ವಿಶ್ವಕಪ್‌ನಲ್ಲಿ ಭಾರತ-ಶ್ರೀಲಂಕಾ ಫಿಕ್ಸಿಂಗ್ ಆರೋಪ: ಕ್ರಿಮಿನಲ್ ತನಿಖೆಗೆ ಆದೇಶ

ಕೊಲಂಬೋ, ಜೂನ್ 30: 2011ರಲ್ಲಿ ಏಕದಿನ ವಿಶ್ವಕಪ್ ಫೈನಲ್ ವೇಳೆ ಭಾರತ-ಶ್ರೀಲಂಕಾ ಮಧ್ಯೆ ಫಿಕ್ಸಿಂಗ್ ನಡೆದಿತ್ತು, ಶ್ರೀಲಂಕಾ ತಂಡ ಗೆಲುವನ್ನು ಮಾರಿಕೊಂಡಿತ್ತು ಎಂಬರ್ಥದಲ್ಲಿ ಶ್ರೀಲಂಕಾ ಕ್ರೀಡಾ ಸಚಿವ ಮಹಿಂದಾನಂದ ಅಲುತ್‌ಗಮಗೆ ಅವರು ಆರೋಪಿಸಿದ್ದರು. ಈ ಆರೋಪದ ಬಗ್ಗೆ ಗಂಭೀರ ತನಿಖೆ ನಡೆಸಲು ಶ್ರೀಲಂಕಾ ಮುಂದಾಗಿದೆ.
ಪ್ರಮುಖ ಟೂರ್ನಿಯಲ್ಲಿ ಫಿಕ್ಸಿಂಗ್ ನಡೆದಿದೆ ಎಂಬ ಆರೋಪ ಕೇಳಿ ಬಂದಿರುವುದರಿಂದ ಈ ಬಗ್ಗೆ ಕ್ರಿಮಿನಲ್ ತನಿಖೆ ನಡೆಸುವಂತೆ ಶ್ರೀಲಂಕಾ ಆದೇಶಿಸಿದೆ ಎಂದು ವರದಿಯೊಂದು ಹೇಳಿದೆ. 'ಕ್ರಿಮಿನಲ್ ತನಿಖೆ ಆರಂಭಾಗಿದೆ,' ಎಂದು ಕ್ರೀಡಾ ಕಾರ್ಯದರ್ಶಿ ಕೆಡಿಎಸ್ ರುವಾನ್‌ಚಂದ್ರ ಹೇಳಿರುವುದಾಗಿ ನ್ಯೂಸ್ ಏಜೆನ್ಸಿ ಎಎಫ್‌ಪಿ ವರದಿ ಮಾಡಿದೆ.
ಕೆಲ ದಿನಗಳ ಹಿಂದೆ ಸ್ಥಳೀಯ ಟಿವಿ ಚಾನೆಲ್ 'ಸಿರಸಾ' ಜೊತೆ ಮಾತನಾಡಿದ್ದ ಅಲುತ್‌ಗಮಗೆ, 2011ರ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತ ಮತ್ತು ಶ್ರೀಲಂಕಾ ಮಧ್ಯೆ ಫಿಕ್ಸಿಂಗ್ ನಡೆದಿತ್ತು. '2011ರ ವಿಶ್ವಕಪ್ ಮಾರಾಟವಾಗಿತ್ತು. ನಾನು ಕ್ರೀಡಾ ಸಚಿನವಾಗಿದ್ದಾಗಲೇ ಇದನ್ನು ಹೇಳಿದ್ದೆ,' ಎಂದಿದ್ದರು. ಅಲುತ್‌ಗಮಗೆಯ ಈ ಹೇಳಿಕೆಯನ್ನು ಶ್ರೀಲಂಕಾ ಗಂಭೀರವಾಗಿ ಪರಿಗಣಿಸಿದೆ.
ತನಿಖೆದಾರರ ಜೊತೆ ಸಂದರ್ಶನ ನಡೆಸಿದ್ದಾಗಿ ಶ್ರೀಲಂಕಾದ ಮಾಜಿ ನಾಯಕ, 2011ರ ವಿಶ್ವಕಪ್ ಫೈನಲ್ ಪಂದ್ಯಕ್ಕೆ ತಂಡ ಆರಿಸುವಾಗ ಮುಖ್ಯ ಆಯ್ಕೆದಾರನಾಗಿದ್ದ ಅರವಿಂದ ಡೆ ಸಿಲ್ವಾ ಅವರಿಗೆ ಸಮನ್ಸ್ ನೀಡಲಾಗಿದೆ ಎಂದೂ ಎಎಫ್‌ಪಿ ನ್ಯೂಸ್ ಏಜೆನ್ಸಿ ವರದಿ ಹೇಳಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications