Womens Asia Cup 2024: ಆತಿಥೇಯ ಶ್ರೀಲಂಕಾ ಕ್ರಿಕೆಟ್‌ನಿಂದ ಮಹತ್ವದ ಘೋಷಣೆ!
ಜುಲೈ 16 ಮಂಗಳವಾರ, 2024ರ ಮಹಿಳೆಯರ ಏಷ್ಯಾ ಕಪ್ ಟೂರ್ನಿ ಇದೇ ತಿಂಗಳ 19 ರಿಂದ ಪ್ರಾರಂಭವಾಗಲಿದೆ. ಶ್ರೀಲಂಕಾ ಆತಿಥ್ಯ ವಹಿಸಲಿರುವ ಈ ಟೂರ್ನಿಯ ಫೈನಲ್ ಪಂದ್ಯ ಜುಲೈ 28ರಂದು ನಡೆಯಲಿದೆ.
ಅದಕ್ಕೂ ಮುನ್ನ ಶ್ರೀಲಂಕಾ ಕ್ರಿಕೆಟ್ (ಎಸ್‌ಎಲ್‌ಸಿ) ಮಹತ್ವದ ಘೋಷಣೆ ಮಾಡಿದೆ. ಮಂಗಳವಾರ ದೊಡ್ಡ ಘೋಷಣೆಯನ್ನು ಮಾಡಿರುವ ಶ್ರೀಲಂಕಾ ಕ್ರಿಕೆಟ್ ಮಂಡಳಿಯು ಮಹಿಳಾ ಏಷ್ಯಾ ಕಪ್ 2024ರ ಎಲ್ಲಾ ಪಂದ್ಯಗಳನ್ನು ವೀಕ್ಷಿಸಲು ಸ್ಟೇಡಿಯಂಗೆ ಬರುವ ಪ್ರೇಕ್ಷಕರಿಗೆ ಉಚಿತ ಪ್ರವೇಶವನ್ನು ಇರಿಸಿದೆ.

ಇಂತಹ ಮಹತ್ವದ ಘೋಷಣೆಯೊಂದಿಗೆ ಈ ಬಾರಿಯ ಮಹಿಳೆಯರ ಏಷ್ಯಾಕಪ್ ಟೂರ್ನಿಗೆ ಸಾಧ್ಯವಾದಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಸ್ಟೇಡಿಯಂಯೊಳಗೆ ಆಹ್ವಾನಿಸಲು ಶ್ರೀಲಂಕಾ ಮುಂದಾಗಿದೆ.
ಎಸ್‌ಎಲ್‌ಸಿ ಅಧಿಕೃತ ಘೋಷಣೆ
ಶ್ರೀಲಂಕಾ ಕ್ರಿಕೆಟ್ ಮಂಡಳಿಯು (ಎಸ್‌ಎಲ್‌ಸಿ) ತನ್ನ ಅಧಿಕೃತ ಎಕ್ಸ್ (ಟ್ವೀಟರ್) ಖಾತೆಯಿಂದ ಉಚಿತ ಪ್ರವೇಶದ ಕುರಿತು ಪೋಸ್ಟ್ ಮಾಡಿದೆ. ಜುಲೈ 19 ರಿಂದ 28ರವರೆಗೆ ಟಿ20 ಮಾದರಿಯಲ್ಲಿ ನಡೆಯಲಿರುವ ಏಷ್ಯಾಕಪ್‌ನಲ್ಲಿ ಅಭಿಮಾನಿಗಳು ಟಿಕೆಟ್ ಇಲ್ಲದೆ ಮೈದಾನಕ್ಕೆ ಬಂದು ಪಂದ್ಯ ವೀಕ್ಷಿಸಬಹುದು ಎಂದು ಈ ಪೋಸ್ಟ್ ನಲ್ಲಿ ಮಾಹಿತಿ ನೀಡಲಾಗಿದೆ.
ಪಂದ್ಯ ವೀಕ್ಷಣೆಗಾಗಿ ಸಾರ್ವಜನಿಕರು ಯಾವುದೇ ರೀತಿಯ ಶುಲ್ಕವನ್ನು ಪಾವತಿಸಬೇಕಾಗಿಲ್ಲ. ಇದು ಶ್ರೀಲಂಕಾ ಮಂಡಳಿಯ ನಿರ್ಧಾರವಾಗಿದ್ದು, ದೇಶದಲ್ಲಿ ಮಹಿಳಾ ಕ್ರಿಕೆಟ್ ಪ್ರಚಾರಕ್ಕಾಗಿ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದೆ. ಟೂರ್ನಿಯಲ್ಲಿ ಎರಡು ಸೆಮಿಫೈನಲ್ ಮತ್ತು ಫೈನಲ್ ಸೇರಿದಂತೆ ಒಟ್ಟು 15 ಪಂದ್ಯಗಳು ನಡೆಯಲಿವೆ.
2024ರ ಮಹಿಳಾ ಏಷ್ಯಾಕಪ್
ಮಹಿಳಾ ಏಷ್ಯಾ ಕಪ್ 2024ರ ಎಲ್ಲಾ ಪಂದ್ಯಗಳು ಶ್ರೀಲಂಕಾದ ಡಂಬುಲ್ಲಾ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿವೆ. ಪ್ರತಿ ಪಂದ್ಯವನ್ನು ಸಾರ್ವಜನಿಕರು ಉಚಿತವಾಗಿ ಸ್ಟೇಡಿಯಂಯೊಳಗೆ ಪ್ರವೇಶ ಪಡೆದು ವೀಕ್ಷಿಸಬಹುದಾಗಿದೆ.
ಭಾರತ, ಪಾಕಿಸ್ತಾನ, ಬಾಂಗ್ಲಾದೇಶ, ಆತಿಥೇಯ ಶ್ರೀಲಂಕಾ, ಥಾಯ್ಲೆಂಡ್, ಯುಎಇ, ನೇಪಾಳ ಮತ್ತು ಮಲೇಷ್ಯಾ ಸೇರಿದಂತೆ ಪಂದ್ಯಾವಳಿಯಲ್ಲಿ ಭಾಗವಹಿಸುವ ಎಲ್ಲಾ 8 ತಂಡಗಳು ಈ ಟೂರ್ನಿಯಲ್ಲಿ ಭಾಗವಹಿಸುತ್ತಿವೆ.
ಜುಲೈ 19ರ ಶುಕ್ರವಾರದಂದು ಹರ್ಮನ್‌ಪ್ರೀತ್ ಕೌರ್ ನಾಯಕತ್ವದಲ್ಲಿ ಟೀಮ್ ಇಂಡಿಯಾ ತನ್ನ ಸಾಂಪ್ರಾದಾಯಿಕ ಎದುರಾಳಿ ಪಾಕಿಸ್ತಾನದೊಂದಿಗೆ ತನ್ನ ಅಭಿಯಾನವನ್ನು ಪ್ರಾರಂಭಿಸಲಿದೆ.
ಜುಲೈ 19 ರಂದು ಏಷ್ಯಾಕಪ್‌ನಲ್ಲಿ ಎರಡು ಪಂದ್ಯಗಳು ನಡೆಯಲಿವೆ. ನೇಪಾಳ ಹಾಗೂ ಯುಎಇ ವಿರುದ್ಧದ ಮೊದಲ ಪಂದ್ಯ ಮಧ್ಯಾಹ್ನ 2 ಗಂಟೆಗೆ ಆರಂಭವಾಗಲಿದೆ. ಸಂಜೆ 7 ರಿಂದ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯವು ನಡೆಯಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications