ಶ್ರೀಲಂಕಾ ಇನಿಂಗ್ಸ್ ಹಾಗೂ 78 ರನ್ ಜಯ: ನಾಯಕತ್ವ ತ್ಯಜಿಸಿದ ನಜ್ಮುಲ್ ಹಸನ್ ಶಾಂತೊ
ಕೊಲಂಬೊದಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾ ಇನಿಂಗ್ಸ್ ಹಾಗೂ 78 ರನ್‌ಗಳಿಂದ ಬಾಂಗ್ಲಾದೇಶ ತಂಡವನ್ನು ಮಣಿಸಿತು. ಈ ಮೂಲಕ ಲಂಕಾ ತಂಡ 2 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಅಲ್ಲದೆ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಬಡ್ತಿ ಪಡೆದಿದೆ.
ಶನಿವಾರ ಬಾಂಗ್ಲಾದೇಶ 6 ವಿಕೆಟ್‌ಗೆ 115 ರನ್‌ಗಳಿಂದ ಎರಡನೇ ಇನಿಂಗ್ಸ್ ಮುಂದುವರೆಸಿ 133 ರನ್‌ಗಳಿಗೆ ಅಲೌಟ್ ಅಯಿತು. ಬಾಂಗ್ಲಾದೇಶದ ಪರ ಯಾವೊಬ್ಬ ಬ್ಯಾಟರ್ ನೆಲಕಚ್ಚಿ ನಿಂತು ಬ್ಯಾಟ್ ಮಾಡಲೇ ಇಲ್ಲ. ಬಾಂಗ್ಲಾದೇಶ ಮೂರನೇ ದಿನದಾಟದಲ್ಲಿ ಕೇವಲ 5 ಓವರ್‌ಗಳನ್ನು ಮಾತ್ರ ಎದುರಿಸುವಲ್ಲಿ ಶಕ್ತವಾಯಿತು. ಇನ್ನು ಲಂಕಾ ತಂಡದ ಪ್ರಭಾತ್ ಜಯಸೂರ್ಯ 5 ವಿಕೆಟ್ ಪಡೆದು ಮಿಂಚಿದರು. ಈ ಮೂಲಕ ಇವರು 12ನೇ ಬಾರಿ ಐದಕ್ಕೂ ಹೆಚ್ಚು ವಿಕೆಟ್ ಪಡೆದ ಸಾಧನೆಯನ್ನು ಮಾಡಿದರು. ಇನ್ನು ಧನಂಜಯ್ ಡಿಸಿಲ್ವಾ ಹಾಗೂ ತರಿಂದು ರತ್ನಾಯಕೆ ತಲಾ ಎರಡು ವಿಕೆಟ್ ಪಡೆದರು.

ಆಸ್ಟ್ರೇಲಿಯಾಗೆ ಅಗ್ರ ಸ್ಥಾನ
ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ರನ್ನರ್ ಅಪ್ ಆಸ್ಟ್ರೇಲಿಯಾ, ವಿಂಡೀಸ್ ತಂಡವನ್ನು 159 ರನ್‌ಗಳಿಂದ ಮಣಿಸಿ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಪಡೆದಿದೆ. ಇನ್ನು ಇಂಗ್ಲೆಂಡ್ ಸಹ ಆಡಿರುವ ಒಂದು ಪಂದ್ಯವನ್ನು ಗೆದ್ದು ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನ ಹೊಂದಿದೆ. ಇನ್ನು ಶ್ರೀಲಂಕಾ 2 ಪಂದ್ಯಗಳಲ್ಲಿ ಒಂದು ಗೆಲುವು, ಒಂದು ಡ್ರಾ ಸಾಧಿಸಿದ್ದು ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನವನ್ನು ಪಡೆದಿದೆ.
ನಾಯಕಸ್ಥಾನಕ್ಕೆ ರಾಜೀನಾಮೆ
ಶ್ರೀಲಂಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಸೋಲು ಕಂಡಿರುವ ಬಾಂಗ್ಲಾದೇಶ ತಂಡದ ನಾಯಕ ನಜ್ಮುಲ್ ಹಸನ್ ಶಾಂತೊ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ತಂಡದ ಹಿತದ ದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಂಡಿದ್ದಾಗಿ ಅವರು ತಿಳಿಸಿದ್ದಾರೆ. ಮೂರು ಫಾರ್ಮೆಟ್‌ಗಳಿಗೆ ಮೂರು ನಾಯಕರು ಒಳ್ಳೆಯದಲ್ಲ ಎಂಬ ಭಾವನೆ ನನ್ನದಾಗಿದೆ. ಮಂಡಳಿಯ ಪ್ರತಿಯೊಂದು ನಿರ್ಧಾರವನ್ನು ನಾನು ಬೆಂಬಲಿಸುವೆ. ಇದು ನನ್ನ ವೈಯಕ್ತಿಕ ನಿರ್ಧಾರ ಎಂದು ತಿಳಿಸಿದ್ದಾರೆ.

ಬಾಂಗ್ಲಾದೇಶ ತಂಡವನ್ನು ಏಕದಿನ ಫಾರ್ಮೆಟ್‌ನಲ್ಲಿ ಮೆಹದಿ ಹಸನ್ ಮಿರಾಜ್ ಮುನ್ನಡೆಸುತ್ತಿದ್ದು, ಸ್ವಂತ ಇಚ್ಛೆಯ ಮೇರೆಗೆ ಟಿ 20 ಅಂತರರಾಷ್ಟ್ರೀಯ ತಂಡದ ನಾಯಕತ್ವವನ್ನು ತೊರೆದಿದ್ದರು. ಹೀಗಾಗಿ ಚುಟುಕು ಫಾರ್ಮೆಟ್‌ಗೆ ಲಿಟನ್ ದಾಸ್ ನಾಯಕರಾಗಿ ಆಯ್ಕೆ ಮಾಡಲಾಯಿತು.
ನಜ್ಮುಲ್ ಸಾಧನೆ
ನಜ್ಮುಲ್ ಹಸನ್ ಶಾಂತೊ ಬಾಂಗ್ಲಾದೇಶ ತಂಡವನ್ನು 14 ಪಂದ್ಯಗಳಲ್ಲಿ ಮುನ್ನಡೆಸಿದ್ದರು. ಈ ವೇಳೆ ತಂಡ ಕೇವಲ 4 ಪಂದ್ಯಗಳಲ್ಲಿ ಜಯ ಸಾಧಿಸಿತ್ತು. ಇನ್ನು 9 ರಲ್ಲಿ ಸೋಲು, ಒಂದು ಡ್ರಾ ಕಂಡಿದೆ. ನಜ್ಮುಲ್ ಹಸನ್ ಶಾಂತೊ ಬಾಂಗ್ಲಾದೇಶ ತಂಡಕ್ಕಾಗಿ 37 ಟೆಸ್ಟ್ ಪಂದ್ಯಗಳಲ್ಲಿ ಬ್ಯಾಟ್ ಮಾಡಿ 2189 ರನ್ ಸಿಡಿಸಿದ್ದು, ಇದರಲ್ಲಿ 7 ಶತಕ, 5 ಅರ್ಧಶತಕಗಳು ಸೇರಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications