ಟೀಮ್ ಇಂಡಿಯಾ ವಿರುದ್ಧದ ಟಿ20ಐ ಸರಣಿಗೆ ತಂಡ ಪ್ರಕಟಿಸಿದ ಶ್ರೀಲಂಕಾ

ಕೊಲಂಬೋ, ಜನವರಿ 1: ಭಾರತಕ್ಕೆ ಪ್ರವಾಸ ಕೈಗೊಳ್ಳುತ್ತಿರುವ ಶ್ರೀಲಂಕಾ, ಆತಿಥೇಯರ ವಿರುದ್ಧದ ಟಿ20ಐ ಸರಣಿಗಾಗಿ ತಂಡ ಪ್ರಕಟಿಸಿದೆ. ಸುಮಾರು 16 ತಿಂಗಳ ಕಾಲ ಚುಟುಕು ಮಾದರಿಯ ಕ್ರಿಕೆಟ್‌ನಿಂದ ದೂರ ಉಳಿದಿದ್ದ ಮಾಜಿ ನಾಯಕ ಏಂಜೆಲೋ ಮ್ಯಾಥ್ಯೂಸ್ ಅವರನ್ನು ತಂಡದಲ್ಲಿ ಹೆಸರಿಸಲಾಗಿದೆ.
32ರ ಹರೆಯದ ಅನುಭವಿ ಆಟಗಾರ ಮ್ಯಾಥ್ಯೂಸ್ ತಂಡದಲ್ಲಿ ಇರುವುದಾಗಿ ಶ್ರೀಲಂಕಾ ಕ್ರಿಕೆಟ್ ಬೋರ್ಡ್ ಖಾತರಿಪಡಿಸಿದ್ದು, ವೇಗಿ ಲಸಿತ್ ಮಾಲಿಂಗಾ ತಂಡವನ್ನು ಮುನ್ನಡೆಸಲಿದ್ದಾರೆ. ಲಂಕಾ ತಂಡ ಗುರುವಾರ (ಜನವರಿ 3) ಶ್ರೀಲಂಕಾದಿಂದ ಭಾರತಕ್ಕೆ ಪ್ರಯಾಣ ಹೊರಡಲಿದೆ.
ಏಂಜಲೋ ಮ್ಯಾಥ್ಯೂಸ್ ಕಡೇಯ ಟಿ20 ಪಂದ್ಯವನ್ನಾಡಿದ್ದು 2018ರಂದು ದಕ್ಷಿಣ ಆಫ್ರಿಕಾ ವಿರುದ್ಧ. ಅಂದು ತಂಡದ ನಾಯಕತ್ವವನ್ನು ಮ್ಯಾಥ್ಯೂಸ್ ವಹಿಸಿಕೊಂಡಿದ್ದರು. ಆ ಪಂದ್ಯದಲ್ಲಿ ಲಂಕಾ 3 ವಿಕೆಟ್ ಜಯ ಗಳಿಸಿತ್ತು ಕೂಡ. ಆದರೆ ಏಂಜೆಲೋ ಆವತ್ತು ಉತ್ತಮ ಪ್ರದರ್ಶನ ನೀಡಿರಲಿಲ್ಲ. 0 ರನ್‌ಗೆ ಔಟ್ ಆಗಿದ್ದರು.
ಭಾರತಕ್ಕೆ ಪ್ರವಾಸ ಕೈಗೊಳ್ಳಲಿರುವ ಲಂಕಾ, 3 ಪಂದ್ಯಗಳ ಟಿ20 ಸರಣಿಯಲ್ಲಿ ಪಾಲ್ಗೊಳ್ಳಲಿದ್ದು, ಸರಣಿಯ ಆರಂಭಿಕ ಪಂದ್ಯ ಜನವರಿ 5ರ ಭಾನುವಾರ ಗುವಾಹಟಿಯ ಬರ್ಸಪರಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ. 7 pmಗೆ ಪಂದ್ಯ ಆರಂಭಗೊಳ್ಳಲಿದೆ.
ಭಾರತ ಪ್ರವಾಸಕ್ಕೆ ಶ್ರೀಲಂಕಾ ತಂಡ: ಲಸಿತ್ ಮಾಲಿಂಗ (ನಾಯಕ), ದನುಷ್ಕಾ ಗುಣತಿಲಕ, ಅವಿಷ್ಕಾ ಫರ್ನಾಂಡೊ, ಏಂಜೆಲೋ ಮ್ಯಾಥ್ಯೂಸ್, ದಾಸುನ್ ಶನಕಾ, ಕುಸಾಲ್ ಪೆರೆರಾ, ನಿರೋಷನ್ ಡಿಕ್ವೆಲ್ಲಾ, ಧನಂಜಯ ಡಿ ಸಿಲ್ವಾ, ಇಸುರು ಉದಾನಾ, ಭನುಕಾ ರಾಜಪಕ್ಸೆ, ಓಶಾದಾ ಫರ್ನಾಂಡೋ, ವನಿಂದು ಹಸರಂಗ, ಲಹಿರು ಕುಮಾರ, ಕುಸಾಲ್ ಮೆಂಡಿಸ್, ಲಕ್ಷಣ್ ಸಂದಕನ್, ಕಾಸುನ್ ರಜಿತ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications