ಭಾರತ, ದ.ಆಫ್ರಿಕಾ ವಿರುದ್ಧ ತ್ರಿಕೋನ ಸರಣಿಗೆ ಲಂಕಾ ತಂಡ ಪ್ರಕಟ: ಮೂವರು ಹೊಸಬರಿಗೆ ಅವಕಾಶ
ಸದ್ಯ ಭಾರತದಲ್ಲಿ ಐಪಿಎಲ್ ಆರಂಭವಾಗಿದೆ. ಪುರುಷರ ತಂಡದ ಸ್ಟಾರ್ ಆಟಗಾರರು ಇದೇ ಲೀಗ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಮಹಿಳಾ ಕ್ರಿಕೆಟ್ ತಂಡದ ತನ್ನ ಮುಂದಿನ ಸರಣಿಗೆ ತಯಾರಿಯನ್ನು ನಡೆಸಿದೆ. ಇನ್ನೇನು ಕೆಲವೇ ದಿನಗಳಲ್ಲಿ ಭಾರತ ಮಹಿಳಾ ತಂಡ ಸಹ ಬ್ಯೂಸಿ ಆಗಲಿದೆ. ಇದೇ ಏಪ್ರಿಲ್ 27 ರಿಂದ ಭಾರತ, ಶ್ರೀಲಂಕಾ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವೆ ಮಹಿಳಾ ತ್ರಿಕೋನ ಸರಣಿ ನಡೆಯಲಿದೆ.
ಈ ತ್ರಿಕೋನ ಸರಣಿಗೆ ಶ್ರೀಲಂಕಾದ ಕೊಲಂಬೋ ಮೈದಾನ ಆತಿಥ್ಯ ವಹಿಸಲಿದೆ. ಇತ್ತೀಚಿಗೆ ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಈ ಸರಣಿಗೆ ತಮ್ಮ ತಮ್ಮ ತಂಡವನ್ನು ಘೋಷಿಸಿದ್ದವು. ಈಗ ಶ್ರೀಲಂಕಾ ಸಹ ತ್ರಿಕೋನ ಸರಣಿಗೆ ತಂಡವನ್ನು ಪ್ರಕಟಿಸಿದೆ. 17 ಸದಸ್ಯರ ತಂಡದಲ್ಲಿ ಮೂವರು ಹೊಸ ಆಟಗಾರ್ತಿಯರಿಗೆ ಅವಕಾಶ ನೀಡಲಾಗಿದೆ. ಈ ತ್ರಿಕೋನ ಸರಣಿ ಏಕದಿನ ಮಾದರಿಯಲ್ಲಿ ನಡೆಯಲಿದ್ದು, ಎಲ್ಲ ಪಂದ್ಯಗಳು ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯಲಿವೆ.

ಮೂವರು ಹೊಸಬರಿಗೆ ಅವಕಾಶ
ಅನುಭವಿ ಆಟಗಾರ್ತಿ ಚಮರಿ ಅಟಪಟ್ಟು ಅವರು ಶ್ರೀಲಂಕಾ ತಂಡವನ್ನು ಮುನ್ನಡೆಸಲಿದ್ದಾರೆ. ಪ್ರಕಟಿತ ತಂಡ ಅನುಭವಿ ಹಾಗೂ ಯುವ ಆಟಗಾರರಿಂದ ಕೂಡಿದೆ. ಇದೇ ಮೊದಲ ಬಾರಿಗೆ ಶ್ರೀಲಂಕಾ ಪರ ಮಲ್ಕಿ ಮದಾರ, ದೇವಸ್ಸಿ ವಿನಂಗೆ ಮತ್ತು ಪಿಯುಮಿ ಮೈದಾನ ಪ್ರವೇಶಿಸಲಿದ್ದಾರೆ. ಕಳೆದ ಸರಣಿಯ ತಂಡವನ್ನು (ನ್ಯೂಜಿಲೆಂಡ್ ಪ್ರವಾಸ) ಹಾಗೂ ಹಾಲಿ ಪ್ರಕಟಿತ ತಂಡವನ್ನು ನೋಡಿದರೆ, ಆರು ಪ್ರಮುಖ ಬದಲಾವಣೆಗಳನ್ನು ತಂಡದಲ್ಲಿ ಮಾಡಲಾಗಿದೆ. ಗಾಯಗೊಂಡಿರುವ ಆಟಗಾರ್ತಿ ಉದ್ದಿಷ್ಕಾ ಪ್ರಬೋಧಿನಿ ಅವರನ್ನು ತಂಡದಿಂದ ಕೈ ಬಿಡಲಾಗಿದೆ.
ತಂಡ: ಚಾಮರಿ ಅಟಪಟ್ಟು (ನಾಯಕ), ಹರ್ಷಿತಾ ಸಮರವಿಕ್ರಮ, ವಿಶ್ಮಿ ಗುಣರತ್ನೆ, ನೀಲಾಕ್ಷಿಕಾ ಸಿಲ್ವಾ, ಕವಿಶಾ ದಿಲ್ಹಾರಿ, ಅನುಷ್ಕಾ ಸಂಜೀವನಿ (ವಿಕೆಟ್‌ಕೀಪರ್), ಮನುಡಿ ನಾಣಯ್ಯ, ಹಾಸಿನಿ ಪೆರೇರಾ, ಅಚಿನಿ ಕುಲಸೂರ್ಯ, ಪಿಯುಮಿ ಬದಲ್ಗೆ, ದೆಯುಮಿ ಮದಲಗಿ, ಹನುಸಿ ಮದಲಕಿ, ದೆಯುಮಿ ವಿಹಂಗ, ಎಂ. ಪ್ರಿಯದರ್ಶಿನಿ, ಸುಗಂಧಿಕಾ ಕುಮಾರಿ, ರಶ್ಮಿಕಾ ಸೇವಂಡಿ, ಇನೋಕಾ ರಣವೀರ.
ಭಾರತ ತಂಡ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ (ಉಪನಾಯಕಿ), ಪ್ರತೀಕಾ ರಾವಲ್, ಹರ್ಲೀನ್ ಡಿಯೋಲ್, ಜೆಮಿಮಾ ರಾಡ್ರಿಗಸ್, ರಿಚಾ ಘೋಷ್ (ವಿಕೆಟ್ ಕೀಪರ್), ಯಾಸ್ತಿಕಾ ಭಾಟಿಯಾ (ವಿಕೆಟ್ ಕೀಪರ್), ದೀಪ್ತಿ ಶರ್ಮಾ, ಅಮನ್‌ಜೋತ್ ಕೌರ್, ಕಶ್ವೀ ಗೌತಮ್, ಸ್ನೇಹ ರಾಣಾ, ಅರುಂಧತಿ ರೆಡ್ಡಿ, ಎಸ್‌ಚಿ ಉಚಿಲ್ ಹಸಾಬ್ಧ್ಯಾನಿ, ಶ್ರೀಚರಣಿ, ಶುಚಿ ಉಪಾದ್ಯಾ
ಸರಣಿಯ ವೇಳಾ ಪಟ್ಟಿ
- ಏ. 27, ಶ್ರೀಲಂಕಾ vs ಭಾರತ
- ಏ. 29, ಭಾರತ vs ದಕ್ಷಿಣ ಆಫ್ರಿಕಾ
- ಮೇ 1, ಶ್ರೀಲಂಕಾ vs ದಕ್ಷಿಣ ಆಫ್ರಿಕಾ
- ಮೇ 4, ಶ್ರೀಲಂಕಾ vs ಭಾರತ
- ಮೇ 7, ದಕ್ಷಿಣ ಆಫ್ರಿಕಾ vs ಭಾರತ
- ಮೇ 9, ಶ್ರೀಲಂಕಾ vs ದಕ್ಷಿಣ ಆಫ್ರಿಕಾ
- ಮೇ 11, ಫೈನಲ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications