Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಶ್ರೀಲಂಕಾ ಕ್ರಿಕೆಟ್‌ ಮಂಡಳಿಯಿಂದ 'ಲಂಕಾ ಟಿ10 ಲೀಗ್' ಘೋಷಣೆ

Sri Lanka Cricket announced T10 league tournament named Lanka T10 League

ವಿಶ್ವ ಕ್ರಿಕೆಟ್‌ನಲ್ಲಿ ಟಿ20 ಕ್ರಿಕೆಟ್ ಲೀಗ್‌ಗಳ ಅಬ್ಬರ ಜೋರಾಗಿರುವ ಹೊತ್ತಿನಲ್ಲೇ ಅದಕ್ಕೂ ಚುಟುಕಾಗಿರುವ ಟಿ10 ಕ್ರಿಕೆಟ್ ಲೀಗ್‌ಗಳು ಕೂಡ ಒಂದೊಂದಾಗಿ ಆರಂಭವಾಗುತ್ತಿದೆ. ಅಬುದಾಬಿ ಟಿ10 ಲೀಗ್‌ನ ಬಳಿಕ ಇದೀಗ ಶ್ರೀಲಂಕಾ ಕ್ರಿಕೆಟ್ ಮಂಡಳಿ ಕೂಡ ಟಿ10 ಕ್ರಿಕೆಟ್ ಲೀಗ್ ಆಯೋಜನೆ ಮಾಡುವ ಬಗ್ಗೆ ಘೋಷಣೆ ಮಾಡಿದ್ದು ಅದಕ್ಕೆ ಲಂಕಾ ಟಿ10 ಲೀಗ್ ಎಂದು ನಾಮಕರಣ ಮಾಡಿದೆ.

ಈ ಮೂಲಕ ಟಿ10 ಲೀಗ್ ಘೋಷಣೆ ಮಾಡಿದ ಮೊದಲ ಪೂರ್ಣಕಾಲಿಕ ಸದಸ್ಯ ರಾಷ್ಟ್ರ ಎನಿಸಿಕೊಂಡಿದೆ ಶ್ರೀಲಂಕಾ. ಇನ್ನು ಕೇವಲ ಪುರುಷರ ಕ್ರಿಕೆಟ್‌ಗೆ ಮಾತ್ರವಲ್ಲಿದೆ ಮಹಿಳೆಯರ ಲೀಗ್ ಕೂಡ ಆಯೋಜನೆ ಮಾಡುತ್ತಿರುವುದಾಗಿ ಶ್ರೀಲಂಕಾ ಕ್ರಿಕೆಟ್ ಘೋಷಣೆ ಮಾಡಿದೆ.

ಈ ಟಿ10 ಲೀಗ್‌ನಲ್ಲಿ ಪುರುಷರ ಟೂರ್ನಿಯಲ್ಲಿ 6 ತಂಡಗಳು ಹಾಗೂ ಮಹಿಳಾ ಲೀಗ್‌ನಲ್ಲಿ ನಾಲ್ಕು ತಂಡಗಳು ಭಾಗವಹಿಸಲಿದೆ ಎಂದು ಮಾಹಿತಿ ನೀಡಲಾಗಿದೆ. ಶ್ರೀಲಂಕಾ ಪ್ರೀಮಿಯರ್ ಲೀಗ್‌ನಲ್ಲಿರುವಂತೆಯೇ ನಗರಗಳನ್ನು ಪ್ರತಿನಿಧಿಸುವ ಫ್ರಾಂಚೈಸಿಗಳ ಮಧ್ಯೆ ಸ್ಪರ್ಧೆ ನಡೆಯಲಿದೆ. ಶ್ರೀಲಂಕಾ ಕ್ರಿಕೆಟ್‌ನ ಅಧ್ಯಕ್ಷ ಶಮ್ಮಿ ಸಿಲ್ವಾ ಮತ್ತು ಗೌರವ ಕಾರ್ಯದರ್ಶಿ ಮೋಹನ್ ಡಿ ಸಿಲ್ವಾ ಲೀಗ್‌ನ ಅಧಿಕೃತ ಘೋಷಣೆ ಮಾಡಿದ್ದಾರೆ ಎಂದು ಟಿ10 ಗ್ಲೋಬಲ್ ಸ್ಪೋರ್ಟ್ಸ್ ಮಾಧ್ಯಮದ ಪ್ರಕಟಣೆಯಲ್ಲಿ ತಿಳಿಸಿದೆ.

ಶ್ಈಲಂಕಾ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಶಮ್ಮಿ ಡಿಸಿಲ್ವ ಮಾತನಾಡಿ "ಶ್ರೀಲಂಕಾ ಕ್ರಿಕೆಟ್‌ಗೆ ವೇಗದ ಕ್ರಿಕೆಟ್ ಮಾದರಿಯನ್ನು ಪರಿಚಯಿಸುತ್ತಿರುವುದು ನಮ್ಮ ಕ್ರಿಕೆಟ್ ಚಟುವಟಿಕೆಗೆ ಅದ್ಭುತವಾದ ಸೇರ್ಪಡೆಯಾಗಲಿದೆ. ಈ ಆಟದ ಮುಂದುವರಿದ ಭಾಗದ ಭಾಗವಾಗಲು ನಾವು ಸಂತಸಪಡುತ್ತೇವೆ. ಕ್ರೀಡಾ ಜಗತ್ತಿನಲ್ಲಿ ಈ ಆಟವೂ ಕಾಲಕ್ಕೆ ತಕ್ಕನಾಗಿ ಸಾಕಷ್ಟು ಬೆಳವಣಿಗೆ ಕಾಣುತ್ತಿದೆ. ಈ ಲೀಗ್‌ನ ಜೊತೆಗೆ ಸಾಥ್ ನೀಡುತ್ತಿರುವ ಟಿಟೆನ್ ಗ್ಲೋಬಲ್ ಸ್ಪೋರ್ಟ್ಸ್‌ಗೆ ಶುಭಹಾರೈಸುತ್ತೇನೆ" ಎಂದಿದ್ದಾರೆ.

ಇನ್ನು ಈ ಟಿ10 ಲೀಗ್ ಕ್ರಿಕೆಟ್ ಟೂರ್ನಿಯ ಆರಂಬಿಕ ದಿನಾಂಕವನ್ನು ಇನ್ನೂ ಅಂತಿಮಗೊಳಿಸಿಲ್ಲ. ಈ ಟೂರ್ನಿಯ ಮೊದಲ ಆವೃತ್ತಿಯ ಪಂದ್ಯಗಳಿಗೆ ಕ್ಯಾಂಡಿ ಹಾಗೂ ಹಂಬಂತೋಟ ಮೈದಾನಗಳು ಆತಿಥ್ಯವಹಿಸುವ ಸಾಧ್ಯತೆಯಿದೆ. ಪ್ರತಿ ತಂಡಗಳು ಕೂಡ 16 ಆಟಗಾರರನ್ನು ಹೊಂದುವ ಅವಕಾಶವಿದ್ದು ಗರಿಷ್ಠ 6 ಆಟಗಾರರಿಗೆ ಈ ತಂಡದಲ್ಲಿ ಅವಕಾಶವಿರಲಿದೆ. ಇನ್ನು ಶ್ರೀಲಂಕಾ ಪ್ರೀಮಿಯರ್ ಲೀಗ್ ಮುಂದಿನ ಆಗಸ್ಟ್ ತಿಂಗಳಿನಲ್ಲಿ ಆಯೋಜಿಸಲು ಸಮಯ ನಿಗದಿಯಾಗಿರುವ ಕಾರಣ ಮುಂದಿನ ವರ್ಷದ ಜೂನ್ ತಿಂಗಳಿನಲ್ಲಿ ಟಿ10 ಲೀಗ್ ನಡೆಯುವ ನಿರೀಕ್ಷೆಯಿದೆ.

Story first published: Monday, November 21, 2022, 23:28 [IST]
Other articles published on Nov 21, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+