ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ತಾತ್ಕಾಲಿಕ ತಂಡ ಪ್ರಕಟಿಸಿದ ಶ್ರೀಲಂಕಾ

Sri Lanka named provisional squads for the upcoming series against Australia

ಜೂನ್ ತಿಂಗಳಿನಲ್ಲಿ ಆಸ್ಟ್ರೇಲಿಯಾ ತಂಡ ಶ್ರೀಲಂಕಾ ಪ್ರವಾಸವನ್ನು ಕೈಗೊಳ್ಳಲಿದ್ದು ವೈಟ್‌ಬಾಲ್ ಹಾಗೂ ಟೆಸ್ಟ್ ಸರಣಿಯಲ್ಲಿ ಭಾಗಿಯಾಗಲಿದೆ. ಟಿ20 ಏಕದಿನ ಹಾಗೂ ಟೆಸ್ಟ್ ಮೂರು ಮಾದರಿಯ ಸರಣಿಯಲ್ಲಿ ಈ ಎರಡು ತಂಡಗಳು ಮುಖಾಮುಖಿಯಾಗಲಿದೆ. ಈ ಸರಣಿಯಲ್ಲಿ ಭಾಗವಹಿಸಲಿರುವ ಶ್ರೀಲಂಕಾದ ತಾತ್ಕಾಲಿಕ ಸ್ಕ್ವಾಡ್‌ಅನ್ನು ಶ್ರೀಲಂಕಾ ಕ್ರಿಕೆಟ್ ಮಂಡಳಿ ಪ್ರಕಟಿಸಿದೆ.

ಜೂನ್ 7ರಿಂದ ಆಸ್ಟ್ರೇಲಿಯಾದ ಶ್ರೀಲಂಕಾ ಪ್ರವಾಸ ಆರಂಭವಾಗಲಿದ್ದು ಮೊದಲಿಗೆ ಮೂರು ಪಂದ್ಯಗಳ ಟಿ20 ಸರಣಿ ಆಯೋಜನೆಯಾಗಲಿದ್ದು ನಂತರ ಐದು ಪಂದ್ಯಗಳ ಏಕದಿನ ಸರಣಿ ಹಾಗೂ ಬಳಿಕ ಎರಡು ಟೆಸ್ಟ್ ಪಂದ್ಯಗಳಲ್ಲಿ ಈ ಎರಡು ತಂಡಗಳು ಮುಖಾಮುಖಿಯಾಗಲಿದೆ. ದಿಮುತ್ ಕರುಣರತ್ನೆ ಟೆಸ್ಟ್ ತಂಡದ ನಾಯಕತ್ವ ವಹಿಸಿಕೊಂಡರೆ ದಸುನ್ ಶನಕ ಸೀಮಿತ ಓವರ್‌ಗಳ ತಂಡವನ್ನು ಮುನ್ನಡೆಸಲಿದ್ದಾರೆ.

IPL 2022ರ ಪ್ಲೇಆಫ್ ಅರ್ಹತೆ ಸನ್ನಿವೇಶ ಹೇಗಿದೆ?; DC ವಿರುದ್ಧ MI ಗೆಲ್ಲಲು RCB ಅಭಿಮಾನಿಗಳ ಪ್ರಾರ್ಥನೆIPL 2022ರ ಪ್ಲೇಆಫ್ ಅರ್ಹತೆ ಸನ್ನಿವೇಶ ಹೇಗಿದೆ?; DC ವಿರುದ್ಧ MI ಗೆಲ್ಲಲು RCB ಅಭಿಮಾನಿಗಳ ಪ್ರಾರ್ಥನೆ

ಇನ್ನು ಈ ಪ್ರವಾಸಕ್ಕೆ ಆಸ್ಟ್ರೇಲಿಯಾ ಈಗಾಗಲೇ ಬಲಿಷ್ಠ ತಂಡವನ್ನು ಪ್ರಕಟಿಸಿದ್ದು ಪ್ಯಾಟ್ ಕಮ್ಮಿನ್ಸ್ ಆಸಿಸ್ ಟೆಸ್ಟ್ ತಂಡದ ನಾಯಕತ್ವ ವಹಿಸಿಕೊಂಡರೆ ಆರೋನ್ ಫಿಂಚ್ ಸಿಮಿತ ಓವರ್‌ಗಳ ತಂಡವನ್ನು ಮುನ್ನಡೆಸಲಿದ್ದಾರೆ. ಇನ್ನು ಈ ಮಹತ್ವದ ಸರಣಿಗೆ ಸಿದ್ಧವಾಗಲಿ ಆತಿಥೇಯ ಶ್ರೀಲಂಕಾ ತಂಡ ಇಂದು ತಾತ್ಕಾಲಿಕ ತಂಡವನ್ನು ಘೋಷಣೆ ಮಾಡಿದೆ. 24 ಸದಸ್ಯರ ಪ್ರಾವಿಶನಲ್ ಟೆಸ್ಟ್ ತಂಡ ಹಾಗೂ 26 ಸದಸ್ಯರ ಸೀಮಿತ ಓವರ್‌ಗಳ ತಂಡವನ್ನು ಘೋಷಣೆ ಮಾಡಲಾಗಿದೆ.

ಇನ್ನು ಈ ಸೆಣೆಸಾಟದಲ್ಲಿ ಏಕದಿನ ಸರಣಿ ಐಸಿಸಿ ಪುರುಷರ ವಿಶ್ವಕಪ್‌ನ ಸೂಪರ್ ಲೀಗ್ ಹಂತದ ಭಾಗವಾಗಿದ್ದರೆ ಟೆಸ್ಟ್ ಸರಣಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ 2021-23ರ ಭಾಗವಾಗಿದೆ ಎಂಬುದು ಗಮನಾರ್ಹ. ಮೊದಲಿಗೆ ಟಿ20 ಸರಣಿ ನಡೆಯಲಿದ್ದು ಮೂರು ಪಂದ್ಯಗಳ ಈ ಸರಣಿ ಜೂನ್ 7ರಿಂದ ಜೂನ್ 11ರ ಮಧ್ಯೆ ನಡೆಯಲಿದೆ. ಅದಾದ ಬಳಿಕ ಏಕದಿನ ಸರಣಿ ಆಯೋಜನೆಯಾಗಲಿದ್ದು ಐದು ಪಂದ್ಯಗಳ ಈ ಸರಣಿ ಜೂನ್ 14ರಿಂದ 24ರ ಮಧ್ಯೆ ನಿಗದಿಯಾಗಿದೆ. ಎರಡು ಪಂದ್ಯಗಳ ಟೆಸ್ಟ್ ಸರಣಿಯೊಂದಿಗೆ ಆಸ್ಟ್ರೇಲಿಯಾದ ಈ ಪ್ರವಾಸ ಅಂತ್ಯವಾಗಲಿದ್ದು ಜೂನ್ 29ರಿಂದ ಜುಲೈ3ರ ವರೆಗೆ ಮೊದಲ ಟೆಸ್ಟ್ ಹಾಗೂ ಜುಲೈ 8-12ರವರೆಗೆ 2ನೇ ಟೆಸ್ಟ್ ನಡೆಯಲಿದೆ.

ಕಿಂಗ್ ಇಸ್ ಬ್ಯಾಕ್: ಫಾರ್ಮ್‌ಗೆ ಮರಳಿದ ವಿರಾಟ್ ಕೊಹ್ಲಿ; ಟ್ವಿಟ್ಟರ್‌ನಲ್ಲಿ ಶ್ಲಾಘಿಸಿದ ಮಾಜಿ ಆಟಗಾರರುಕಿಂಗ್ ಇಸ್ ಬ್ಯಾಕ್: ಫಾರ್ಮ್‌ಗೆ ಮರಳಿದ ವಿರಾಟ್ ಕೊಹ್ಲಿ; ಟ್ವಿಟ್ಟರ್‌ನಲ್ಲಿ ಶ್ಲಾಘಿಸಿದ ಮಾಜಿ ಆಟಗಾರರು

ಶ್ರೀಲಂಕಾದ ತಾತ್ಕಾಲಿಕ ತಂಡ

ಟೆಸ್ಟ್: ದಿಮುತ್ ಕರುಣಾರತ್ನೆ (ನಾಯಕ), ಪಾತುಮ್ ನಿಸ್ಸಾಂಕ, ಕಮಿಲ್ ಮಿಶ್ರಾ, ಓಷಾದ ಫೆರ್ನಾಂಡೋ, ಕುಸಲ್ ಮೆಂಡಿಸ್, ಏಂಜೆಲೊ ಮ್ಯಾಥ್ಯೂಸ್, ಧನಂಜಯ ಡಿ ಸಿಲ್ವಾ, ಕಮಿಂದು ಮೆಂಡಿಸ್, ನಿರೋಶನ್ ಡಿಕ್ವೆಲ್ಲಾ, ದಿನೇಶ್ ಚಾಂಡಿಮಲ್, ಚಾಮಿಕಾ ಕರುಣಾರತ್ನೆ, ರಮೇಶ್ ಮೆಂಡಿಸ್, ಮೊಹಮ್ಮದ್ ಶಿರಾಜ್, ಶಿರಾನ್ ಫೆರ್ನಾಂಡೋ, ದಿಲ್ಶನ್ ಮಧುಶಂಕ, ಲಹಿರು ಕುಮಾರ, ಕಸುನ್ ರಜಿತಾ, ವಿಶ್ವ ಫೆರ್ನಾಂಡೋ, ಅಸಿತ ಫೆರ್ನಾಂಡೋ, ಜೆಫ್ರಿ ವಾಂಡರ್ಸೆ, ಲಕ್ಷಿತ ರಸಂಜನ, ಪ್ರವೀಣ್ ಜಯವಿಕ್ರಮ, ಲಸಿತ್ ಎಂಬುಲ್ದೇನಿಯ, ಸುಮಿಂದ ಲಕ್ಷಣ್.

ಏಕದಿನ: ದಸುನ್ ಶನಕ (ನಾಯಕ), ದನುಷ್ಕ ಗುಣತಿಲಕ, ಪಾತುಂ ನಿಸ್ಸಾಂಕ, ಕುಸಲ್ ಮೆಂಡಿಸ್, ಚರಿತ್ ಅಸಲಂಕಾ, ಭಾನುಕ ರಾಜಪಕ್ಸೆ, ಧನಂಜಯ ಡಿ ಸಿಲ್ವಾ, ಅಶೆನ್ ಬಂಡಾರ, ದಿನೇಶ್ ಚಾಂಡಿಮಾಲ್, ನಿರೋಶನ್ ಡಿಕ್ವೆಲ್ಲಾ, ಜನಿತ್ ಲಿಯಾನಗೆ, ದುನಿತ್ ವೆಲ್ಲಲಾಗೆ, ಧನಂಜಯ ಲಕ್ಷಣ್, ಸಹನ್ ಆರಾಚ್ಚಿ, ವನಿಂದು ಹಸರಂಗ, ಚಾಮಿಕ ಕರುಣಾರತ್ನೆ, ಲಹಿರು ಮಧುಶಂಕ, ರಮೇಶ್ ಮೆಂಡಿಸ್, ದುಷ್ಮಂತ ಚಮೀರ, ಬಿನೂರ ಫೆರ್ನಾಂಡೋ, ದಿಲ್ಶನ್ ಮಧುಶಂಕ, ಲಹಿರು ಕುಮಾರ, ಕಸುನ್ ರಜಿತ, ಜೆಫ್ರಿ ವಾಂಡರ್ಸೆ, ಮಹೇಶ್ ತೀಕ್ಷಣ, ಪ್ರವೀಣ್ ಜಯವಿಕ್ರಮ.

ವಿರಾಟ್ ಒಂಥರಾ ಸ್ಪೆಷಲ್ ವ್ಯಕ್ತಿ !! | OneIndia Kannada

ಟಿ20: ದಾಸುನ್ ಶನಕ (ನಾಯಕ), ದನುಷ್ಕ ಗುಣತಿಲಕ, ಪಾತುಮ್ ನಿಸ್ಸಂಕ, ಕುಸಲ್ ಮೆಂಡಿಸ್, ಚರಿತ್ ಅಸಲಂಕಾ, ಭಾನುಕ ರಾಜಪಕ್ಸೆ, ಅಶೆನ್ ಬಂಡಾರ, ನಿರೋಶನ್ ಡಿಕ್ವೆಲ್ಲಾ, ದುನಿತ್ ವೆಲ್ಲಲಗೆ, ಧನಂಜಯ ಲಕ್ಷಣ್, ಸಹನ್ ಆರಚ್ಚಿ, ವನಿಂದು ಹಸರಂಗ, ಚಾಮಿಕ ಕರುಣಾರತ್ನ, ಲಹಿರು ಮಧುಶಂಕ, ರಮೇಶ್ ಮೆಂಡಿಸ್, ದುಷ್ಮಂತ ಚಮೀರ, ಬಿನೂರ ಫೆರ್ನಾಂಡೋ, ಮಥೀಶ ಪತಿರಣ, ನುವಾನ್ ತುಷಾರ, ಕಸುನ್ ರಜಿತ, ನಿಪುನ್ ಮಾಲಿಂಗ, ಲಹಿರು ಕುಮಾರ, ಜೆಫ್ರಿ ವಂಡರ್ಸೆ, ಮಹೇಶ್ ತೀಕ್ಷಣ, ಪ್ರವೀಣ್ ಜಯವಿಕ್ರಮ, ಲಕ್ಷಣ ಸಂದಕನ್.

Story first published: Saturday, May 21, 2022, 8:50 [IST]
Other articles published on May 21, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X