ಶ್ರೀಲಂಕಾ ಕ್ರಿಕೆಟ್ ಹಳ್ಳ ಹಿಡಿಸಿದ್ದೇ ಜಯ್ ಶಾ: ಗಂಭೀರ ಆರೋಪ ಮಾಡಿದ ಅರ್ಜುನ ರಣತುಂಗ
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಅಧ್ಯಕ್ಷ ಜಯ್ ಶಾ ವಿರುದ್ಧ ಶ್ರೀಲಂಕಾದ 1996ರ ವಿಶ್ವಕಪ್ ವಿಜೇತ ತಂಡದ ನಾಯಕ ಅರ್ಜುನ ರಣತುಂಗ ಗಂಭೀರ ಆರೋಪವನ್ನು ಮಾಡಿದ್ದಾರೆ. ಪ್ರಸ್ತುತ ಶ್ರೀಲಂಕಾ ಕ್ರಿಕೆಟ್ ಮಂಡಳಿ ಎದುರಿಸುತ್ತಿರುವ ಸ್ಥಿತಿಗೆ ಜಯ್ ಶಾ ಕಾರಣ ಎಂದು ಸ್ಪೋಟಕ ಹೇಳಿಕೆ ನೀಡಿದ್ದಾರೆ ಅರ್ಜುನ ರಣತುಂಗ.
ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಅರ್ಜುನ ರಣತುಂಗ ಈ ಮಾತನ್ನು ಹೇಳಿದ್ದಾರೆ. ಈ ಸಂದರ್ಭದಲ್ಲಿ ಅವರು ಶ್ರೀಲಂಕಾದ ಕ್ರಿಕೆಟ್ ಮಂಡಳಿಯ ಜೊತೆಗೆ ಬಿಸಿಸಿಐ ಕಾರ್ಯದರ್ಶಿಯಾಗಿರುವ ಜಯ್ ಶಾ ಆಪ್ತ ಸಂಬಂಧವನ್ನು ಹೊಂದಿದ್ದು ಇದುವೇ ಶ್ರೀಲಂಕಾ ಕ್ರಿಕೆಟ್ ಮಂಡಳಿಯ ದುಸ್ಥಿತಿಗೆ ಕಾರಣವಾಯಿತು ಎಂದಿದ್ದಾರೆ. ಶ್ರೀಲಂಕಾ ಕ್ರಿಕೆಟ್ ಮಂಡಳಿ(ಎಸ್‌ಎಲ್‌ಸಿ) ಅಧಿಕಾರಿಗಳು ಮತ್ತು ಜಯ್ ಶಾ ನಡುವಿನ ಸಂಪರ್ಕದಿಂದಾಗಿ ಬಿಸಿಸಿಐಗೆ ಎಸ್ಎಲ್‌ಸಿಯನ್ನು ನಿಯಂತ್ರಿಸಬಹುದು ಎನ್ನುವ ಅಭಿಪ್ರಾಯ ಮೂಡಿವಂತೆ ಮಾಡಿದೆ ಎಂದಿದ್ದಾರೆ ರಣತುಂಗ.

ಲಂಕಾ ಮಂಡಳಿ ಮುನ್ನಡೆಸುತ್ತಿದ್ದಾರೆ ಜಯ್ ಶಾ!
ಜಯ್ ಶಾ ಅವರೇ ಮೂಲಭೂತವಾಗಿ ಶ್ರೀಲಂಕಾ ಕ್ರಿಕೆಟ್ ಅನ್ನು ನಡೆಸುತ್ತಿದ್ದಾರೆ ಎಂದು ಆರೋಸಿಸಿರುವ ಅರ್ಜುನ ರಣತುಂಗ, ಜಯ್ ಶಾ ಅವರ ಒತ್ತಡ ಶ್ರೀಲಂಕಾ ಕ್ರಿಕೆಟನ್ನು ಅನ್ನು ಹಾಳುಮಾಡುತ್ತಿದೆ ಎಂದಿದ್ದಾರೆ. ಮುಂದುವರಿದು ಅವರು ಭಾರತದ ಗೃಹ ಸಚಿವರಾಗಿರುವ ಅಮಿತ್ ಶಾ ಅವರು ಜಯ್ ಶಾ ತಂದೆಯಾಗಿರುವ ಕಾರಣ ಇಷ್ಟು ಪ್ರಾಬಲ್ಯವನ್ನು ಅವರು ಸಾಧಿಸಲು ಕಾರಣವಾಗಿದೆ ಎಂದಿದ್ದಾರೆ.
ಗಂಭೀರ ಆರೋಪ ಮಾಡಿದ ರಣತುಂಗ
ಡೈಲಿ ಮಿರರ್‌ಗೆ ನೀಡಿದ ಸಂದರ್ಶನದಲ್ಲಿ ಅರ್ಜುನ ರಣತುಂಗ ಈ ಗಂಭೀರ ಆರೋಪವನ್ನು ಮಾಡಿದ್ದಾರೆ. "ಶ್ರೀಲಂಕಾ ಕ್ರಿಕೆಟ್ ಮಂಡಳಿಯ ಅಧಿಕಾರಿಗಳು ಹಾಗೂ ಜಯ್ ಶಾ ನಡುವಿನ ಸಂಪರ್ಕದ ಕಾರಣದಿಂದಾಗಿ ಬಿಸಿಸಿಐಗೆ ಎಸ್‌ಎಲ್‌ಸಿ ಮೇಲೆ ನಿಯಂತ್ರಣ ಸಾಧಿಸಬಹುದು ಎನಿಸಿತ್ತು. ಜಯ್ ಶಾ ಅವರೇ ಶ್ರೀಲಂಕಾ ಕ್ರಿಕೆಟನ್ನು ಮುನ್ನಡೆಸುತ್ತಿದ್ದಾರೆ. ಜಯ್ ಶಾ ಒತ್ತಡದ ಕಾರಣದಿಂದಾಗಿಯೇ ಶ್ರೀಲಂಕಾ ಕ್ರಿಕೆಟ್ ಹಳ್ಳ ಹಿಡಿದಿದೆ. ಭಾರತದ ಗೃಹ ಸಚಿವ ಅಮಿತ್ ಶಾ ಅವರ ಪುತ್ರ ಎನ್ನುವ ಒಂದೇ ಕಾರಣಕ್ಕೆ ಜಯ್ ಶಾ ಇಷ್ಟು ಬಲಶಾಲಿಯಾಗಿದ್ದಾರೆ" ಎಂದಿದ್ದಾರೆ ಅರ್ಜುನ ರಣತುಂಗ.
ಲಂಕಾ ಮಂಡಳಿಯನ್ನು ಅಮಾನತು ಮಾಡಿದ ಐಸಿಸಿ
ಶ್ರೀಲಂಕಾ ಕ್ರಿಕೆಟ್ ಮಂಡಳಿಯಲ್ಲಿ ಸರ್ಕಾರ ತನ್ನ ಹಸ್ತಕ್ಷೇಪವನ್ನು ಮಾಡುತ್ತಿದೆ ಎನ್ನುವ ಕಾರಣಕ್ಕಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ಇತ್ತೀಚೆಗೆ ಮಂಡಳಿಯನ್ನೇ ಅಮನತುಗೊಳಿಸಿದೆ. ಇದು ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ಅತ್ಯಂತ ಹೀನಾಯ ಪ್ರದರ್ಶನ ನೀಡಿದ ಶ್ರೀಲಂಕಾ ಕ್ರಿಕೆಟ್‌ಗೆ ಮತ್ತೊಂದು ದೊಡ್ಡ ಆಘಾತ ನೀಡಿದಂತಾಗಿದೆ. ಈ ವಿಶ್ವಕಪ್‌ನಲ್ಲಿ ಶ್ರೀಲಂಕಾ ಆಡಿದ 9 ಪಂದ್ಯಗಳಲ್ಲಿ ಕೇವಲ 2 ಗೆಲುವು ಮಾತ್ರವೇ ಸಾಧಿಸಿದೆ. ಅಫ್ಘಾನಿಸ್ತಾನ ಹಾಗೂ ನೆದರ್ಲೆಂಡ್ಸ್ ವಿರುದ್ಧ ಮಾತ್ರವೇ ಲಂಕಾ ಗೆಲುವು ಸಾಧಿಸಿತ್ತು.
ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ಶ್ರೀಲಂಕಾ 9ನೇ ಸ್ಥಾನಿಯಾಗಿ ವಿಶ್ವಕಪ್ ಟೂರ್ನಿಯನ್ನು ಅಂತ್ಯಗೊಳಿಸಿದೆ. ಕೇವಲ ನೆದರ್ಲೆಂಡ್ಸ್ ತಂಡ ಮಾತ್ರವೇ ಲಂಕಾ ತಂಡಕ್ಕಿಳತ ಕೆಳಗಿದೆ. ಈ ಕಾರಣದಿಂದಾಗಿ ಶ್ರೀಲಂಕಾ 2025ರ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಭಾಗವಹಿಸುವ ಅರ್ಹತೆಯನ್ನು ಕೂಡ ಕಳೆದುಕೊಂಡಂತಾಗಿದೆ. ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾಗವಹಿಸಲು ಅಗ್ರ 8ರ ಒಳಗೆ ಸ್ಥಾನವನ್ನು ಪಡೆಯುವುದು ಅಗತ್ಯವಾಗಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications