ಟಿ20 ವಿಶ್ವಕಪ್‌ನಲ್ಲಿ ಶ್ರೀಲಂಕಾ ಶಕ್ತಿ ಪ್ರದರ್ಶನ: ಐರ್ಲೆಂಡ್ ವಿರುದ್ಧ 20 ರನ್ ಜಯ
ಕೊಲಂಬೊ: ವೇಗಿ ಮಹೇಶ್ ತೀಕ್ಷಣ ಹಾಗೂ ಸ್ಪಿನ್ ಬೌಲರ್ ವನಿಂದು ಹಸರಂಗ ಇವರುಗಳ ಬಿಗುವಿನ ದಾಳಿಯ ನೆರವಿನಿಂದ ಶ್ರೀಲಂಕಾ ಟಿ20 ವಿಶ್ವಕಪ್ 2026ರ "ಬಿ" ಗುಂಪಿನ ತನ್ನ ಮೊದಲ ಪಂದ್ಯದಲ್ಲಿ ಐರ್ಲೆಂಡ್ ತಂಡವನ್ನು ಸೋಲಿಸಿ ಗೆಲುವಿನ ಆರಂಭವನ್ನು ಮಾಡಿದೆ.
ಐರ್ಲೆಂಡ್ ವಿರುದ್ಧ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ತಂಡದ ಆರಂಭ ಕಳಪೆಯಾಗಿತ್ತು. ಲಂಕಾ ತಂಡದ ಪರ ಆರಂಭಿಕ ಆಟಗಾರ ಕಮಿಲ್ ಮಿಶಾರ 14 ರನ್ ಬಾರಿಸಿದ್ದಾಗ ಔಟ್ ಆದರು. ಎರಡನೇ ವಿಕೆಟ್‌ಗೆ ಪತುಮ್ ನಿಸ್ಸಂಕ, ಕುಸಲ್ ಮೆಂಡಿಸ್ ಜೋಡಿ ಐರ್ಲೆಂಡ್‌ಗೆ ಪವರ್ ಪ್ಲೇನಲ್ಲಿ ಮತ್ತೆ ವಿಕೆಟ್ ನೀಡದಂತೆ ತಡೆಯಿತು. ಈ ಜೋಡಿ 26 ಎಸೆತಗಳಲ್ಲಿ 34 ರನ್ ಸೇರಿಸಿತು.

ಶ್ರೀಲಂಕಾ ತಂಡದ ಮೊತ್ತ 62 ರನ್ ಆಗಿದ್ದಾಗ ಪತುಮ್ ನಿಸ್ಸಂಕ 23 ಎಸೆತಗಳಲ್ಲಿ 24 ರನ್ ಸೇರಿಸಿ ಔಟ್ ಆದರು. ಪವನ್ ರತ್ನಾಯಕ (5), ದುನಿತ್ ವೆಲ್ಲಾಲಗೆ (10) ಬೇಗನೇ ವಿಕೆಟ್ ಒಪ್ಪಿಸಿದರು.
ಕುಸಲ್ ಮೆಂಡಿಸ್ ಅರ್ಧಶತಕ
ಐದನೇ ವಿಕೆಟ್‌ಗೆ ಕುಸಲ್ ಮೆಂಡಿಸ್ ಹಾಗೂ ಕಮಿಂದು ಮೆಂಡಿಸ್ ಜೋಡಿ ತಮ್ಮ ಅನುಭವದ ಲಾಭ ಪಡೆದು ಬ್ಯಾಟ್ ಮಾಡಿತು. ಈ ಜೋಡಿ ಸೊಗಸಾದ ಆಟದ ನೆರವಿನಿಂದ ಲಂಕಾ ಸ್ಪರ್ಧಾತ್ಮಕ ಮೊತ್ತವನ್ನು ಕಲೆ ಹಾಕುವತ್ತ ಚಿತ್ತ ನೆಡುವಂತೆ ಮಾಡಿತು. ಈ ಜೋಡಿ 30 ಎಸೆತಗಳಲ್ಲಿ 67 ರನ್ ಸೇರಿಸಿತು. ಈ ಹಂತದಲ್ಲಿ ಕುಸಲ್ ಮೆಂಡಿಸ್ 5 ಬೌಂಡರಿ ನೆರಿನಿಂದ ಅಜೇಯ 56 ರನ್ ಸಿಡಿಸಿ ಅಬ್ಬರಿಸಿದರು.
ಮಧ್ಯಮ ಕ್ರಮಾಂಕದಲ್ಲಿ ಕಮಿಂಡು ಮೆಂಡೀಸ್ 19 ಎಸೆತಗಳಲ್ಲಿ 4 ಬೌಂಡರಿ, 2 ಸಿಕ್ಸರ್ ಸಹಾಯದಿಂದ 44 ರನ್ ಬಾರಿಸಿದರು. ಅಂತಿಮವಾಗಿ ಲಂಕಾ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 163 ರನ್ ಸೇರಿಸಿತು.

ಗುರಿಯನ್ನು ಬೆನ್ನಟ್ಟಿದ ಐರ್ಲೆಂಡ್ ತಂಡದ ಆರಂಭ ಸಾಧಾರಣವಾಗಿತ್ತು. ನಾಯಕ ಪಾಲ್ ಸ್ಟಿರ್ಲಿಂಗ್ (6) ದೊಡ್ಡ ಇನಿಂಗ್ಸ್ ಕಟ್ಟದೇ ಪೆವಿಲಿಯನ್ ಸೇರಿದರು. ಎರಡನೇ ವಿಕೆಟ್‌ಗೆ ರೋಸ್ ಅಡೈರ್, ಹ್ಯಾರಿ ಟೆಕ್ಟರ್ ಜೋಡಿ ಕೊಂಚ ಲಂಕಾ ಬೌಲರ್‌ಗಳನ್ನು ಕಾಡಿತು. ಈ ಜೋಡಿ 32 ರನ್ ಸೇರಿಸಿತು. ಈ ವೇಳೆ ರೋಸ್ ಅಡೈರ್ 5 ಬೌಂಡರಿ, 1 ಸಿಕ್ಸರ್ ಸಹಾಯದಿಂದ 34 ರನ್ ಬಾರಿಸಿದರು. ಇವರು ಔಟ್ ಆಗುತ್ತಿದ್ದಂತೆ ಹ್ಯಾರಿ ಟೆಕ್ಟರ್ (21) ತಮ್ಮ ಮೇಲಿನ ಒತ್ತಡವನ್ನು ಮೆಟ್ಟಿನಿಲ್ಲಲು ಹೋಗಿ ವಿಕೆಟ್ ಒಪ್ಪಿಸಿದರು.
ಕರ್ಟಿಸ್ ಕ್ಯಾಂಫರ್ 13, ಮಾರ್ಕ್ ಅಡೈರ್ 10 ರನ್ ಬಾರಿಸಿ ಸೋಲಿನ ಅಂತರವನ್ನು ಕಡಿಮೆ ಮಾಡಿದರು. ಶ್ರೀಲಂಕಾ ತಂಡದ ಪರ ವೇಗದ ಬೌಲರ್ ಮಹೇಶ್ ತೀಕ್ಷಣ ಹಾಗೂ ವನಿಂದು ಹಸರಂಗ ತಲಾ 3 ವಿಕೆಟ್ ಪಡೆದು ಮಿಂಚಿದರು. ಮತಿಶ್ ಪತಿರಾಣ 2 ವಿಕೆಟ್ ಕಬಳಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications