ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್ ವಿಜೇತ ಧೋನಿಯ ಸಿಕ್ಸ್‌ಗೆ ಚೆಂಡು ಎಸೆದಿದ್ದ ಕುಲಶೇಖರ ನಿವೃತ್ತಿ!

Sri Lanka pacer Nuwan Kulasekara retires from international cricket

ಕೊಲಂಬೋ, ಜುಲೈ 24: ಶ್ರೀಲಂಕಾದ ವೇಗಿ ನುವಾನ್ ಕುಲಶೇಖರ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಬುಧವಾರ (ಜುಲೈ 24) ನಿವೃತ್ತಿ ಘೋಷಿಸಿದ್ದಾರೆ. ಅತ್ಯಧಿಕ ವಿಕೆಟ್ ಪಡೆದ ಶ್ರೀಲಂಕಾದ 3ನೇ ಬೌಲರ್ ಅನ್ನಿಸಿಕೊಂಡು ಕುಲಶೇಖರ, ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿ ಬದುಕು ನಿಲ್ಲಿಸಿದ್ದಾರೆ.

ಟೀಮ್‌ ಇಂಡಿಯಾ ಮುಖ್ಯ ಕೋಚ್‌ ಹುದ್ದೆಯ ರೇಸ್‌ನಲ್ಲಿ ಲಂಕಾದ ದಿಗ್ಗಜಟೀಮ್‌ ಇಂಡಿಯಾ ಮುಖ್ಯ ಕೋಚ್‌ ಹುದ್ದೆಯ ರೇಸ್‌ನಲ್ಲಿ ಲಂಕಾದ ದಿಗ್ಗಜ

ನುವಾನ್ ಕುಲಶೇಖರ ಮತ್ತು ಭಾರತೀಯ ಕ್ರಿಕೆಟ್ ಪ್ರೇಮಿಗಳಿಗೆ ವಿಶಿಷ್ಠ ರೀತಿಯ ಲಿಂಕೊಂದಿದೆ. ಅದೇನೆಂದರೆ 2011ರಲ್ಲಿ ಮುಂಬೈಯ ವಾಂಖೇಡೆ ಸ್ಟೇಡಿಯಂನಲ್ಲಿ ನಡೆದಿದ್ದ ಐಸಿಸಿ ವಿಶ್ವಕಪ್ ಫೈನಲ್‌ನಲ್ಲಿ ಶ್ರೀಲಂಕಾ-ಭಾರತ ಪಂದ್ಯದಲ್ಲಿ ಧೋನಿ ಸಿಕ್ಸ್ ಬಾರಿಸಿ ಭಾರತಕ್ಕೆ ಎರಡನೇ ವಿಶ್ವಕಪ್ ಕಪ್ ಗೆಲುವಿನ ಸಂಭ್ರಮ ತಂದಿದ್ದರು. ಆವತ್ತು ಧೋನಿ ಆ ಸಿಕ್ಸ್ ಬಾರಿಸಿದ್ದು ನುವಾನ್ ಎಸೆತಕ್ಕೇನೆ!

ಮೂವರು ಅದ್ಭುತ ಯುವ ಪ್ರತಿಭೆಗಳ ಶ್ಲಾಘಿಸಿದ ನಾಯಕ ವಿರಾಟ್ ಕೊಹ್ಲಿಮೂವರು ಅದ್ಭುತ ಯುವ ಪ್ರತಿಭೆಗಳ ಶ್ಲಾಘಿಸಿದ ನಾಯಕ ವಿರಾಟ್ ಕೊಹ್ಲಿ

37ರ ಹರೆಯದ ಕುಲಶೇಖರ, 15 ವರ್ಷಗಳ ವೃತ್ತಿ ಜೀವನದಲ್ಲಿ 184 ಏಕದಿನ ಪಂದ್ಯಗಳಲ್ಲಿ 199 ವಿಕೆಟ್‌ಗಳು, 58 ಟಿ20 ಪಂದ್ಯಗಳಲ್ಲಿ 66 ವಿಕೆಟ್‌ಗಳು ಮತ್ತು 21 ಟೆಸ್ಟ್ ಪಂದ್ಯಗಳಲ್ಲಿ 48 ವಿಕೆಟ್ ಸಾಧನೆ ಹೊಂದಿದ್ದಾರೆ. ಚಮಿಂದ ವಾಸ್ ಮತ್ತು ಲಸಿತ್ ಮಾಲಿಂಗ ಬಳಿಕ ಲಂಕಾ ಪರ ಅತ್ಯಧಿಕ ವಿಕೆಟ್ ಸರದಾರರಲ್ಲಿ 3ನೇ ಸ್ಥಾನಿಯಾಗಿ ನುವಾನ್ ಗುರುತಿಸಿಕೊಂಡಿದ್ದಾರೆ.

2003ರ ನವೆಂಬರ್‌ನಲ್ಲಿ ಕುಲಶೇಖರ ಅವರು ಇಂಗ್ಲೆಂಡ್ ವಿರುದ್ಧ ಅಂತಾರಾಷ್ಟ್ರೀಯ ಏಕದಿನಕ್ಕೆ ಪಾದಾರ್ಪಣೆ ಮಾಡಿದ್ದರು. ಹಂಬಂಟೋಟದಲ್ಲಿ ಜುಲೈ 2017ರಲ್ಲಿ ಜಿಂಬಾಬ್ವೆ ವಿರುದ್ಧ ಕಡೆಯ ಏಕದಿನ ಪಂದ್ಯವನ್ನಾಡಿದ್ದರು. ಅದಾಗಿ ಮಾರ್ಚ್ 2018ರ ಬಳಿಕ ನುವಾನ್ ಯಾವುದೇ ಸ್ಪರ್ಧಾತ್ಮಕ ಪಂದ್ಯಗಳನ್ನಾಡಿಲ್ಲ.

ಇನ್‌ಸ್ಟಾಗ್ರಾಮ್‌ನಿಂದ ಕಿಂಗ್‌ ಕೊಹ್ಲಿಗೆ ಕೋಟಿ ಕೋಟಿ ವರಮಾನ!ಇನ್‌ಸ್ಟಾಗ್ರಾಮ್‌ನಿಂದ ಕಿಂಗ್‌ ಕೊಹ್ಲಿಗೆ ಕೋಟಿ ಕೋಟಿ ವರಮಾನ!

2014ರ ಟಿ20 ವಿಶ್ವಕಪ್ ಫೈನಲ್‌ನಲ್ಲಿ ಶ್ರೀಲಂಕಾ ತಂಡ ಭಾರತದ ವಿರುದ್ಧ 6 ವಿಕೆಟ್ ಗೆಲುವನ್ನಾಚರಿಸಿತ್ತು. ಈ ಟೂರ್ನಿಯಲ್ಲಿ ನುವಾನ್ ಕುಲಶೇಖರ ಲಂಕಾದ ಹೀರೋ ಆಗಿ ಮೆರೆದಿದ್ದರು. ಫೈನಲ್‌ನಲ್ಲಿ ಯುವರಾಜ್ ಸಿಂಗ್ ವಿಕೆಟ್ ಮುರಿದಿದ್ದ ನುವಾನ್ ಟೂರ್ನಿಯಲ್ಲಿ 6 ಪಂದ್ಯಗಳಲ್ಲಿ 8 ವಿಕೆಟ್ ಪಡೆದಿದ್ದರು.

Story first published: Wednesday, July 24, 2019, 17:23 [IST]
Other articles published on Jul 24, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X