ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದ ಲಂಕಾ ಕ್ರಿಕೆಟಿಗ ಯೂ ಟರ್ನ್: ನಿವೃತ್ತಿ ನಿರ್ಧಾರ ಹಿಂದೆಗೆದ ಭಾನುಕ

ಕಳೆದ 10 ದಿನಗಳ ಹಿಂದೆಯಷ್ಟೇ ಶ್ರೀಲಂಕಾ ತಂಡದ ಸ್ಪೋಟಕ ಆಟಗಾರ ಭಾನುಕಾ ರಾಜಪಕ್ಸ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿಯನ್ನು ಘೋಷಿಸಿದ್ದರು. 30ರ ಹರೆಯದಲ್ಲಿ ಲಂಕಾ ತಂಡದ ಪ್ರಮುಖ ಆಟಗಾರ ತೆಗೆದುಕೊಂಡ ಈ ನಿರ್ಧಾರಕ್ಕೆ ಕ್ರಿಕೆಟ್ ಜಗತ್ತು ಅಚ್ಚರಿ ಪಟ್ಟಿತ್ತು. ಆದರೆ ಇದೀಗ ಭಾನುಕಾ ರಾಜಪಕ್ಸ ತಮ್ಮ ನಿರ್ಧಾರಕ್ಕೆ ಯೂ ಟರ್ನ್ ಹೊಡೆದಿದ್ದಾರೆ. ನಿವೃತ್ತಿಯ ನಿರ್ಧಾರವನ್ನು ವಾಪಾಸ್ ಪಡೆದಿದ್ದಾರೆ. ಶ್ರೀಲಂಕಾ ತಂಡದ ಮುಂದಿನ ಎಲ್ಲಾ ಮಾದರಿಯ ಸರಣಿಗೂ ತಾನು ಆಯ್ಕೆಗೆ ಲಭ್ಯವಿರುವುದಾಗಿ ಭಾನುಕಾ ರಾಜಪಕ್ಸ ತಿಳಿಸಿದ್ದಾರೆ.

ಜನವರಿ 3ರಂದು ಭಾನುಕಾ ರಾಜಪಕ್ಸ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿಯನ್ನು ಘೋಷಿಸುತ್ತಿರುವುದಾಗಿ ತಿಳಿಸಿ ಅಚ್ಚರಿಗೊಳಿಸಿದ್ದರು. 'ಪಿತೃತ್ವ' ಹಾಗೂ 'ಕೌಟುಂಬಿಕ ಜವಾಬ್ಧಾರಿ'ಗಳ ಕಾರಣದಿಂದಾಗಿ ಭಾನುಕಾ ರಾಜಪಕ್ಸ ಈ ನಿರ್ಧಾರವನ್ನು ತೆಗೆದುಕೊಳ್ಳುತ್ತಿರುವುದಾಗಿ ಅವರು ತಿಳಿಸಿದ್ದರು. 2019ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಭಾನುಕ ಈವರೆಗೆ 5 ಏಕದಿನ ಪಂದ್ಯಗಳಲ್ಲಿ ಆಡಿದ್ದು 18 ಟಿ20 ಪಂದ್ಯಗಳಲ್ಲಿ ಆಡಿದ್ದಾರೆ.

ಭಾರತದ ಹೊರಗೆ ನಡೆಯಲಿಲ್ಲ ಮಯಾಂಕ್ ಆಟ : 14 ಇನ್ನಿಂಗ್ಸ್‌ನಲ್ಲಿ ಗಳಿಸಿರುವುದು 1 ಅರ್ಧಶತಕಭಾರತದ ಹೊರಗೆ ನಡೆಯಲಿಲ್ಲ ಮಯಾಂಕ್ ಆಟ : 14 ಇನ್ನಿಂಗ್ಸ್‌ನಲ್ಲಿ ಗಳಿಸಿರುವುದು 1 ಅರ್ಧಶತಕ

ಮಂಗಳವಾರ ಶ್ರೀಲಂಕಾ ಕ್ರಿಕೆಟ್ ಮಂಡಳಿ ಈ ಬಗ್ಗೆ ಮಾಹಿತಿಯನ್ನು ನೀಡಿದೆ. ಶ್ರೀಲಂಕಾದ ಕ್ರೀಡಾ ಸಚಿವ ನಮಲ್ ರಾಜಪಕ್ಸ ಅವರೊಂದಿಗೆ ಮಾತುಕತೆ ನಡೆಸಿದ ಬಳಿಕ ಭಾನುಕ ರಾಜಪಕ್ಸ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯ ಪಡೆಯುವ ನಿರ್ಧಾರವನ್ನು ವಾಪಾಸ್ ಪಡೆದಿದ್ದಾರೆ ಎಂದು ಲಂಕಾ ಕ್ರಿಕೆಟ್ ಮಂಡಳಿ ತಿಳಿಸಿದೆ.

"ಗೌರವಾನ್ವಿತ ಯುವಜನ ಮತ್ತು ಕ್ರೀಡಾ ಸಚಿವ ನಮಲ್ ರಾಜಪಕ್ಸೆ ಅವರೊಂದಿಗಿನ ಸಭೆಯ ಮತ್ತು ರಾಷ್ಟ್ರೀಯ ಆಯ್ಕೆಗಾರರೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಭಾನುಕಾ ರಾಜಪಕ್ಸೆ ಅವರು ಜನವರಿ 3ರಂದು ಶ್ರೀಲಂಕಾ ಕ್ರಿಕೆಟ್‌ಗೆ ಸಲ್ಲಿಸಿದ ರಾಜೀನಾಮೆಯನ್ನು ತಕ್ಷಣವೇ ಜಾರಿಗೆ ಬರುವಂತೆ ಹಿಂಪಡೆಯಲು ಬಯಸುವುದಾಗಿ ಎಸ್‌ಎಲ್‌ಸಿಗೆ ತಿಳಿಸಿದ್ದಾರೆ" ಎಂದು ಶ್ರೀಲಂಕಾ ಕ್ರಿಕೆಟ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಭಾರತ vs ದ.ಆಫ್ರಿಕಾ: ಮೈದಾನದಲ್ಲಿ ಮಯಾಂಕ್ ಕುರಿತು ಅಸಮಾಧಾನ ಹೊರಹಾಕಿದ ಕೊಹ್ಲಿಭಾರತ vs ದ.ಆಫ್ರಿಕಾ: ಮೈದಾನದಲ್ಲಿ ಮಯಾಂಕ್ ಕುರಿತು ಅಸಮಾಧಾನ ಹೊರಹಾಕಿದ ಕೊಹ್ಲಿ

Mayank Agarwal ಮಾಡಿದ ಎಡವಟ್ಟಿಗೆ ಬೇಸರದಿಂದ Virat ಮಾಡಿದ್ದೇನು? | Oneindia Kannada

ಇನ್ನು ರಾಜೀನಾಮೆಯನ್ನು ಹಿಂದೆಗೆದುಕೊಳ್ಳುತ್ತಿರುವುದಾಗಿ ಶ್ರೀಲಂಕಾ ಕ್ರಿಕೆಟ್ ಮಂಡಳಿಗೆ ಬರೆದ ಪತ್ರದಲ್ಲಿ ಭಾನುಕಾ ರಾಜಪಕ್ಸ ತಾನು ಪ್ರೀತಿಸುವ ಕ್ರೀಡೆಯಲ್ಲಿ ಮುಂಬರುವ ವರ್ಷಗಳಲ್ಲಿ ಶ್ರೀಲಂಕಾ ತಂಡವನ್ನು ಪ್ರತಿನಿಧಿಸಲು ಬಯಸುವುದಾಗಿ ತಿಳಿಸಿದ್ದಾರೆ. 2010ರ ಅಂಡರ್-19 ವಿಶ್ವಕಪ್‌ನಲ್ಲಿ ಶ್ರೀಲಂಕಾ ತಂಡದ ಭಾಗವಾಗಿದ್ದ ರಾಜಪಕ್ಸ ಶ್ರೀಲಂಕಾ ಪರ ಅತಿ ಹೆಚ್ಚು ರನ್‌ಗಳಿಸಿದ ಆಟಗಾರನಾಗಿ ಹೊರಹೊಮ್ಮಿದ್ದರು. ಪ್ರಥಮದರ್ಜೆ ಕ್ರಿಕೆಟ್‌ನಲ್ಲಿ 4000ಕ್ಕೂ ಅಧಿಕ ರನ್ ಗಳಿಸಿರುವ ಅವರು ಲಿಸ್ಟ್ ಎ ಕ್ರಿಕೆಟ್‌ನಲ್ಲಿ 2800ಕ್ಕೂ ಅಧಿಕ ರನ್ ಗಳಿಸಿದ್ದಾರೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Thursday, January 13, 2022, 17:04 [IST]
Other articles published on Jan 13, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X