SL vs BAN Test: ಬಾಂಗ್ಲಾ ವಿರುದ್ಧ ಇನಿಂಗ್ಸ್ ಮುನ್ನಡೆ ಸಾಧಿಸಿದ ಲಂಕಾ
ಕೊಲಂಬೋದಲ್ಲಿ ನಡೆಯುತ್ತಿರುವ ಶ್ರೀಲಂಕಾ ಹಾಗೂ ಬಾಂಗ್ಲಾದೇಶ ನಡುವಣ ಎರಡನೇ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ತಂಡ ಬಿಗಿ ಹಿಡಿತ ಸಾಧಿಸಿದೆ. ಎರಡನೇ ದಿನದಾಟದಂತ್ಯಕ್ಕೆ ಲಂಕಾ ತಂಡ 43 ರನ್‌ಗಳ ಇನಿಂಗ್ಸ್ ಮುನ್ನಡೆ ಸಾಧಿಸಿದ್ದು, ಈ ಲೀಡ್ ಹೆಚ್ಚಿಸಿಕೊಳ್ಳುವ ಕನಸಿನಲ್ಲಿದೆ.
ಗುರುವಾರ 8ವಿಕೆಟ್‌ಗೆ 220 ರನ್‌ಗಳಿಂದ ಆಟಮುಂದು ವರೆಸಿದ ಬಾಂಗ್ಲಾದೇಶ ಮೊದಲ ಇನಿಂಗ್ಸ್‌ನಲ್ಲಿ 247 ರನ್‌ಗಳಿಗೆ ಆಲೌಟ್ ಆಯಿತು. ಲಂಕಾ ತಂಡದ ಪರ ಅಸಿತ ಫೆರ್ನಾಂಡೋ, ಸೋನಾಲ್ ದಿನುಶಾ ತಲಾ ಮೂರು ವಿಕೆಟ್ ಕಬಳಿಸಿದರು. ವಿಶ್ವ ಫೆರ್ನಾಂಡೋ 2 ವಿಕೆಟ್ ಪಡೆದರು.

ಮೊದಲ ಇನಿಂಗ್ಸ್ ಆರಂಭಿಸಿದ ಲಂಕಾ ತಂಡದ ಆರಂಭಿಕರು ಪರಿಸ್ಥಿತಿಗೆ ತಕ್ಕನಾದ ಆಟವನ್ನು ಆಡಿದರು. ಆರಂಭಿಕರಾದ ಪಥಮ್ ನಿಸ್ಸಾಂಕ ಹಾಗೂ ಲಹಿರು ಉದಾರ ಜೋಡಿ ಬಾಂಗ್ಲಾದೇಶ ಹಾಕಿಕೊಂಡ ಯೋಜನೆಯನ್ನು ಬುಡಮೇಲು ಮಾಡಿ ರನ್ ಮಹಲ್ ಕಟ್ಟುತ್ತಾ ಸಾಗಿತು. ತವರಿನ ಪಿಚ್‌ಗಳ ಮರ್ಮ್‌ವನ್ನು ಅರೆತಿದ್ದ ಜೋಡಿ 23 ಓವರ್‌ಗಳ ವರೆಗೆ ವಿಕೆಟ್ ಬೀಳದಂತೆ ಕಾಯ್ದುಕೊಂಡಿತು. ಅಲ್ಲದೆ 88 ರನ್‌ಗಳ ಅಮೋಘ ಜತೆಯಾಟದ ಕಾಣಿಕೆ ನೀಡಿತು. ಈ ವೇಳೆ ಲಹಿರು 40 ರನ್ ಬಾರಿಸಿದ್ದಾಗ ಔಟ್ ಆದರು.
ಭರ್ಜರಿ ಜೊತೆಯಾಟ
ಅದಗಾಲೆ ಮೈದಾನದಲ್ಲಿ ಸೆಟ್ಲ್ ಆಗಿದ್ದ ಪಥಮ್ ನಿಸ್ಸಾಂಕ ಹಾಗೂ ಅನುಭವಿ ಆಟಗಾರ ದಿನೇಶ್ ಚಂಡೀಲಾ ಜೋಡಿ ಸೊಗಸಾದ ಆಟದ ಪ್ರದರ್ಶನ ನೀಡಿ ತಂಡಕ್ಕೆ ಆಧಾರವಾಯಿತು. ಈ ಜೋಡಿ ತಂಡ ಇನಿಂಗ್ಸ್ ಮುನ್ನಡೆ ಸಾಧಿಸುವತ್ತ ದೃಷ್ಟಿ ನೆಡುವಂತೆ ಮಾಡಿತು. ಕೆಟ್ಟ ಎಸೆತಗಳನ್ನು ದಂಡಿಸುತ್ತಾ ಸಾಗಿದ ಜೋಡಿ ಅಬ್ಬರಿಸಿತು. ಈ ಜೋಡಿಯನ್ನು ಕಟ್ಟಿ ಹಾಕಲು ಬಾಂಗ್ಲಾ ಮಾಡಿಕೊಂಡ ಪ್ಲ್ಯಾನ್ ಎಲ್ಲ ಕೈ ಕೊಟ್ಟಿತು. ಎರಡನೇ ವಿಕೆಟ್‌ಗೆ ಜೋಡಿ 311 ಎಸೆತಗಳಲ್ಲಿ 194 ರನ್ ಸಿಡಿಸಿ ಅಬ್ಬರಿಸಿತು. ಇದೇ ವೇಳೆ ಶತಕದ ಹತ್ತಿರ ಸಾಗುತ್ತಿದ್ದ ದಿನೇಶ್ ಇಲ್ಲದ ಶಾಟ್ ಪ್ರಯೋಗಿಸಲು ಹೋಗಿ ಲಿಟನ್ ದಾಸ್‌ಗೆ ಕ್ಯಾಚ್ ನೀಡಿದರು. ಇವರು 10 ಬೌಂಡರಿ, 1 ಸಿಕ್ಸರ್ ಸಹಾಯದಿಂದ 93 ರನ್ ಸಿಡಿಸಿ ಔಟ್ ಆದರು.
ಪಥಮ್ ಶತಕ
ಶ್ರೀಲಂಕಾದ 27 ವರ್ಷದ ಪಥಮ್ ನಿಸ್ಸಾಂಕ ಕ್ಲಾಸಿಕ್ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಇವರು 238 ಎಸೆತಗಳಲ್ಲಿ 18 ಬೌಂಡರಿ ನೆರವಿನಿಂದ ಅಜೇಯ 146 ರನ್ ಸಿಡಿಸಿ ತಂಡಕ್ಕೆ ಆಧಾರವಾಗಿದ್ದಾರೆ. ಇದು ಪಥಮ್ ನಿಸ್ಸಾಂಕ ಅವರ ಟೆಸ್ಟ್ ವೃತ್ತಿ ಜೀವನದ ನಾಲ್ಕನೇ ಶತಕವಾಗಿದೆ. ಎರಡನೇ ದಿನದಾಟದಂತ್ಯಕ್ಕೆ ಲಂಕಾ 2 ವಿಕೆಟ್ ನಷ್ಟಕ್ಕೆ 290 ರನ್ ಕಲೆ ಹಾಕಿದ್ದು, 43 ರನ್ ಇನಿಂಗ್ಸ್ ಮುನ್ನಡೆ ಸಾಧಿಸಿದೆ. ಇನ್ನು ಆರಂಭಿಕ ಪಥಮ್ ಜೊತೆ ಪ್ರಬಾತ್ ಜಯಸೂರ್ಯ ಮೂರನೇ ದಿನದಾಟವನ್ನು ಆರಂಭಿಸಲಿದ್ದಾರೆ. ಈ ಜೋಡಿ ಲಂಕಾದ ಮುನ್ನಡೆಯನ್ನು ಇನ್ನು ಹೆಚ್ಚಿಸಲು ಶ್ರಮಿಸಲಿದೆ. ಉಳಿದ ಬ್ಯಾಟರ್‌ಗಳು ಇದಕ್ಕೆ ಕೈ ಜೋಡಿಸಿದರೆ ದೊಡ್ಡ ಮೊತ್ತದ ಆಸೆ ಫಲಿಸುತ್ತದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications