ಟಿ20 ಪಂದ್ಯದ ಟಾಸ್ ಗೆದ್ದಿದ್ದು ಯಾರು? ಕೊಹ್ಲಿನಾ? ತರಂಗಾ?
ಬೆಂಗಳೂರು, ಸೆ. 07: ಶ್ರೀಲಂಕಾ ವಿರುದ್ಧದ ಏಕೈಕ ಟಿ-20 ಪಂದ್ಯವನ್ನು ಟೀಂ ಇಂಡಿಯಾ 7 ವಿಕೆಟ್ ಗಳಿಂದ ಸುಲಭವಾಗಿ ಗೆಲುವು ಸಾಧಿಸಿ ವಿಜಯೋತ್ಸವ ಆಚರಿಸಿದೆ. ಆದರೆ, ಪಂದ್ಯದ ಆರಂಭದಲ್ಲಿ ಟಾಸ್ ಹಾಕುವಾಗ ಗೊಂದಲ ಮೂಡಿತ್ತು.
ಟೆಸ್ಟ್, ಏಕದಿನ ಹಾಗೂ ಟಿ-20 ಮೂರು ಸರಣಿಗಳನ್ನು ಕ್ಲೀನ್ ಸ್ವೀಪ್ ಮಾಡಿ ಐತಿಹಾಸಿಕ ದಾಖಲೆಯನ್ನು ಕೊಹ್ಲಿ ಪಡೆ ಬರೆದಿದೆ. ಶ್ರೀಲಂಕಾ ನೀಡಿದ್ದ 171ರನ್ ಗಳ ಮೊತ್ತವನ್ನು ಭಾರತ ಸುಲಭವಾಗಿ ಚೇಸ್ ಮಾಡಿದೆ.

ಟಾಸ್ ಗೊಂದಲ: ಉಭಯ ತಂಡಗಳ ನಾಯಕರು ಹಾಗೂ ಮ್ಯಾಚ್ ರೆಫ್ರಿ ಆಂಡಿ ಪೈಕ್ರಾಫ್ಟ್ ಅವರ ಜತೆ ಮುರಳಿ ಕಾರ್ತಿಕ್ ಅವರು ಟಾಸ್ ಕಾರ್ಯಕ್ರಮ ನಡೆಸಿಕೊಟ್ಟರು.
ಶ್ರೀಲಂಕಾದ ನಾಯಕ ಉಪುಲ್ ತರಂಗಾ ಅವರು ನಾಣ್ಯವನ್ನು ಮೇಲಕ್ಕೆ ಚಿಮ್ಮಿಸಿದರು. ಭಾರತ ತಂಡದ ನಾಯಕ ಕೊಹ್ಲಿ ಹೆಡ್ಸ್ ಅಂತಾ ಹೇಳಿದರು. ಆದರೆ, ರೆಫ್ರಿ ಅವರಿಗೆ ಕೊಹ್ಲಿ ಟೇಲ್ಸ್ ಅಂತಾ ಹೇಳಿದಂತೆ ಕೇಳಿಸಿ ಗೊಂದಲಕ್ಕೀಡಾಗಿದ್ದಾರೆ.
ಟಾಸ್ ಗೆದ್ದ ಕೊಹ್ಲಿಯನ್ನು ಕರೆದ ಮುರುಳಿ, ಅವರ ಆಯ್ಕೆ ಏನು ಅಂತಾ ಪ್ರಶ್ನಿಸಿದ್ದಾರೆ. ಕೊಹ್ಲಿ ಅವರು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು.ಶ್ರೀಲಂಕಾ ಟಾಸ್ ಗೆದ್ದಿರುವಾಗ ಕೊಹ್ಲಿ ಆಯ್ಕೆ ಹೇಗೆ ಮಾಡಿಕೊಂಡರು ಎಂಬ ಗೊಂದಲ ಮೂಡಿತು.
ರೆಫ್ರಿ ಹಾಗೂ ಅಧಿಕೃತ ಕಾಮೆಂಟೆಟರ್ ಗಳ ನಡುವಿನ ಸಂವಹನ ಕೊರತೆಯಿಂದ ಗೊಂದಲ ಉಂಟಾಯಿತು. ತರಂಗಾ ಟಾಸ್ ಗೆದ್ದರೂ ಮುರಳಿ ಕಾರ್ತಿಕ್ ಅವರು ಕೊಹ್ಲಿಯನ್ನು ಕರೆದು ಆಯ್ಕೆ ಕೇಳಿದ್ದು ಏಕೆ? ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications