Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಬಂಧನವಾದ ಬೆನ್ನಲ್ಲೇ ಶ್ರೀಲಂಕಾ ಕ್ರಿಕೆಟರ್ ಕುಸಾಲ್ ಮೆಂಡಿಸ್‌ಗೆ ಬೇಲ್

Sri Lanka cricketer Kusal Mendis granted bail

ಕೊಲಂಬೋ, ಜುಲೈ 6: ಶ್ರೀಲಂಕಾ ತಂಡದ ಬ್ಯಾಟ್ಸ್‌ಮನ್ ಕಮ್ ವಿಕೆಟ್ ಕೀಪರ್ ಕುಸಾಲ್ ಮೆಂಡಿಸ್ ಭಾನುವಾರ ಕಾರು ಅಪಘಾತ ಪ್ರಕರಣದಲ್ಲಿ ಬಂಧನಕ್ಕೀಡಾಗಿದ್ದರು. ಬಂಧನವಾದ ಬೆನ್ನಲ್ಲೇ ಅಂದರೆ ಸೋಮವಾರ ಮೆಂಡಿಸ್‌ಗೆ ಪನದುರಾ ಹೆಚ್ಚುವರಿ ಮ್ಯಾಜಿಸ್ಟ್ರೇಟ್ ಜಾಮೀನು ನೀಡಿದೆ.

ಶ್ರೀಲಂಕಾ ರಾಜಧಾನಿ ಕೊಲಂಬೋದ ಉಪನಗರ ಪನದುರಾದಲ್ಲಿ ಕುಸಲ್ ಮೆಂಡಿಸ್ ಅವರಿದ್ದ ಕಾರು ಸೈಕಲ್‌ನಲ್ಲಿ ತೆರಳುತ್ತಿದ್ದ 74 ವರ್ಷದ ಹಿರಿಯ ವ್ಯಕ್ತಿಗೆ ಡಿಕ್ಕಿ ಹೊಡೆದಿತ್ತು. ಡಿಕ್ಕಿ ಹೊಡೆದ ರಭಸಕ್ಕೆ ಸೈಕಲ್‌ನಲ್ಲಿ ತೆರಳುತ್ತಿದ್ದ ಆ ವ್ಯಕ್ತಿ ಮೃತಪಟ್ಟಿದ್ದರು.

1 ಮಿಲಿಯನ್ ರೂಪಾಯಿಗಳ (ಸುಮಾರು 4,48,568 ರೂ.) ಎರಡು ಶೂರಿಟಿಗಳಲ್ಲಿ ಕುಸಾಲ್ ಮೆಂಡಿಸ್‌ಗೆ ಜಾಮೀನು ನೀಡಲಾಗಿದೆ. ಅಲ್ಲದೆ ಅಪಘಾತದಲ್ಲಿ ಬಲಿಯಾದ ವ್ಯಕ್ತಿಯ ಕುಟುಂಬಕ್ಕೆ 1 ಮಿಲಿಯನ್ ರೂ.ಗಳ ಪರಿಹಾರ ನೀಡುವಂತೆ ಪನದುರಾ ಹೆಚ್ಚುವರಿ ಮ್ಯಾಜಿಸ್ಟ್ರೇಟ್ ಆದೇಶಿಸಿದೆ.

25ರ ಹರೆಯದ ಕುಸಾಲ್ ಮೆಂಡಿಸ್ ಶ್ರೀಲಂಕಾ ರಾಷ್ಟ್ರೀಯ ತಂಡದ ಪರ 44 ಟೆಸ್ಟ್ ಪಂದ್ಯಗಳಲ್ಲಿ 2995 ರನ್, 76 ಏಕದಿನ ಪಂದ್ಯಗಳಲ್ಲಿ 2167 ರನ್ ಮತ್ತು 26 ಅಂತಾರಾಷ್ಟ್ರೀಯ ಟಿ20ಐ ಪಂದ್ಯಗಳಲ್ಲಿ 484 ರನ್‌ ಗಳಿಸಿದ್ದಾರೆ. ಪಲ್ಲೆಕೆಲೆ ಸ್ಟೇಡಿಯಮ್‌ನಲ್ಲಿ ಲಂಕಾ ಆಟಗಾರರ ತರಬೇತಿ ಶಿಬಿರ ಆರಂಭವಾಗಿದ್ದು, ಅಪಘಾತಕ್ಕೂ ಮೊದಲು ಮೆಂಡಿಸ್ ಕೂಡ ತರಬೇತಿಯಲ್ಲಿ ಭಾಗವಹಿಸಿದ್ದರು.

Story first published: Monday, July 6, 2020, 22:35 [IST]
Other articles published on Jul 6, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+