ನೀರಜ್ ಚೋಪ್ರಾ ದಾಖಲೆ ಅಳಿಸಿದ ಶ್ರೀಲಂಕಾದ ರುಮೇಶ್
ಶ್ರೀಲಂಕಾದ ಜಾವೆಲಿನ್ ಎಸೆತಗಾರ ರುಮೇಶ್ ತರಂಗ ಪತಿರಾಜೆ ದೊಡ್ಡ ಸಾಧನೆ ಮಾಡಿದ್ದಾರೆ. ಅವರು ಡೈಮಂಡ್ ಲೀಗ್ ನಲ್ಲಿ ಅಮೋಘ ಪ್ರದರ್ಶನ ನೀಡಿದ್ದಾರೆ. ತಮ್ಮ ಚೊಚ್ಚಲ ಪಂದ್ಯದಲ್ಲಿ ದಾಖಲೆಯ ಎಸೆತದೊಂದಿಗೆ ರುಮೇಶ್ ನೀರಜ್ ಚೋಪ್ರಾ ಅವರ ದಾಖಲೆಯನ್ನು ಅಳಿಸಿ ಹಾಕಿದ್ದಾರೆ.
ಡೈಮಂಡ್ ಲೀಗ್‌ನಲ್ಲಿ ಶ್ರೀಲಂಕಾದ ರುಮೇಶ್ ತಮ್ಮ ಎರಡನೇ ಪ್ರಯತ್ನದಲ್ಲಿ 92.62 ಮೀಟರ್ ಎಸೆದಿದ್ದಾರೆ. ಈ ಮೂಲಕ ಜಾವೆಲಿನ್ ಕ್ರೀಡೆಯಲ್ಲಿ ಅತಿ ದೂರ ಜಾವೆಲಿನ್ ಎಸೆದ ಏಷ್ಯನ್ ಕ್ರೀಡಾಪಟು ಎಂಬ ಹಿರಿಮೆ ತಮ್ಮದಾಗಿಸಿಕೊಂಡಿದ್ದಾರೆ. ಇದಕ್ಕೂ ಮೊದಲು ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಪಾಕಿಸ್ತಾನದ ಜಾವೆಲಿನ್ ಎಸೆತಗಾರ ಅರ್ಷದ್ ನದೀಮ್ ಐತಿಹಾಸಿಕ ಸಾಧನೆ ಮಾಡಿದ್ದರು. ಇವರು 92.97 ಮೀಟರ್ ದೂರ ಜಾವೆಲಿನ್ ಎಸೆದಿದ್ದರು. ಈಗ ಈ ಪಟ್ಟಿಯಲ್ಲಿ ಪತಿರಾಜೆ ಎರಡನೇ ಸ್ಥಾನಕ್ಕೆ ಏರಿದ್ದಾರೆ. ಡೈಮಂಡ್ ಲೀಗ್‌ನಲ್ಲಿ ಪತಿರಾಜೆ 92.62 ಮೀಟರ್ ಎಸೆದಿದ್ದಾರೆ.

ಪತಿರಾಜೆ ನೀರಜ್ ಚೋಪ್ರಾ ಮತ್ತು ಚೆಂಗ್ ಚಾವೊ-ತ್ಸುನ್ ಅವರನ್ನು ಹಿಂದಿಕ್ಕಿದ್ದಾರೆ. ಈ ಸಾಧನೆಯೊಂದಿಗೆ ರುಮೇಶ್ ಭಾರತದ ಖ್ಯಾತ ಜಾವೆಲಿನ್ ಕ್ರೀಡಾ ಪಟು ನೀರಜ್ ಚೋಪ್ರಾ, ಹಾಗೂ ಚೈನೀಸ್ ತೈಪೆ ಅಥ್ಲೀಟ್ ಚೆಂಗ್ ಚಾವೊ-ತ್ಸುನ್ ಅವರ ಸಾಧನೆಯನ್ನು ಮೀರಿ ನಿಂತಿದ್ದಾರೆ. ದೋಹಾ ಡೈಮಂಡ್ ಲೀಗ್ 2025 ರಲ್ಲಿ ನೀರಜ್ ಚೋಪ್ರಾ 90.23 ಮೀಟರ್ ಎಸೆದಿದ್ದರು. ಅಲ್ಲದೆ ಮೊದಲ ಬಾರಿಗೆ 90ರ ಮಾರ್ಕ್ ಕ್ರಾಸ್ ಮಾಡಿದ್ದರು. 2017 ರ ಬೇಸಿಗೆ ಯೂನಿವರ್ಸಿಯೇಡ್ (ವಿಶ್ವ ವಿಶ್ವವಿದ್ಯಾಲಯ ಕ್ರೀಡಾಕೂಟ) ನಲ್ಲಿ ಚೆಂಗ್ ಚಾವೊ-ತ್ಸುನ್ 91.36 ಮೀಟರ್ ಎಸೆದಿದ್ದರು.
ರುಮೇಶ್ ಹೇಳಿದ್ದಿಷ್ಟು..
ರೋಮ್‌ನಲ್ಲಿ ಹವಾಮಾನ ತುಂಬಾ ಚೆನ್ನಾಗಿದೆ, ಇದು ಹಿಂದಿನ ಸ್ಪರ್ಧೆಗಿಂತ ಹೆಚ್ಚು ದೂರ ಜಾವೆಲಿನ್ ಎಸೆಯಲು ನನಗೆ ಸಹಾಯ ಮಾಡಿತು ಎಂದು ಡೈಮಂಡ್ ಲೀಗ್‌ನಲ್ಲಿ ಐತಿಹಾಸಿಕ ಸಾಧನೆ ಮಾಡಿದ ರುಮೇಶ್ ಪತಿರಾಜೆ ಹೇಳಿದ್ದಾರೆ. ಇದೇ ಲೀಗ್‌ನಲ್ಲಿ ಭಾರತದ ಭರವಸೆಯ ಅಥ್ಲೀಟ್ ಸಚಿನ್ ಯಾದವ್ ಸಾಧನೆ ನಿರಾಶಾದಾಯಕವಾಗಿತ್ತು. 10 ಕ್ರೀಡಾಪಟುಗಳ ಸ್ಪರ್ಧೆಯಲ್ಲಿ ಅವರು ಎಂಟನೇ ಸ್ಥಾನ ಪಡೆದಿದ್ದಾರೆ.
ಈ ಐತಿಹಾಸಿಕ ಜಯದೊಂದಿಗೆ ರುಮೇಶ್ ಜಾಗತಿಕ ಮಟ್ಟದಲ್ಲಿ ಶ್ರೀಲಂಕಾದ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಮುಂಬರುವ ಒಲಿಂಪಿಕ್ಸ್ ಮತ್ತು ವಿಶ್ವ ಚಾಂಪಿಯನ್‌ಶಿಪ್‌ಗಳಲ್ಲಿ ನೀರಜ್ ಚೋಪ್ರಾ ಮತ್ತು ಅರ್ಷದ್ ನದೀಮ್‌ಗೆ ಇವರು ಕಠಿಣ ಪೈಪೋಟಿ ನೀಡಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications