For Quick Alerts
ALLOW NOTIFICATIONS  
For Daily Alerts
 

ಶ್ರೀಲಂಕಾದ ಶ್ರೇಯಾಂಕ ಕುಸಿತ, ವಿಶ್ವಕಪ್ಪಿಗೆ ನೇರ ಅರ್ಹತೆ ಇಲ್ಲ

By Mahesh

ಕೊಲಂಬೋ, ಸೆ 04: ಪ್ರವಾಸಿ ಭಾರತದ ವಿರುದ್ಧದ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ 0-4ರ ಹೀನಾಯ ಹಿನ್ನಡೆ ಕಂಡಿರುವ ಶ್ರೀಲಂಕಾಕ್ಕೆ ಮತ್ತೊಂದು ಆಘಾತ ಒದಗಿದೆ. ಸರಣಿ ಸೋಲಿನಿಂದ ಶ್ರೇಯಾಂಕದಲ್ಲಿ ಕುಸಿತ ಕಂಡಿದ್ದು, ಮುಂಬರುವ ವಿಶ್ವಕಪ್ ಗೆ ನೇರ ಅರ್ಹತೆ ಗಳಿಸುವಲ್ಲಿ ವಿಫಲವಾಗಿದೆ.

1996ರ ವಿಶ್ವಕಪ್‌ ವಿಜೇತ ಶ್ರೀಲಂಕಾ ತಂಡವು ಮುಂಬರುವ ವಿಶ್ವಕಪ್ ಗೆ ನೇರ ಅರ್ಹತೆ ಗಳಿಸಲು ಭಾರತದ ವಿರುದ್ಧದ ಏಕದಿನ ಸರಣಿಯಲ್ಲಿ ಕನಿಷ್ಠ ಎರಡು ಪಂದ್ಯಗಳನ್ನಾದರೂ ಗೆಲ್ಲಬೇಕಿತ್ತು.

 Sri Lanka fail to seal ICC World Cup direct qualification after 4-0 drubbing against India

ಆದರೆ, ಸೆಪ್ಟೆಂಬರ್‌ 30ರವರೆಗಿನ ಶ್ರೇಯಾಂಕ ಪಟ್ಟಿಯಂತೆ 87 ಪಾಯಿಂಟ್‌ ಹೊಂದಿರುವ ಶ್ರೀಲಂಕಾ ಎಂಟನೇ ಸ್ಥಾನದಲ್ಲಿದೆ. ಮೊದಲ ಐದು ಸ್ಥಾನಗಳಲ್ಲಿರುವ ತಂಡಗಳು ನೇರವಾಗಿ ಅರ್ಹತೆ ಪಡೆಯಲಿವೆ. ಉಳಿದ ತಂಡಗಳು ಅರ್ಹತಾ ಸುತ್ತಿನಲ್ಲಿ ಆಡಬೇಕಾಗುತ್ತದೆ.

2019ರ ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಪಂದ್ಯಾವಳಿ ಇಂಗ್ಲೆಂಡ್‌ನಲ್ಲಿ ನಡೆಯಲಿದೆ. ಸದ್ಯ ಶ್ರೇಯಾಂಕ ಪಟ್ಟಿಯಲ್ಲಿ ಕೊನೆ ಸ್ಥಾನದಲ್ಲಿರುವ ವೆಸ್ಟ್‌ಇಂಡೀಸ್‌ ತಂಡವು ಇಂಗ್ಲೆಂಡ್‌ ಸರಣಿ(ಸೆಪ್ಟೆಂಬರ್ 19 ರಿಂದ 29)ಯ ನಂತರ ಸೆಪ್ಟೆಂಬರ್‌ 13ರಂದು ಐರ್ಲೆಂಡ್‌ ವಿರುದ್ಧ ಒಂದು ಪಂದ್ಯ ಆಡಲಿದ್ದು, ಶ್ರೀಲಂಕಾವನ್ನು ಹಿಂದಿಕ್ಕುವ ಎಲ್ಲಾ ಅವಕಾಶವನ್ನು ಹೊಂದಿದೆ.

Story first published: Wednesday, January 3, 2018, 10:05 [IST]
Other articles published on Jan 3, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+