For Quick Alerts
ALLOW NOTIFICATIONS  
For Daily Alerts
 

ಎಂಎಸ್ ಧೋನಿ ದಾಖಲೆ ಸರಿದೂಗಿಸಿದ ಲಂಕಾ ನಾಯಕ ದಸುನ್ ಶನಕಾ

Sri Lanka captain Dasun Shanaka equals MS Dhoni’s record against Pakistan

ಲಾಹೋರ್, ಅಕ್ಟೋಬರ್ 10: ಶ್ರೀಲಂಕಾದ ಟಿ20ಐ ನಾಯಕ ದಸುನ್ ಶನಕಾ, ಎಂಎಸ್ ಧೋನಿ ಮತ್ತು ಮೈಕಲ್ ಕ್ಲಾರ್ಕ್ ಹೆಸರಿನ ದಾಖಲೆಯೊಂದನ್ನು ಸರಿದೂಗಿಸಿಕೊಂಡಿದ್ದಾರೆ. ಲಾಹೋರ್‌ನಲ್ಲಿ ಮುಕ್ತಾಯಗೊಂಡ ಶ್ರೀಲಂಕಾ-ಪಾಕಿಸ್ತಾನ ನಡುವಿನ 3ನೇ ಟಿ20 ಪಂದ್ಯದ ಜಯದೊಂದಿಗೆ ಶನಕಾ ಈ ಅಪರೂಪದ ದಾಖಲೆಗೆ ಕಾರಣರಾಗಿದ್ದಾರೆ.

ನಾಯಕರಾಗಿದ್ದು ಆಡಿದ ಮೊದಲ ಮೂರೂ ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಜಯ ಗಳಿಸಿದ್ದಕ್ಕಾಗಿ ಶನಕಾ ಅವರು ಎಂಎಸ್ ಧೋನಿ ಮತ್ತು ಮೈಕಲ್ ಕ್ಲಾರ್ಕ್ ದಾಖಲೆ ಸಾಲಿನಲ್ಲಿ ಸೇರಿಸಿಕೊಂಡಿದ್ದಾರೆ. ಪಾಕಿಸ್ತಾನ ವಿರುದ್ಧ ಆಡಿದ ಮೊದಲ 3 ಟಿ20 ಪಂದ್ಯಗಳಲ್ಲಿ ಗೆಲುವು ದಾಖಲಿಸಿದ 3ನೇ ನಾಯಕನಾಗಿ ದಸುನ್ ಶನಕಾ ಗುರುತಿಸಿಕೊಂಡಿದ್ದಾರೆ.

ಪಾಕಿಸ್ತಾನ ಪ್ರವಾಸದಲ್ಲಿರುವ ಶ್ರೀಲಂಕಾ ತಂಡ 3 ಪಂದ್ಯಗಳ ಏಕದಿನ ಸರಣಿಯನ್ನು 2-0ಯಿಂದ ಸೋತಿತ್ತು. ಆದರೆ ಅಂತಾರಾಷ್ಟ್ರೀಯ ಟಿ20ಯಲ್ಲಿ ನಂ.1 ಸ್ಥಾನದಲ್ಲಿರುವ ಪಾಕಿಸ್ತಾನವನ್ನು ಟಿ20 ಸರಣಿಯ ಮೂರೂ ಪಂದ್ಯಗಳಲ್ಲಿ ಸೋಲಿಸಿ ಲಂಕಾ ಪಾರಮ್ಯ ಮೆರೆದಿದೆ.

ಲಸಿತ್ ಮಾಲಿಂಕಾ ಪಾಕ್‌ಗೆ ಪ್ರವಾಸ ಕೈಗೊಳ್ಳಲು ನಿರಾಕರಿಸಿದ್ದರಿಂದ ಟಿ20ಐ ತಂಡಕ್ಕೆ ನಾಯಕನಾಗಿ ಶನಕಾ ಆಯ್ಕೆಯಾಗಿದ್ದರು. ಪಾಕಿಸ್ತಾನಕ್ಕೆ ಪ್ರವಾಸ ಕೈಗೊಳ್ಳಲು ನಿರಾಕರಿಸಿದ 10 ಶ್ರೀಲಂಕಾ ಆಟಗಾರರಲ್ಲಿ ಏಕದಿನ ತಂಡದ ದಿಮುತ್ ಕರುಣರತ್ನೆ ಕೂಡ ಸೇರಿದ್ದಾರೆ.

Story first published: Thursday, October 10, 2019, 15:31 [IST]
Other articles published on Oct 10, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+