SL vs NZ ODI: ಅವಿಷ್ಕಾ, ಕುಸಾಲ್ ಶತಕ: ಕಿವೀಸ್ ವಿರುದ್ಧ ಲಂಕಾಗೆ 45 ರನ್‌ಗಳ ಜಯ
ಭರವಸೆಯ ಬ್ಯಾಟರ್ ಅವಿಷ್ಕಾ ಫೆರ್ನಾಂಡೋ ಹಾಗೂ ಕುಸಾಲ್ ಮೆಂಡಿಸ್ ಅವರುಗಳು ಬಾರಿಸಿದ ಶತಕದ ನೆರವಿನಿಂದ ಶ್ರೀಲಂಕಾ ಮಳೆ ಬಾಧಿತ ಮೊದಲ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು 45 ರನ್‌ಗಳಿಂದ ಮಣಿಸಿ, 3 ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಕಿವೀಸ್ ತಂಡದ ಯಾವೊಬ್ಬ ಬ್ಯಾಟರ್ ಜವಾಬ್ದಾರಿಯುತ ಆಟವನ್ನು ಆಡದ ಪರಿಣಾಮ ಸೋಲನ್ನು ಕಾಣಬೇಕಾಯಿತು.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ 49.2 ಓವರ್‌ಗಳಲ್ಲಿ 5 ವಿಕೆಟ್‌ಗೆ 324 ರನ್ ಗಳಿಸಿದ್ದಾಗ ಮಳೆ ಕಾಟ ನೀಡಿತು. ಹೀಗಾಗಿ ಇನಿಂಗ್ಸ್‌ಗೆ ಮುಕ್ತಾಯ ಹೇಳಲಾಯಿತು. ನ್ಯೂಜಿಲೆಂಡ್ ತಂಡಕ್ಕೆ ಡಕ್ವರ್ತ್ ಲೂಯಿಸ್ ನಿಯಮದ ಪ್ರಕಾರ 27 ಓವರ್‌ಗಳಿಗೆ 221 ರನ್ ಟಾರ್ಗೆಟ್ ನೀಡಲಾಯಿತು. ಆದರೆ ಕಿವೀಸ್ ನಿಗದಿತ ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 175 ರನ್ ಸೇರಿಸಿ ಸೋಲು ಕಂಡಿತು.

2ನೇ ವಿಕೆಟ್‌ಗೆ ದ್ವಿಶತಕ ಜೊತೆಯಾಟ
ಶ್ರೀಲಂಕಾ ತಂಡದ ಪರ ಇನಿಂಗ್ಸ್ ಆರಂಭಿಸಿದ ಪತುಮ ನಿಸ್ಸಂಕ 12 ರನ್‌ಗಳಿಸಲು ಅಷ್ಟೇ ಸಾಧ್ಯವಾಯಿತು. 17 ರನ್‌ಗಳಿಗೆ ಒಂದು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ಅವಿಷ್ಕಾ ಫೆರ್ನಾಂಡೋ ಹಾಗೂ ಕುಸಾಲ್ ಮೆಂಡಿಸ್ ಅಮೋಘ ಜೊತೆಯಾಟದ ಕಾಣಿಕೆ ನೀಡಿದರು. ಈ ಜೋಡಿ ಕಿವೀಸ್ ಬೌಲರ್‌ಗಳನ್ನು ಮನ ಬಂದಂತೆ ಕಾಡಿದರು. ಈ ಜೋಡಿ 215 ಎಸೆತಗಳಲ್ಲಿ 206 ರನ್ ಸೇರಿಸಿತು.
ಅವಿಷ್ಕಾ ಫೆರ್ನಾಂಡೋ 115 ಎಸೆತಗಳಲ್ಲಿ, 9 ಬೌಂಡರಿ, 2 ಸಿಕ್ಸರ್ ಸಹಾಯದಿಂದ ಶತಕ ಬಾರಿಸಿ ಅಬ್ಬರಿಸಿದರು. ಮಧ್ಯಮ ಕ್ರಮಾಂಕದ ಕುಸಾಲ್ ಮೆಂಡಿಸ್ ಸಹ ತಮ್ಮ ಕ್ಲಾಸಿಕ್ ಆಟದ ಪ್ರದರ್ಶನ ನೀಡಿದರು. ಇವರು 128 ಎಸೆತಗಳಲ್ಲಿ 17 ಬೌಂಡರಿ, 2 ಸಿಕ್ಸರ್ ಸಹಾಯದಿಂದ 143 ರನ್ ಸಿಡಿಸಿ ತಂಡಕ್ಕೆ ಆಧಾರವಾದರು.

ಶ್ರೀಲಂಕಾದ ಪರ ಚರಿತ್ ಅಸಲಂಕಾ 3 ಬೌಂಡರಿ, 2 ಸಿಕ್ಸರ್ ನೆರವಿನಿಂದ 40 ರನ್ ಬಾರಿಸಿದರೆ, ಜನಿತ್ ಲಿಯಾನಗೆ 12 ರನ್ ಸಿಡಿಸಿದರು.
ಕಿವೀಸ್ ಪರ ಜಾಕೋಬ್ ಡಫಿ 8.2 ಓವರ್ ಬೌಲ್ ಮಾಡಿ 41 ರನ್ ನೀಡಿ 3 ವಿಕೆಟ್ ಕಬಳಿಸಿದರು. ಉಳಿದಂತೆ ಮೈಕೆಲ್ ಬ್ರೇಸ್ವೆಲ್ ಹಾಗೂ ಇಶ್ ಸೌದಿ ತಲಾ ಒಂದು ವಿಕೆಟ್ ಪಡೆದರು.
ಭರ್ಜರಿ ಆರಂಭ
ಗುರಿಯನ್ನು ಹಿಂಬಾಲಿಸಿದ ನ್ಯೂಜಿಲೆಂಡ್ ತಂಡದ ಆರಂಭ ಭರ್ಜರಿಯಾಗಿತ್ತು. ಆರಂಭಿಕ ವಿಲ್ ಯಂಗ್, ಟಿಮ್ ರಾಬಿನ್ಸನ್ ಉತ್ತಮ ಜೊತೆಯಾಟದ ಕಾಣಿಕೆ ನೀಡಿದರು. ಈ ಜೋಡಿ 13.2 ಓವರ್‌ಗಳಲ್ಲಿ 88 ರನ್ ಜೊತೆಯಾಟವನ್ನು ನೀಡಿತು. ಟಿಮ್ ರಾಬಿನ್ಸನ್ 35, ವಿಲ್ ಯಂಗ್ 48 ರನ್‌ಗಳಿಗೆ ಔಟ್ ಆದರು.
ಕಿವೀಸ್ ಪರ ಮೈಕೆಲ್ ಬ್ರೇಸ್ವೆಲ್ ಅಜೇಯ 34 ಹಾಗೂ ಮಿಚೆಲ್ ಹೇ 10 ರನ್ ಬಾರಿಸಿ ಸೋಲಿನ ಅಂತರವನ್ನು ಕಡಿಮೆ ಮಾಡಿದರು.
ಲಂಕಾದ ಪರ ದಿಲ್ಶನ್ ಮಧುಶಂಕ 3, ಮಹೀಶ್ ತೀಕ್ಷಣ ಹಾಗೂ ಚರಿತ್ ಅಸಲಂಕಾ ತಲಾ ಎರಡು ವಿಕೆಟ್ ಪಡೆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications