ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಗೆ 18 ಸದಸ್ಯರ ಶ್ರೀಲಂಕಾ ತಂಡ ಪ್ರಕಟ

ಸದ್ಯ ಕ್ರಿಕೆಟ್ ಲೋಕ ಭಾರತದಲ್ಲಿ ನಡೆಯುತ್ತಿರುವ ಚುಟುಕು ಕ್ರಿಕೆಟ್ ಸಮರ ಐಪಿಎಲ್ ಹಂಗಾಮವನ್ನು ಆಸ್ವಾದಿಸುತ್ತಿದೆ. ಈ ಸಂದರ್ಭದಲ್ಲಿ ಶ್ರೀಲಂಕಾ ಹಾಗೂ ಬಾಂಗ್ಲಾದೇಶ ತಂಡಗಳು ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌ಗೆ ಸಜ್ಜಾಗುತ್ತಿದೆ. ಜಿಂಬಾಬ್ವೆ ವಿರುದ್ಧ ಶ್ರೀಲಂಕಾ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಪಾಳ್ಗೊಳ್ಳಲಿದೆ.
ಈ ಸರಣಿಯಲ್ಲಿ ಶ್ರೀಲಂಕಾ ತಂಡವನ್ನು ದಿಮುತ್ ಕರುಣರತ್ನ ಮುನ್ನಡೆಸಲಿದ್ದಾರೆ. ಏಂಜಲೋ ಮ್ಯಾಥ್ಯೂಸ್, ಲಹಿರು ತಿರಿಮನ್ನೆ, ದಿನೇಶ್ ಚಾಂಡಿಮಲ್ ಮತ್ತು ಸುರಂಗ ಲಕ್ಮಲ್ ಅವರಂತಾ ಅನುಭವಿ ಆಟಗಾರರು ಕೂಡ ಈ ಸರಣಿಯಲ್ಲಿ ಭಾಗಿಯಾಗಲಿದ್ದಾರೆ.
ಗಾಯಗೊಂಡಿರುವ ಕಾರಣ ಲಸಿತ್ ಎಂಬುಲ್ಡೇನಿಯಾ ಗಾಯಗೊಂಡಿರುವ ಕಾರಣ ಈ ಸರಣಿಯಲ್ಲಿ ಅವಕಾಶವನ್ನು ಪಡೆದಿಲ್ಲ. ಮತ್ತೊಂದೆಡೆ ಟೆಸ್ಟ್ ಕ್ರಿಕೆಟ್‌ನಲ್ಲಿ ನೀಡಿದ ಕಳಪೆ ಪ್ರದರ್ಶನದ ಹಿನ್ನೆಲೆಯಲ್ಲಿ ಕುಸಲ್ ಮೆಂಡಿಸ್ ಕೂಡ ಹೆಸರಿಸಲಾದ 18 ಆಟಗಾರರ ತಂಡದಿಂದ ಹೊರಬಿದ್ದಿದ್ದಾರೆ.
ಶ್ರೀಲಂಕಾ ಟೆಸ್ಟ್ ಸ್ಕ್ವಾಡ್:
ದಿಮುತ್ ಕರುಣರತ್ನ (ನಾಯಕ), ಲಹಿರು ತಿರಿಮನ್ನೆ, ಓಷಾಡಾ ಫರ್ನಾಂಡೊ, ಪಾತುಮ್ ನಿಸ್ಸಂಕ, ದಿನೇಶ್ ಚಂಡಿಮಲ್, ಏಂಜೆಲೊ ಮ್ಯಾಥ್ಯೂಸ್, ರೋಶೆನ್ ಸಿಲ್ವಾ, ಧನಂಜಯ ಡಿ ಸಿಲ್ವಾ, ನಿರೋಷನ್ ಡಿಕ್ವೆಲ್ಲಾ, ದಶುನ್ ಶಾನಕಾ, ವನಿಂದು ಹಸರಂಗ, ರಮೇಶ್ ಮೆಂಡಿಸ್, ಸುರಂಗ ಲಕ್ಮಲ್, ವಿಶ್ವ ಫರ್ನಾಂಡೊ, ಲಹಿರು ಕುಮಾರ, ಅಸಿಥಾ ಫರ್ನಾಂಡೊ, ದಿಲ್ಶನ್ ಮಧುಶಂಕಾ, ಪ್ರವೀಣ್ ಜಯವಿಕ್ರಮ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications