SA vs NZ : ನ್ಯೂಜಿಲೆಂಡ್ ವಿರುದ್ಧ ಸರಣಿ ಸೋಲು: ವಿಶ್ವಕಪ್‌ಗೆ ನೇರವಾಗಿ ಪ್ರವೇಶ ಪಡೆಯಲು ಶ್ರೀಲಂಕಾ ವಿಫಲ
1966ರ ಏಕದಿನ ವಿಶ್ವಕಪ್ ಚಾಂಪಿಯನ್ ಶ್ರೀಲಂಕಾ ತಂಡಕ್ಕೆ ಆಘಾತ ಎದುರಾಗಿದೆ. 2023ರ ಏಕದಿನ ವಿಶ್ವಕಪ್‌ಗೆ ನೇರವಾಗಿ ಅರ್ಹತೆ ಪಡೆದುಕೊಳ್ಳಲು ವಿಫಲವಾಗಿದೆ. ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯನ್ನು 0-2 ಅಂತರದಲ್ಲಿ ಸೋತ ಬಳಿಕ, ಏಕದಿನ ವಿಶ್ವಕಪ್‌ಗೆ ನೇರವಾಗಿ ಅರ್ಹತೆ ಪಡೆಯುವ ಅವಕಾಶವನ್ನು ಕಳೆದುಕೊಂಡಿದೆ. ಅರ್ಹತಾ ಪಂದ್ಯಗಳಲ್ಲಿ ಆಡುವ ಮೂಲಕ ಅವರು ಈಗ ಮೆಗಾ ಟೂರ್ನಿಗೆ ಅರ್ಹತೆ ಗಿಟ್ಟಿಸಿಕೊಳ್ಳಬೇಕಿದೆ.
44 ವರ್ಷಗಳ ಬಳಿಕ ಶ್ರೀಲಂಕಾ ಏಕದಿನ ವಿಶ್ವಕಪ್ ಅರ್ಹತಾ ಪಂದ್ಯಗಳನ್ನು ಆಡಲಿದೆ. ವೆಸ್ಟ್ ಇಂಡೀಸ್ ತಂಡ ಕೂಡ ನೇರವಾಗಿ ಪ್ರವೇಶ ಪಡೆಯುವ ಸಾಧ್ಯತೆ ಕಡಿಮೆ, ದಕ್ಷಿಣ ಆಫ್ರಿಕಾ ನೆದರ್ಲ್ಯಾಂಡ್ಸ್ ವಿರುದ್ಧದ ಏಕದಿನ ಸರಣಿಯ ಎರಡು ಪಂದ್ಯಗಳಲ್ಲಿ ಗೆಲುವು ಸಾಧಿಸಿದರೆ, ನೇರವಾಗಿ ಏಕದಿನ ವಿಶ್ವಕಪ್ ಟೂರ್ನಿಗೆ ಅರ್ಹತೆ ಪಡೆಯಲಿದ್ದು, ವೆಸ್ಟ್ ಇಂಡೀಸ್ ಕೂಡ ಅರ್ಹತಾ ಪಂದ್ಯಗಳನ್ನು ಆಡಬೇಕಾಗುತ್ತದೆ.

ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯ ಕೊನೆಯ ಪಂದ್ಯವನ್ನು ಸೋತ ಬಳಿಕ ಶ್ರೀಲಂಕಾ ಅಧಿಕೃತವಾಗಿ ಏಕದಿನ ವಿಶ್ವಕಪ್ ಅರ್ಹತೆ ಪಡೆಯಲು ವಿಫಲವಾಹಿತು. ಹ್ಯಾಮಿಲ್ಟನ್‌ನ ಸೆಡೆನ್ ಪಾರ್ಕ್‌ನಲ್ಲಿ ನಡೆದ ಕೊನೆಯ ಏಕದಿನ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ನ್ಯೂಜಿಲೆಂಡ್ 6 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಸರಣಿಯ ಮೊದಲ ಪಂದ್ಯದಲ್ಲಿ ಕಿವೀಸ್ ಪಡೆ ಗೆದ್ದಿದ್ದರೆ, ಎರಡನೇ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು.

157 ರನ್‌ಗಳಿಗೆ ಆಲೌಟ್ ಆದ ಶ್ರೀಲಂಕಾ
ಗೆಲ್ಲಲೇಬೇಕಾದ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ಪ್ರಮುಖ ಆಟಗಾರರು ಅಲಭ್ಯವಾದರೂ ನ್ಯೂಜಿಲೆಂಡ್ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿತು. ಆರಂಭಿಕ ಆಟಗಾರ ಪಾತುಮು ನಿಸಂಕಾ ಅರ್ಧಶತಕ ಗಳಿಸಿದರೆ, ನವಾನಿದು ಫರ್ನಾಂಡೊ ಕೇವಲ 2 ರನ್ ಗಳಿಸಿ ಔಟಾದರು. ಕುಸಾಲ್ ಮೆಂಡಿಸ್, ಏಂಜಲೋ ಮ್ಯಾಥ್ಯೂಸ್ ಶೂನ್ಯಕ್ಕೆ ಔಟಾಗುವ ಮೂಲಕ ಶ್ರೀಲಂಕಾ ಕುಸಿತ ಕಂಡಿತು.
ನಾಯಕ ದಸುನ್ ಶನಕ 36 ಎಸೆತಗಳಲ್ಲಿ 31 ರನ್ ಗಳಿಸಿದರೆ, ಧನಂಜಯ ಡಿಸಿಲ್ವ 12, ಚಮಿಕಾ ಕರುಣರತ್ನೆ 24 ರನ್ ಗಳಿಸಿದರು. ಉಳಿದ ಬ್ಯಾಟರ್ ಗಳು ಎರಡಂಕಿ ಮೊತ್ತ ಗಳಿಸುವಲ್ಲಿ ಕೂಡ ವಿಫಲವಾದರು. ಅಂತಿಮವಾಗಿ ಶ್ರೀಲಂಕಾ 41.3 ಓವರ್ ಗಳಲ್ಲಿ 157 ರನ್ ಗಳಿಗೆ ಆಲೌಟ್ ಆಯಿತು. ಮ್ಯಾಟ್ ಹೆನ್ರಿ 10 ಓವರ್ ಗಳಲ್ಲಿ ಕೇವಲ 14 ರನ್ ನೀಡಿ ಮೂರು ವಿಕೆಟ್ ಪಡೆದರು. ಹೆನ್ರಿ ಶಿಪ್ಲಿ ಮತ್ತು ಡೇರಿಲ್ ಮಿಚೆಲ್ ತಲಾ ಮೂರು ವಿಕೆಟ್ ಪಡೆದು ಮಿಂಚಿದರು.

ಸುಲಭ ಗೆಲುವು ದಾಖಲಿಸಿದ ನ್ಯೂಜಿಲೆಂಡ್
ಸುಲಭದ ಗುರಿಯನ್ನು ಬೆನ್ನತ್ತಿದ ನ್ಯೂಜಿಲೆಂಡ್ ತಂಡ ಆರಂಭದಲ್ಲಿ ಆಘಾತಕ್ಕೊಳಗಾದರೂ, ನಂತರ ಸುಲಭವಾಗಿ ಗುರಿಯನ್ನು ಬೆನ್ನತ್ತಿತು. ಚಾಡ್ ಬೊಸ್ ಮತ್ತು ಟಾಮ್ ಬ್ಲಂಡೆಲ್ ಕ್ರಮವಾಗಿ 1 ಮತ್ತು 4 ರನ್ ಗಳಿಸಿ ಔಟಾದರು. ಡೇರಿಲ್ ಮಿಚೆಲ್ ಕೂಡ 6 ರನ್ ಗಳಿಸಿ ಔಟಾದರು. 21 ರನ್ ಗಳಿಸುಷ್ಟರಲ್ಲಿ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆದರೆ ವಿಲ್ ಯಂಗ್ 113 ಎಸೆತಗಳಲ್ಲಿ 11 ಬೌಂಡರಿ ಸಹಿತ ಅಜೇಯ 86 ರನ್ ಗಳಿಸಿ ನ್ಯೂಜಿಲೆಂಡ್ ಗೆಲುವಿಗೆ ಕಾರಣವಾದರು.
ಹೆನ್ರಿ ನಿಕೋಲಸ್ ಕೂಡ 52 ಎಸೆತಗಳಲ್ಲಿ ಅಜೇಯ 44 ರನ್ ಗಳಿಸುವ ಮೂಲಕ ವಿಲ್ ಯಂಗ್ ಜೊತೆ ಉತ್ತಮ ಜೊತೆಯಾಟ ಆಡಿದರು. ಲಾಹಿರು ಕುಮಾರ್ 2 ವಿಕೆಟ್ ಪಡೆದರೆ, ಕಸುನ್ ರಜಿತ ಮತ್ತು ದಸುನ್ ಶನಕ ತಲಾ ಒಂದು ವಿಕೆಟ್ ಪಡೆದರು. ಶ್ರೀಲಂಕಾ ನ್ಯೂಜಿಲೆಂಡ್ ಪ್ರವಾಸದಲ್ಲಿ ಟೆಸ್ಟ್ ಮತ್ತು ಏಕದಿನ ಸರಣಿಯನ್ನು ಸೋತಿದ್ದು, ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications