SL vs NZ ODI: ಭಾರತದಲ್ಲಿ ಅಬ್ಬರಿಸಿದ್ದ ಕಿವೀಸ್‌ಗೆ ಲಂಕಾದಲ್ಲಿ ನಿರಾಸೆ
ಭಾರತದಲ್ಲಿ ನಡೆದಿದ್ದ ಟೆಸ್ಟ್ ಸರಣಿಯಲ್ಲಿ ಅಮೋಘ ಪ್ರದರ್ಶನ ನೀಡಿದ್ದ ನ್ಯೂಜಿಲೆಂಡ್ ತಂಡ, ಲಂಕಾ ಪ್ರವಾಸದಲ್ಲಿ ಮತ್ತೆ ಮುಗ್ಗರಿಸಿದೆ. ಭಾರತ ಪ್ರವಾಸಕ್ಕೂ ಮೊದಲು, ಲಂಕಾ ವಿರುದ್ಧ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು ಸೋತಿದ್ದ ನ್ಯೂಜಿಲೆಂಡ್, ಟೀಮ್ ಇಂಡಿಯಾ ವಿರುದ್ಧ ಆರ್ಭಟ ನಡೆಸಿತ್ತು. ರೋಹಿತ್ ಪಡೆಯನ್ನು ತವರಿನಲ್ಲಿ ವೈಟ್ ವಾಶ್ ಮಾಡಿದ ಹೆಗ್ಗಳಿಕೆಗೆ ಕಿವೀಸ್ ಪಾತ್ರವಾಗಿತ್ತು. ಈ ಗೆಲುವಿನ ಜೋಷ್ ಕಿವೀಸ್ ತಂಡಕ್ಕೆ ಲಂಕಾ ಸರಣಿಯಲ್ಲಿ ಕೈ ಹಿಡಿಯಲಿಲ್ಲ. ಎರಡನೇ ಏಕದಿನ ಪಂದ್ಯದಲ್ಲೂ ನ್ಯೂಜಿಲೆಂಡ್ ಸೋಲು ಕಂಡಿದೆ. ಈ ಮೂಲಕ ಇನ್ನು ಒಂದು ಏಕದಿನ ಸರಣಿ ಬಾಕಿ ಇರುವಂತೆ ಲಂಕಾ ಸರಣಿ ವಶಕ್ಕೆ ಮಾಡಿಕೊಂಡಿದೆ.
ಮಳೆ ಬಾಧಿತ ಎರಡನೇ ಏಕದಿನ ಪಂದ್ಯವನ್ನು 47 ಓವರ್‌ಗೆ ಇಳಿಸಲಾಯಿತು. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ ತಂಡದ ಆರಂಭ ಕಳಪೆಯಾಗಿತ್ತು. ತಂಡದ ಮೊತ್ತ 31 ಆಗುವಷ್ಟರಲ್ಲಿ ಟಿಮ್ ರಾಬಿನ್ಸನ್, ಹೆನ್ರಿ ನಿಕೋಲ್ಸ್ ಪೆವಿಲಿಯನ್ ಸೇರಿದರು. ಮೂರನೇ ವಿಕೆಟ್‌ಗೆ ವಿಲ್ ಯಂಗ್ ಹಾಗೂ ಮಾರ್ಕ್ ಚಾಂಪ್ಮನ್ ಸಾಧಾರಣ ಜೊತೆಯಾಟದ ಕಾಣಿಕೆ ನೀಡಿದರು. ಯಂಗ್ 26 ರನ್ ಬಾರಿಸಿದ್ದಾಗ ಔಟ್ ಆದರು. ಅನುಭವಿ ಗ್ಲೇನ್ ಫಿಲಿಪ್ಸ್ 15 ರನ್‌ಗಳಿಗೆ ಆಟ ಮುಗಿಸಿದರು.

ಐದನೇ ವಿಕೆಟ್‌ಗೆ 75 ರನ್ ಜೊತೆಯಾಟ
ಐದನೇ ವಿಕೆಟ್‌ಗೆ ಮಾರ್ಕ್ ಚಾಂಪ್ಮನ್ ಹಾಗೂ ಮಿಚೆಲ್ ಹೇ ಜೊತೆಗೂಡಿ ಉತ್ತಮ ಜೊತೆಯಾಟದ ಕಾಣಿಕೆ ನೀಡಿದರು. ಈ ಜೋಡಿ 78 ಎಸೆತಗಳಲ್ಲಿ 75 ರನ್ ಕಲೆ ಹಾಕಿತು. ಪರಿಣಾಮ ನ್ಯೂಜಿಲೆಂಡ್ ಸಾಧಾರಣ ಮೊತ್ತ ಕಲೆ ಹಾಕಲು ನೆರವಾಯಿತು. ಮಧ್ಯಮ ಕ್ರಮಾಂಕದ ಆಟಗಾರ ಚಾಂಪ್ಮನ್ 7 ಬೌಂಡರಿ, 3 ಸಿಕ್ಸರ್ ನೆರವಿನಿಂದ 76 ರನ್ ಸಿಡಿಸಿ ಔಟ್ ಆದರು. ಮಿಚೆಲ್ ಹೇ 62 ಎಸೆತಗಳಲ್ಲಿ 49 ರನ್ ಸೇರಿಸಿದರು. ಮಧ್ಯಮ ಕೆಳ ಕ್ರಮಾಂಕ ಹಾಗೂ ಕೆಳ ಕ್ರಮಾಂಕದ ಆಟಗಾರರು ಡಬಲ್ ಡಿಜಿಟ್ ಮುಟ್ಟಲೇ ಇಲ್ಲ. ಪರಿಣಾಮ ಕಿವೀಸ್ 45.1 ಓವರ್‌ಗಳಲ್ಲಿ 209 ರನ್ ಸೇರಿಸಿ ಆಲೌಟ್ ಆಯಿತು.

ಲಂಕಾ ಪರ ಜೆಫ್ರಿ ವಾಂಡರ್ಸೆ ಹಾಗೂ ಮಹೇಶ್ ತೀಕ್ಷಣ ತಲಾ ಮೂರು ವಿಕೆಟ್ ಕಬಳಿಸಿದರು.
ಮೆಂಡೀಸ್ ಏಕಾಂಗಿ ಹೋರಾಟ
ಗುರಿಯನ್ನು ಹಿಂಬಾಲಿಸಿದ ಲಂಕಾ ತಂಡದ ಆರಂಭಿಕ ಅವಿಶ್ಕಾ ಫರ್ನಾಂಡೋ ಹಾಗೂ ಪತನು ನಿಸಂಕಾ ಜವಾಬ್ದಾರಿ ಮರೆತರು. ಲಂಕಾ ತಂಡದ ಯಾವೊಬ್ಬ ಪ್ಲೇಯರ್ ಕುಸಾಲ್ ಮೆಂಡೀಸ್‌ಗೆ ಉತ್ತಮ ಸಾಥ್ ನೀಡಲಿಲ್ಲ. ಆದರೂ ಮೆಂಡಿಸ್ ಏಕಾಂಗಿ ಹೋರಾಟ ನಡೆಸಿ ತಂಡಕ್ಕೆ ಗೆಲುವಿನ ಮಾಲೆ ತೊಡಿಸಿದರು. ಮೆಂಡಿಸ್ 102 ಎಸೆತಗಳಲ್ಲಿ 6 ಬೌಂಡರಿ ಸಹಾಯದಿಂದ 74 ರನ್ ಕಲೆ ಹಾಕಿದರು. ಲಂಕಾ ಇನ್ನು ಆರು ಎಸೆತ ಬಾಕಿ ಇರುವಂತೆ 7 ವಿಕೆಟ್ ನಷ್ಟಕ್ಕೆ 210 ರನ್ ಸೇರಿಸಿ ಜಯ ಸಾಧಿಸಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications