For Quick Alerts
ALLOW NOTIFICATIONS  
For Daily Alerts
 

ಟೀಮ್ ಇಂಡಿಯಾ ಹೆಡ್‌ ಕೋಚ್ ಹುದ್ದೆಗೆ ಶ್ರೀಲಂಕಾ ಲೆಜೆಂಡ್?; ಆಸಕ್ತಿ ತೋರಿದ ಬಿಸಿಸಿಐ!

ಮೇ 22 ಬುಧವಾರ, ಟೀಮ್‌ ಇಂಡಿಯಾ ಹೆಡ್‌ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ನಿಗದಿತ ಪಡಿಸುತ್ತಿದ್ದಂತೆ, ಹಲವು ದಿಗ್ಗಜರ ಹೆಸರುಗಳು ಮುಂಚೂಣಿಯಲ್ಲಿವೆ.

ವೆಸ್ಟ್‌ ಇಂಡೀಸ್‌ ಮತ್ತು ಅಮೆರಿಕಾದದಲ್ಲಿ ನಡೆಯಲಿರುವ ಬಹುನಿರೀಕ್ಷಿತ 2024ರ ಐಸಿಸಿ ಪುರುಷರ ಟಿ20 ವಿಶ್ವಕಪ್‌ ಟೂರ್ನಿ ಮುಗಿಯುತ್ತಿದ್ದಂತೆ ರಾಹುಲ್‌ ದ್ರಾವಿಡ್‌ ಅವರ ಭಾರತ ತಂಡದ ಹೆಡ್‌ ಕೋಚ್‌ ಅವಧಿ ಅಂತ್ಯವಾಗಲಿದೆ. ಈ ಹಿನ್ನೆಲೆಯಲ್ಲಿ ಟೀಮ್‌ ಇಂಡಿಯಾದ ಹೆಡ್‌ ಕೋಚ್‌ ಹುದ್ದೆಗೆ ಬಿಸಿಸಿಐ ಅರ್ಜಿಗಳನ್ನು ಅಹ್ವಾನಿಸಿದೆ.

Sri Lanka legend for Team India head coach post

ಇಷ್ಟು ದಿನದವರೆಗೆ ಟೀಮ್‌ ಇಂಡಿಯಾದ ಹೆಡ್‌ ಕೋಚ್‌ ಹುದ್ದೆಗೆ ಸ್ಟಿಫನ್‌ ಫ್ಲೆಮಿಂಗ್‌, ವಿವಿಎಸ್‌ ಲಕ್ಷ್ಮಣ್‌ ಮತ್ತು ಜಸ್ಟಿನ್‌ ಲ್ಯಾಂಗರ್ ಮತ್ತು ಗೌತಮ್‌ ಗಂಭೀರ್‌ ಹೆಸರು ಫೈನಲ್‌ ಲಿಸ್ಟ್‌ ನಲ್ಲಿದೆ ಎನ್ನಲಾಗಿತ್ತು. ಆದರೆ ಇದೀಗ ಈ ನಾಲ್ವರು ದಿಗ್ಗಜರ ಜೊತೆಗೆ ಶ್ರೀಲಂಕಾ ಲೆಜೆಂಡ್‌ ಹೆಸರು ಭಾರೀ ಸದ್ದು ಮಾಡುತ್ತಿದೆ.

ಶ್ರೀಲಂಕಾ ಪರ ಆಡಿದ ಶ್ರೇಷ್ಠ ಕ್ರಿಕೆಟಿಗರಲ್ಲಿ ಒಬ್ಬರಾದ 46 ವರ್ಷದ ಮಹೇಲಾ ಜಯವರ್ಧನೆ ಅವರನ್ನು ಟೀಮ್‌ ಹೆಡ್‌ ಕೋಚ್‌ ಮಾಡಲು ಬಿಸಿಸಿಐ ಆಸಕ್ತಿ ಹೊಂದಿದೆ ಎಂದು ಮೂಲಗಳು ತಿಳಿಸಿವೆ. ಮಹೇಲಾ ಜಯವರ್ಧನೆ ಶ್ರೀಲಂಕಾದ ತಂಡದ ಮಾಜಿ ನಾಯಕ ಮತ್ತು ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್‌ ತಂಡದ ನಿರ್ದೇಶಕನಾಗಿರುವ ಅನುಭವವನ್ನು ಹೊಂದಿದ್ದಾರೆ.

Sri Lanka legend for Team India head coach post

ಜಯವರ್ಧನೆ ಅವರಿಗೆ ಕೋಚಿಂಗ್‌ ಅನುಭವದ ಕೊರತೆಯಿಲ್ಲ. 2017ರಲ್ಲಿ ಮುಂಬೈ ತಂಡಕ್ಕೆ ನಿರ್ದೇಶಕರಾಗಿ ಬಂದ ತಮ್ಮ ಮೊದಲ ಋತುವಿನಲ್ಲಿ ಐಪಿಎಲ್‌ ಟ್ರೋಫಿ ಗೆದ್ದಿದ್ದರು.

ಬಳಿಕ 2019 ಮತ್ತು 2020 ರಲ್ಲಿ ಎರಡು ಪ್ರಶಸ್ತಿಗಳನ್ನು ಗೆಲ್ಲುವ ಮೂಲಕ ನಾಯಕ ರೋಹಿತ್ ಶರ್ಮಾ ಅವರೊಂದಿಗೆ ಉತ್ತಮ ಸಂಪರ್ಕ ಹೊಂದಿದ್ದಾರೆ. ಐಪಿಎಲ್ ಯಶಸ್ಸಿನ ಜೊತೆಗೆ, ಜಯವರ್ಧನೆ ಅವರು ಐಸಿಸಿ ಪ್ರತಿಷ್ಠಿತ ಟೂರ್ನಿಗಳಲ್ಲಿ ಶ್ರೀಲಂಕಾ ತಂಡಕ್ಕೆ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದಾರೆ.

ಟೀಮ್‌ ಇಂಡಿಯಾ ಹೆಡ್‌ ಕೋಚ್‌ ಹುದ್ದೆಗೆ ಜಯವರ್ಧನೆ ಹೆಸರು ಕೇಳಿಬರುತ್ತಿರುವುದು ಇದೇ ಮೊದಲಲ್ಲ. ರವಿಶಾಸ್ತ್ರಿಯಿಂದ ರಾಹುಲ್ ದ್ರಾವಿಡ್ ಅಧಿಕಾರ ವಹಿಸಿಕೊಂಡಾಗಲೂ ಜಯವರ್ಧನೆ ಅವರ ಹೆಸರು ಮೊದಲಿತ್ತು.

ಆದರೆ ಈ ಬಾರಿ ಜಯವರ್ಧನೆ ಅವರು ಅರ್ಜಿ ಸಲ್ಲಿಸುವರ ಬಗ್ಗೆ ಇನ್ನೂ ಯಾವುದೇ ಮಾಹಿತಿ ತಿಳಿದು ಬಂದಿಲ್ಲ. ಜೊತೆಗೆ ಜಯವರ್ಧನೆ ಕೂಡ ಈ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಟೀಮ್‌ ಇಂಡಿಯಾ ಹೆಡ್‌ ಕೋಚ್‌ ಹುದ್ದೆಗೆ ಅರ್ಜಿ ಸಲ್ಲಿಸಲು ಮೇ 27 ಕೊನೆಯ ದಿನಾಂಕವಾಗಿದೆ.

ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಜಯವರ್ಧನೆ ದಾಖಲೆ

ಜಯವರ್ಧನೆ ಅವರು ಟೆಸ್ಟ್‌ನಲ್ಲಿ 10,000 ರನ್ ಗಳಿಸಿದ ಶ್ರೀಲಂಕಾದ ಮೊದಲ ಬ್ಯಾಟರ್ ಎಂಬ ದಾಖಲೆ ಹೊಂದಿದ್ದಾರೆ. ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ 49.84 ರ ಸರಾಸರಿಯೊಂದಿಗೆ 11,814 ರನ್ ಗಳಿಸಿದ್ದು, 34 ಶತಕಗಳು ಮತ್ತು 50 ಅರ್ಧಶತಕಗಳನ್ನು ಹೊಡೆದಿದ್ದಾರೆ.

ಟೆಸ್ಟ್‌ನಲ್ಲಿ 374 ರನ್ ಜಯವರ್ಧನೆ‌ ಅತ್ಯುತ್ತಮ ಸ್ಕೋರ್ ಆಗಿದೆ. ರೆಡ್‌ ಬಾಲ್‌ ಕ್ರಿಕೆಟ್‌ನಲ್ಲಿ 9ನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ. ಜೊತೆಗೆ ಟೆಸ್ಟ್‌ನಲ್ಲಿ ಲಂಕಾ ಪರ 2ನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ.

448 ಏಕದಿನ ಪಂದ್ಯಗಳನ್ನು ಆಡಿರುವ ಜಯವರ್ಧನೆ , 12,650 ರನ್ ಗಳಿಸಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ 6ನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಮತ್ತು 3ನೇ ಅತಿ ಹೆಚ್ಚು ರನ್ ಗಳಿಸಿದ ಶ್ರೀಲಂಕಾದ ಆಟಗಾರರ ಎಮಬ ಸಾಧನೆ ಗೈದಿದ್ದಾರೆ.

ಇನ್ನು ಜಯವರ್ಧನೆ 55 ಟಿ20 ಪಂದ್ಯಗಳಿಂದ 31.76 ಸರಾಸರಿಯಲ್ಲಿ 1,493 ರನ್ ಬಾರಿಸಿದ್ದಾರೆ. 1 ಶತಕ ಮತ್ತು 9 ಅರ್ಧಶತಕಗಳನ್ನು ಹೊಂದಿದ್ದಾರೆ. 2014ರಲ್ಲಿ ಟಿ20 ವಿಶ್ವಕಪ್ ವಿಜೇತ ಲಂಕಾ ತಂಡದ ಭಾಗವಾಗಿದ್ದರು. ಅಲ್ಲದೆ ಜಯವರ್ಧನೆ ಅವರು ತಂಡದಲ್ಲಿದಾಗ ಏಕದಿನ ಮತ್ತು ಟಿ20 ಕ್ರಿಕೆಟ್‌ನಲ್ಲಿ ಶ್ರೀಲಂಕಾ 5 ಬಾರಿ ವಿಶ್ವಕಪ್ ಫೈನಲ್ ತಲುಪಿತು ಎಂಬುದು ವಿಶೇಷವಾಗಿದೆ.

Story first published: Wednesday, May 22, 2024, 13:30 [IST]
Other articles published on May 22, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+