Jeffrey Vandersay: ಭಾರತ ವಿರುದ್ಧ ದಾಖಲೆ ಬರೆದ ಶ್ರೀಲಂಕಾ ಮಿಸ್ಟರಿ ಸ್ಪಿನ್ನರ್!
ಆಗಸ್ಟ್ 5 ಸೋಮವಾರ, ವಿಶ್ವ ಕ್ರಿಕೆಟ್‌ನಲ್ಲಿ ಶ್ರೀಲಂಕಾ ತಂಡದ ಸ್ಪಿನ್ನರ್‌ಗಳು ಯಾವಾಗಲೂ ಪ್ರಾಬಲ್ಯ ಸಾಧಿಸಿದ್ದಾರೆ ಕ್ರಿಕೆಟ್ ದಂತಕಥೆ ಮುತ್ತಯ್ಯ ಮುರಳೀಧರನ್ ಹೊರತುಪಡಿಸಿ, ಅಜಂತಾ ಮೆಂಡಿಸ್ ಮತ್ತು ರಂಗನಾ ಹೆರಾತ್ ಅವರು ತಮ್ಮ ಸ್ಪಿನ್ ಬೌಲಿಂಗ್ ಮೂಲಕ ಸಂಚಲನ ಮೂಡಿಸಿದ್ದಾರೆ.
ಇದೀಗ ಲಂಕಾ ತಂಡದ ಸ್ಪಿನ್ನರ್ ಒಬ್ಬರು ಎದುರಾಳಿ ತಂಡವನ್ನು ಮತ್ತೆ ಸಂಕಷ್ಟಕ್ಕೆ ಸಿಲುಕಿಸಿದ್ದಾರೆ. ಈ ಬಾರಿ ಮಿಸ್ಟರಿ ಸ್ಪಿನ್ನರ್ ಜೆಫ್ರಿ ವಾಂಡರ್ಸೆ ಮಾಡಿದ್ದಾರೆ. ಕೊಲಂಬೊದ ಆರ್ ಪ್ರೇಮದಾಸ್ ಸ್ಟೇಡಿಯಂನಲ್ಲಿ (ಆ.4) ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಎದುರು ಜೆಫ್ರಿ ವಾಂಡರ್ಸೆ ಅದ್ಭುತ ಬೌಲಿಂಗ್ ಪ್ರದರ್ಶನ ಮಾಡಿದರು.

ಜೆಫ್ರಿ ವಾಂಡರ್ಸೆ 10 ಓವರ್ ಗಳಲ್ಲಿ 33 ರನ್ ನೀಡಿ 6 ವಿಕೆಟ್ ಕಬಳಿಸಿ ಟೀಮ್ ಇಂಡಿಯಾದಿಂದ ಗೆಲುವನ್ನು ಕಸಿದುಕೊಂಡರು. ಈ ಮೂಲಕ ಟೀಮ್ ಇಂಡಿಯಾ ಎದುರು ಜೆಫ್ರಿ ವಾಂಡರ್ಸೆ ವಿಶೇಷ ದಾಖಲೆ ಬರೆದಿದ್ದಾರೆ.
2008ರಲ್ಲಿ ಭಾರತ ವಿರುದ್ಧದ ಏಕದಿನ ಪಂದ್ಯದಲ್ಲಿ ಅಜಂತಾ ಮೆಂಡಿಸ್ 13 ರನ್ ನೀಡಿ 6 ವಿಕೆಟ್ ಪಡೆದಿದ್ದರು. ಈಗ ವಾಂಡರ್ಸೆ ಇದೇ ಸಾಧನೆ ಮಾಡಿದ್ದಾರೆ. 6 ವಿಕೆಟ್ ಕಬಳಿಸುವ ಮೂಲಕ ಮೆಂಡಿಸ್ ಅಮೋಘ ಬೌಲಿಂಗ್ ಪ್ರದರ್ಶನವನ್ನು ಮೆಲುಕು ಹಾಕಿದ್ದಾರೆ.
ಟೀಮ್ ಇಂಡಿಯಾ ಬ್ಯಾಟರ್ಸ್‌ಗೆ ವಾಂಡರ್ಸೆ ಅವರ ಬೌಲಿಂಗ್ ದಾಳಿಯನ್ನು ಎದುರಿಸಲು ಸಾಧ್ಯವಾಗಲಿಲ್ಲ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ಮತ್ತು ಶಿವಂ ದುಬೆ ಅವರಂತಹ ಪ್ರಮುಖ ವಿಕೆಟ್‌ಗಳನ್ನು ಪಡೆಯುವಲ್ಲಿ ಯಶಸ್ವಿಯಾದರು.
ಲಂಕಾ ಸರಣಿಯಲ್ಲಿ ಸೋಲು ತಪ್ಪಿಸಿಕೊಳ್ಳಲು ವಾಂಡರ್ಸೆ ನೆರವಾಗಿದ್ದಾರೆ. ಶ್ರೀಲಂಕಾ 3 ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಇದೇ ಮೈದಾನಲ್ಲಿ ನಡೆದ ಮೊದಲ ಏಕದಿನ ಪಂದ್ಯ ಟೈ ಆಗಿದೆ.
ಮೂರನೇ ಪಂದ್ಯ ಆಗಸ್ಟ್ 7 ರಂದು ನಡೆಯಲಿದೆ. 2006ರ ನಂತರ ಮೊದಲ ಬಾರಿಗೆ ಭಾರತ ವಿರುದ್ಧ ಶ್ರೀಲಂಕಾ ಏಕದಿನ ಸರಣಿಯನ್ನು ಉಳಿಸಿಕೊಂಡಿದೆ. ಇದಲ್ಲದೇ 2012ರ ನಂತರ ಮೊದಲ ಬಾರಿಗೆ ಭಾರತದ ವಿರುದ್ಧ ಸತತ ಎರಡು ಪಂದ್ಯಗಳಲ್ಲಿ ಶ್ರೀಲಂಕಾ ತಂಡ ಸೋತಿಲ್ಲ.
ವಾಂಡರ್ಸೆ ದಾಖಲೆ
ವಾಂಡರ್ಸೆ ಭಾರತ ವಿರುದ್ಧದ ಏಕದಿನ ಪಂದ್ಯದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಲೆಗ್ ಸ್ಪಿನ್ನರ್ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ. ಈ ಮೂಲಕ ಪಾಕಿಸ್ತಾನದ ಮುಷ್ತಾಕ್ ಅಹ್ಮದ್ ಅವರ ದಾಖಲೆಯನ್ನು ವಾಂಡರ್ಸೆ ಮುರಿದಿದ್ದಾರೆ. ಮುಷ್ತಾಕ್ ಅಹ್ಮದ್ 1996ರಲ್ಲಿ ಟೊರೊಂಟೊದಲ್ಲಿ 36 ರನ್ ನೀಡಿ 5 ವಿಕೆಟ್ ಪಡೆದಿದ್ದರು.
ಭಾರತ ವಿರುದ್ಧದ ಏಕದಿನದಲ್ಲಿ ಲಂಕಾ ಸ್ಪಿನ್ನರ್ ಅತ್ಯುತ್ತಮ ಪ್ರದರ್ಶನ
7/30- ಮುತ್ತಯ್ಯ ಮುರಳೀಧರನ್, ಶಾರ್ಜಾ, 2000
6/13- ಅಜಂತಾ ಮೆಂಡಿಸ್, ಕರಾಚಿ 2008
6/33- ಜೆಫ್ರಿ ವಾಂಡರ್ಸೆ, ಕೊಲಂಬೊ, 2024
6/41- ವಿವಿಯನ್ ರಿಚರ್ಡ್ಸ್, ದೆಹಲಿ, 1989
6/54- ಅಕಿಲ ದನಂಜಯ, ಪಲ್ಲೆಕೆಲೆ, 2017
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications