ಮಥೀಶಾ , ಪ್ರವೀಣ್ ಜಯವಿಕ್ರಮ, ಲಕ್ಷಣ ಸಂಡಕನ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications