For Quick Alerts
ALLOW NOTIFICATIONS  
For Daily Alerts
 

SL vs BAN Test: ಲಂಕಾ ವಿರುದ್ಧ ಸೋಲಿನ ಭೀತಿಯಲ್ಲಿ ಬಾಂಗ್ಲಾ

ಶ್ರೀಲಂಕಾ ಹಾಗೂ ಬಾಂಗ್ಲಾದೇಶದ ನಡುವಣ ಎರಡನೇ ಟೆಸ್ಟ್‌ ಪಂದ್ಯ ಕೊಲಂಬೊದಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಶ್ರೀಲಂಕ ಸಂಘಟಿತ ಆಟದ ಪ್ರದರ್ಶನ ನೀಡಿ ಪ್ರವಾಸಿ ಬಾಂಗ್ಲಾ ತಂಡವನ್ನು ಕಾಡಿದೆ. ಮೂರನೇ ದಿನದಾಟ ಮುಕ್ತಾಯಕ್ಕೆ ಬಾಂಗ್ಲಾ ಎರಡನೇ ಇನಿಂಗ್ಸ್‌ನಲ್ಲಿ ರನ್‌ ಕಲೆ ಹಾಕುವಲ್ಲಿ ಪರದಾಟ ನಡೆಸಿದ್ದು, ಲಂಕಾ ಗೆಲುವಿನ ಕನಸು ಕಾಣುತ್ತಿದೆ.

ಶುಕ್ರವಾರ 2 ವಿಕೆಟ್‌ಗೆ 290 ರನ್‌ಗಳಿಂದ ಆಟ ಮುಂದುವರೆಸಿದ ಲಂಕಾ ತಂಡ 458 ರನ್‌ಗಳಿಗೆ ಆಲೌಟ್ ಆಯಿತು. ಎರಡನೇ ದಿನ ತತಕ ಬಾರಿಸಿದ್ದ ಪಥಮ್ ನಿಸ್ಸಂಕಾ 19 ಬೌಂಡರಿ ನೆರವಿನಿಂದ 158 ರನ್‌ ಸಿಡಿಸಿದರು. ನಾಯಕ ಧನಂಜಯ್ ಡಿಸಿಲ್ವಾ ದೊಡ್ಡ ಇನಿಂಗ್ಸ್ ಕಟ್ಟುವಲ್ಲಿ ವಿಫಲರಾದರು. ಕಮಿಂದು ಮೆಂಡಿಸ್‌ 33 ರನ್ ಗಳಿಗೆ ಆಟ ಮುಗಿಸಿದರು.

Sri Lanka Dominates Bangladesh in Second Test Nearing Victory

ಮಧ್ಯಮ ಕ್ರಮಾಂಕದಲ್ಲಿ ಅನುಭವಿ ಕುಸಾಲ್ ಮೆಂಡಿಸ್ ಸಮಯೋಚಿತ ಬ್ಯಾಟಿಂಗ್ ನಡೆಸಿದು. ಇವರು 8 ಬೌಂಡರಿ, 2 ಸಿಕ್ಸರ್ ಸಹಾಯದಿಂದ 84 ರನ್‌ ಬಾರಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು. ಲಂಕಾ ಪರ ಉಳಿದ ಆಟಗಾರರು ಬಂದು ಹೋಗುವ ಸಂಪ್ರದಾಯನ್ನು ಮುಗಿಸಿದರು. ಬಾಂಗ್ಲಾ ತಂಡದ ಪರ ತಜ್ಮುಲ್ ಇಸ್ಲಾಮ್ ಅಬ್ಬರಿಸಿದು. ಇವರು 43 ಓವರ್ ಬೌಲಿಂಗ್ ಮಾಡಿ 131 ರನ್‌ ನೀಡಿ 5 ವಿಕೆಟ್‌ ಪಡೆದರು. ನಾಯಿಮ್ ಹಸನ್ 87 ರನ್‌ ನೀಡಿ 3 ವಿಕೆಟ್‌ ಕಬಳಿಸಿದರು.

ಬಾಂಗ್ಲಾಗೆ ಸೋಲಿನ ಭೀತಿ

ಇನ್ನಿಂಗ್ಸ್‌ ಹಿನ್ನಡೆಯೊಂದಿಗೆ ಎರಡನೇ ಇನಿಂಗ್ಸ್ ಆರಂಭಿಸಿದ ಬಾಂಗ್ಲಾದೇಶದ ಟಾಪ್ ಆರ್ಡರ್ ಬ್ಯಾಟರ್‌ಗಳು ರನ್‌ ಕಲೆ ಹಾಕುವಲ್ಲಿ ವಿಫಲರಾದರು. ಶದಮನ್ ಇಸ್ಲಾ, ಅನ್ಮುಲ್ ಹಕ್ ಬೇಗನೆ ವಿಕೆಟ್‌ ಒಪ್ಪಿಸಿದರು. ಭರವಸೆಯ ಬ್ಯಾಟರ್‌ ಮೊಮಿನುಲ್ ಹಕ್, ನಜ್ಮಲ್ ಹುಸೇನ್ ಶಂಟೋ ಸಹ ಬಿಗ್ ಇನಿಂಗ್ಸ್‌ ಕಟ್ಟಲಿಲ್ಲ. ಮಧ್ಯಮ ಕ್ರಮಾಂಕದಲ್ಲಿ ಮುಷ್ಫೀಕರ್ ರಹೀಮ್ (26) ದೊಡ್ಡ ಇನಿಂಗ್ಸ್ ಕಟ್ಟುವ ಸೂಚನೆ ನೀಡಿದರೂ ಫಲಿಸಲಿಲ್ಲ. ಬಾಂಗ್ಲಾದೇಶದ ವಿಕೆಟ್‌ ಕೀಪರ್ ಬ್ಯಾಟರ್ ಲಿಟನ್ ದಾಸ್ ಶನಿವಾರಕ್ಕೆ ಬ್ಯಾಟಿಂಗ್ ಕಾಯ್ದಕೊಂಡಿದ್ದಾರೆ. ಬಾಂಗ್ಲಾದೇಶ ಶ್ರೀಲಂಕಾಕ್ಕೆ ಗುರಿಯನ್ನು ನೀಡಲು ಇನ್ನು 96 ರನ್ ಬಾರಿಸುವ ಅವಶ್ಯಕತೆ ಇದೆ. ಲಂಕಾ ಪರ ಪ್ರಭಾತ್ ಜಯಸೂರ್ಯ, ಧನಂಜಯ್ ಡಿಸಿಲ್ವಾ ತಲಾ 2 ವಿಕೆಟ್‌ ಕಬಳಿಸಿದರು.

Sri Lanka Dominates Bangladesh in Second Test Nearing Victory

ಬಾಂಗ್ಲಾದೇಶದ ಪರ ಜೊತೆಯಾಟಗಳ ಬಾರದೇ ಇರುವುದು ತಂಡಕ್ಕೆ ತಲೆ ನೋವಾಗಿ ಪರಿಣಮಿಸಿದೆ. ಇನ್ನು ನಾಲ್ಕನೇ ದಿನದಾಟಲ್ಲಿ ಲಿಟನ್ ದಾಸ್ ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶನ ಮಾಡಿ, ಚಮತ್ಕಾರ ಮಾಡಿದರೆ ಮಾತ್ರ ಬಾಂಗ್ಲಾ ಸೋಲುವಿನಿಂದ ಬಚಾವ್ ಆಗಬಹುದು. ಇಲ್ಲದೇ ಹೋದಲ್ಲಿ ಸೋಲಿನ ವಾಸನೆ ಬಾಂಗ್ಲಾ ತಂಡಕ್ಕೆ ಬಡಿಯುತ್ತಿದೆ.

Story first published: Friday, June 27, 2025, 19:15 [IST]
Other articles published on Jun 27, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+