For Quick Alerts
ALLOW NOTIFICATIONS  
For Daily Alerts
 

SL vs WI: 5 ವಿಕೆಟ್‌ಗಳಿಂದ ವಿಂಡೀಸ್‌ ಮಣಿಸಿದ ಶ್ರೀಲಂಕಾ

ಪಲ್ಲೆಕೆಲೆ: ಭರವಸೆಯ ಬೌಲರ್‌ ಮಹೇಶ್‌ ತೀಕ್ಷಣ ಹಾಗೂ ವನಿಂದು ಹಸರಂಗ್‌ ಅವರ ಮಾರಕ ದಾಳಿಯ ನೆರವಿನಿಂದ ಶ್ರೀಲಂಕಾ, ಪ್ರವಾಸಿ ವೆಸ್ಟ್‌ ಇಂಡೀಸ್‌ ವಿರುದ್ಧ ನಡೆದ ಎರಡನೇ ಏಕದಿನ ಪಂದ್ಯದಲ್ಲಿ 5 ವಿಕೆಟ್‌ಗಳ ಜಯ ಸಾಧಿಸಿದೆ.

ಟಾಸ್‌ ಸೋತರೂ ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್‌ 36 ಓವರ್‌ಗಳಲ್ಲಿ 189 ರನ್‌ಗಳಿಗೆ ಸರ್ವಪತನ ಕಂಡಿತು. ಗುರಿಯನ್ನು ಹಿಂಬಾಲಿಸಿದ ಆತಿಥೇಯ ಲಂಕಾ 38.2 ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು 190 ರನ್‌ ಸಿಡಿಸಿ ಜಯ ಸಾಧಿಸಿತು. ಈ ಮೂಲಕ ಲಂಕಾ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಲಂಕಾ 2-0 ಮುನ್ನಡೆ ಸಾಧಿಸಿದೆ.

Sri Lanka Clinches 5-Wicket Victory Over West Indies to Secure 2-0 Series Lead in Pallekele ODI

ಕಳಪೆ ಆರಂಭ

ಮೊದಲು ಬ್ಯಾಟ್ ಮಾಡಿದ ವೆಸ್ಟ್‌ ಇಂಡೀಸ್ ತಂಡದ ಆರಂಭ ಕಳಪೆಯಾಗಿತ್ತು. ಸ್ಟಾರ್ ಆಟಗಾರರು ರನ್‌ ಕಲೆ ಹಾಕುವಲ್ಲಿ ವಿಫಲರಾದರು. ಟಾಪ್‌ ಆರ್ಡರ್‌ ಬ್ಯಾಟರ್‌ಗಳು, ಮಧ್ಯಮ ಕ್ರಮಾಂಕದ ಭರವಸೆಯ ಬ್ಯಾಟರ್‌ಗಳು ಲಂಕಾ ಬೌಲರ್‌ಗಳು ತೋಡಿದ ಖೆಡ್ಡಾಗೆ ಬಲಿಯಾದರು. ವಿಂಡೀಸ್‌ ಕೇವಲ 15.2 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 58 ರನ್‌ ಸೇರಿಸಿತ್ತು.

ಒಂಬತ್ತನೇ ವಿಕೆಟ್‌ಗೆ ಗುಡಾಕೇಶ್ ಮೋಟಿ, ಶೆರ್ಫೇನ್ ರುದರ್‌ಫೋರ್ಡ್ ಜೋಡಿ ಅಮೋಘ ಜೊತೆಯಾಟದ ಕಾಣಿಕೆ ನೀಡಿತು. ಪರಿಣಾಮ ವಿಂಡೀಸ್‌ ಸಾಧಾರಣ ಮೊತ್ತವನ್ನು ಕಲೆ ಹಾಕಲು ಸಫಲವಾಯಿತು. ಈ ಜೋಡಿ 115 ಎಸೆತಗಳಲ್ಲಿ 119 ರನ್‌ ಕಲೆ ಹಾಕಿತು. ಶೆರ್ಫೇನ್ ರುದರ್‌ಫೋರ್ಡ್ 7 ಬೌಂಡರಿ, 4 ಸಿಕ್ಸರ್ ಸಹಾಯದಿಂದ 80 ರನ್ ಬಾರಿಸಿ ಔಟ್ ಅದರು. ಗುಡಾಕೇಶ್ 6 ಬೌಂಡರಿ ನೆರವಿನಿಂದ ಅಜೇಯ 50 ರನ್‌ ಸಿಡಿಸಿದರು.

ಮಹೇಶ್‌ ಅಬ್ಬರ

ಲಂಕಾ ತಂಡದ ಭರವಸೆಯ ಬೌಲರ್‌ ಮಹೇಶ್‌ ತೀಕ್ಷಣ 9 ಓವರ್ ಬೌಲಿಂಗ್ ನಡೆಸಿ 25 ರನ್‌ ನೀಡಿ ಪ್ರಮುಖ ಮೂರು ವಿಕೆಟ್‌ ಕಬಳಿಸಿದರು. ಸ್ಪಿನ್ ಬೌಲರ್‌ ವನಿಂದು ಹಸರಂಗ್‌ 40 ರನ್‌ ನೀಡಿ ನಾಲ್ಕು ವಿಕೆಟ್‌ ಪಡೆದರು. ಅಸಿತ ಫೆರ್ನಾಂಡೋ ಸಹ ಮೂರು ವಿಕೆಟ್‌ ಪಡೆದರು.

Sri Lanka Clinches 5-Wicket Victory Over West Indies to Secure 2-0 Series Lead in Pallekele ODI

ಲಂಕಾ ತಂಡದ ಆರಂಭವೂ ಕಳಪೆಯಾಗಿತ್ತು. ಅವಿಷ್ಕಾ ಫೆರ್ನಾಂಡೋ, ಕುಸಾಲ್ ಮೆಂಡಿಸ್ ಸಿಂಗಲ್‌ ಡಿಜಿಟ್‌ನಲ್ಲಿ ಆಟ ಮುಗಿಸಿದರು. ಲಂಕಾ 25 ರನ್‌ಗಳಿಗೆ ಎರಡು ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಈ ವೇಳೆ ನಿಶಾನ್‌ ಮಧುಶಂಕಾ (38), ಸದೀರ್ ಸಮರವಿಕ್ರಮ್ (38) ತಾಳ್ಮೆಯ ಆಟವನ್ನು ಆಡಿದರು. ಈ ಜೊಡಿ 65 ಎಸೆತಗಳಲ್ಲಿ 62 ರನ್‌ ಸೇರಿಸಿತು.

ಲಂಕಾ ತಂಡದ ನಾಯಕ ಚರಿತ್ ಅಸಲಂಕ 7 ಬೌಂಡರಿ, 1 ಸಿಕ್ಸರ್ ಸಹಾಯದಿಂದ ಅಜೇಯ 62 ರನ್ ಬಾರಿಸಿ ಗೆಲುವಿನಲ್ಲಿ ಮಿಂಚಿದರು. ಜನಿತ್ ಲಿಯಾನಗೆ 24 ರನ್‌ ಬಾರಿಸಿದ್ದಾಗ ಇಲ್ಲದ ರನ್‌ ಕದಿಯಲು ಹೋಗಿ ಔಟ್ ಆದರು. ಭರ್ಜರಿ ಪ್ರದರ್ಶನ ನೀಡಿದ ಮಹೇಶ್‌ ತೀಕ್ಷಣಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಲಭಿಸಿತು.

Story first published: Thursday, October 24, 2024, 6:31 [IST]
Other articles published on Oct 24, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+