Match Fixing: ಶ್ರೀಲಂಕಾದ ವಿಶ್ವಕಪ್ ವಿಜೇತ ಆಟಗಾರ ಮ್ಯಾಚ್ ಫಿಕ್ಸಿಂಗ್ ಪ್ರಕರಣದಲ್ಲಿ ಬಂಧನ
ಶ್ರೀಲಂಕಾದ ಮಾಜಿ ಕ್ರಿಕೆಟಿಗ, ವಿಶ್ವಕಪ್ ವಿಜೇತ ತಂಡದ ಸದಸ್ಯ ಸಚಿತ್ರ ಸೇನನಾಯಕೆ ಮ್ಯಾಚ್ ಫಿಕ್ಸಿಂಗ್ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದಾರೆ. ಕ್ರೀಡಾ ಇಲಾಖೆಯ ಭ್ರಷ್ಟಾಚಾರ ತನಿಖಾ ದಳದ ಪೊಲೀಸರಿಗೆ ಶರಣಾಗಿದ್ದ ಸೇನನಾಯಕೆಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು ಕೋರ್ಟ್ ಮುಂದೆ ಹಾಜರುಪಡಿಸಲಿದ್ದಾರೆ. ಮೂರು ವಾರಗಳ ಹಿಂದೆಯಷ್ಟೇ ನ್ಯಾಯಾಲಯ ವಿದೇಶ ಪ್ರಯಾಣ ನಡೆಸದಂತೆ ನಿಷೇಧಿಸಿತ್ತು.
2020ರ ಶ್ರೀಲಂಕಾ ಪ್ರೀಮಿಯರ್ ಲೀಗ್(LPL) ಟೂರ್ನಿಯಲ್ಲಿ ಪಂದ್ಯದ ಫಲಿತಾಂಶ ಮೇಲೆ ಪರಿಣಾಮ ಬೀರಲು ಪ್ರಯತ್ನಿಸಿದ ಆರೋಪವನ್ನು ಸೇನನಾಯಕೆ ಮೇಲೆ ಹೊರಿಸಲಾಗಿದೆ. ಶ್ರೀಲಂಕಾ ಕ್ರಿಕೆಟ್‌ನ ಇತಿಹಾಸದಲ್ಲಿ ಮೊದಲ ಬಾರಿಗೆ ಮ್ಯಾಚ್ ಫಿಕ್ಸಿಂಗ್ ಆರೋಪದಲ್ಲಿ ಕಾನೂನು ಕ್ರಮವನ್ನು ಎದುರಿಸಿದ ಮೊದಲ ಕ್ರಿಕೆಟಿಗ ಎಂಬ ಕುಖ್ಯಾತಿಗೆ ಒಳಗಾಗಿದ್ದಾರೆ.

2020ರ ಆವೃತ್ತಿಯಲ್ಲಿ ಇಬ್ಬರು ಆಟಗಾರರನ್ನು ಮ್ಯಾಚ್ ಫಿಕ್ಸಿಂಗ್‌ಗೆ ಪ್ರಚೋದಿಸಿದರು ಎನ್ನುವ ಆರೋಪಗಳು ಕೇಳಿ ಬಂದಿದೆ. 38 ವರ್ಷದ ಸಚಿತ್ರ ಸೇನನಾಯಕೆ 2012ರಲ್ಲಿ ಶ್ರೀಲಂಕಾ ಪರವಾಗಿ ಅಂತಾಋಆಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದು 2016ರಲ್ಲಿ ಕೊನೆಯ ಬಾರಿಗೆ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಿದ್ದರು. ಈ ಅವಧಿಯಲ್ಲಿ ಅವರು ಒಂದು ಟೆಸ್ಟ್ 49 ಏಕದಿನ ಹಾಗೂ 24 ಟಿ20 ಪಂದ್ಯಗಳನ್ನು ಆಡಿದ್ದಾರೆ.
ಕೊಲಂಬೊ ಮುಖ್ಯ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಮೂರು ತಿಂಗಳ ಅವಧಿಗೆ ಪ್ರಯಾಣ ನಿಷೇಧವನ್ನು ವಿಧಿಸಿದೆ. ಇನ್ನು ಶ್ರೀಲಂಕಾದ ಮಾಜಿ ಆಫ್ ಸ್ಪಿನ್ನರ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡುವಂತೆ ಕ್ರೀಡಾ ಸಚಿವಾಲಯದ ವಿಶೇಷ ತನಿಖಾ ಘಟಕ ಜನರಲ್ ಇಲಾಖೆಗೆ ಸೂಚನೆ ನೀಡಿದೆ ಎಂದು ನ್ಯಾಯಾಲಯಕ್ಕೆ ಮಾಹಿತಿ ನೀಡಲಾಗಿದೆ.
ಐಪಿಎಲ್‌ನಲ್ಲಿ ಆಡಿದ್ದ ಸೇನನಾಯಕೆ
ಸಚಿತ್ರ ಸೇನನಾಯಕೆ ಐಪಿಎಲ್‌ನಲ್ಲಿಯೂ ಆಡಿದ್ದಾರೆ. 2013ರಲ್ಲಿ ಅವರು ಐಪಿಎಲ್‌ನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಪರವಾಗಿ ಆಡುವ ಅವಕಾಶ ಪಡೆದುಕೊಂಡಿದ್ದರು. ಒಟ್ಟು 8 ಪಂದ್ಯಗಳಲ್ಲಿ ಆಡಿದ್ದ ಸೇನನಾಯಕೆ 9 ವಿಕೆಟ್ ಪಡೆದುಕೊಂಡಿದ್ದರು. 26 ರನ್‌ಗಳನ್ನು ನೀಡಿ 2 ವಿಕೆಟ್ ಪಡೆದುಕೊಂಡಿದ್ದು ಐಪಿಎಲ್‌ನಲ್ಲಿ ಅವರ ಅತ್ಯುತ್ತಮ ಬೌಲಿಂಗ್ ಪ್ರದರ್ಶನವಾಗಿದೆ. ಇನ್ನು ಶ್ರೀಲಂಕಾ ಪರವಾಗಿ ಆಡಿದ 49 ಏಕದಿನ ಪಂದ್ಯಗಳಲ್ಲಿ 53 ವಿಕೆಟ್‌ಗಳನ್ನು ಪಡೆದುಕೊಂಡಿರುವ ಅವರು 24 ಟಿ20 ಪಂದ್ಯಗಳಲ್ಲಿ 25 ವಿಕೆಟ್‌ಗಳನ್ನು ಪಡೆದುಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications