ಕೊಲಂಬೊ, ನವೆಂಬರ್ 06: ಮುಂಬರುವ ಭಾರತ ಪ್ರವಾಸಕ್ಕೆ ಶ್ರೀಲಂಕಾ ತನ್ನ 15 ಸದಸ್ಯರ ಕ್ರಿಕೆಟ್ ತಂಡವನ್ನು ಪ್ರಕಟಿಸಿದೆ. ದಿನೇಶ್ ಚಾಂಡಿಮಲ್ ನಾಯಕರಾಗಿದ್ದು, ಬ್ಯಾಟ್ಸ್ಮನ್ ಕುಸಲ್ ಮೆಂಡಿಸ್ ಮತ್ತು ಕೌಸಲ್ ಸಿಲ್ವಾರನ್ನು ಕೈಬಿಡಲಾಗಿದೆ.
ಟೀಮ್ ಇಂಡಿಯಾ ಹಾಗೂ ಶ್ರೀಲಂಕಾ ಮೂರು ಪಂದ್ಯಗಳ ಟೆಸ್ಟ್ ಸರಣಿಗೆ ಶ್ರೀಲಂಕಾ ತಂಡವನ್ನು ಪ್ರಕಟಿಸಲಾಗಿದೆ. ನವೆಂಬರ್ 16ರಿಂದ ಡಿಸೆಂಬರ್ 6ರವರೆಗೆ ಟೆಸ್ಟ್ ಸರಣಿ ನಡೆಯಲಿದ್ದು, ಜತೆಗೆ 5 ಪಂದ್ಯಗಳ ಏಕದಿನ ಮತ್ತು 3 ಪಂದ್ಯಗಳ ಟಿ20 ಸರಣಿಯೂ ನಡೆಯಲಿದೆ.

ಶ್ರೀಲಂಕಾ ಕ್ರಿಕೆಟ್ ಮಂಡಳಿ ಮಾಜಿ ಬ್ಯಾಟ್ಸ್ಮನ್ ತಿಲಾನ್ ಸಮರ ವೀರರನ್ನು ತಂಡದ ನೂತನ ಬ್ಯಾಟಿಂಗ್ ಕೋಚ್ ಆಗಿದ್ದು, 2019ರ ವಿಶ್ವಕಪ್ ತನಕ ತಂಡದ ಜತೆ ಇರಲಿದ್ದಾರೆ.
ತಂಡ: ದಿನೇಶ್ ಚಾಂಡಿಮಲ್(ನಾಯಕ), ದಿಮುತ್ ಕರುಣರತ್ನೆ, ಧನಂಜಯ ಡಿ ಸಿಲ್ವಾ, ಸದೀರಾ ಸಮರವಿಕ್ರಮ, ಲಾಹಿರು ತಿರಿಮನ್ನೆ, ರಂಗನಾ ಹೆರಾತ್, ಸುರಂಗಾ ಲಕ್ಮಲ್, ದಿಲ್ರುವಾನ್ ಪೆರೇರಾ, ಲಾಹಿರು ಗಮಗೆ, ಏಂಜೆಲೋ ಮ್ಯಾಥ್ಯೂಸ್, ಲಕ್ಷಣ್ ಸಂಡಕನ್, ವಿಶ್ವ ಫೆರ್ನಾಂಡೊ, ದಸುನ್ ಶನಕಾ, ನಿರೋಶಾನ್ ಡಿಕ್ವೆಲ್ಲಾ, ರೋಶನ್ ಸಿಲ್ವಾ.