ಶ್ರೀಲಂಕಾ ಕ್ರಿಕೆಟ್ ತಂಡದ ಯುವ ಸ್ಟಾರ್ ಆಟಗಾರನ ಬಂಧಿಸಿದ ಪೊಲೀಸರು!

ಕೊಲಂಬೋ, ಮೇ 25: ಅಂತಾರಾಷ್ಟ್ರೀಯ ಕ್ರಿಕೆಟ್ ಪಾದಾರ್ಪಣೆ ಪಂದ್ಯದಲ್ಲೇ ಹ್ಯಾಟ್ರಿಕ್ ವಿಕೆಟ್ ಪಡೆದು ವಿಶ್ವದ ಗಮನ ಸೆಳೆದಿದ್ದ ಶ್ರೀಲಂಕಾದ ಯುವ ಬೌಲರ್ ಶೆಹನ್ ಮಧುಶಂಕಾ ಅವರನ್ನು ಶ್ರೀಲಂಕಾ ಪೊಲೀಸರು ಬಂಧಿಸಿದ್ದಾರೆ. ಹೆರಾಯಿನ್ ಡ್ರಗ್ ಹೊಂದಿದ್ದ ಆರೋಪದ ಮೇಲೆ ಮಧುಶಂಕಾ ಬಂಧನಕ್ಕೊಳಗಾಗಿದ್ದಾರೆ.
ಭಾನುವಾರ (ಮೇ 24) ಶ್ರೀಲಂಕಾದ ಟೌನ್ ಪನ್ನಾಲದಲ್ಲಿ ಇನ್ನಿಬ್ಬರು ವ್ಯಕ್ತಿಗಳ ಜೊತೆಗೆ ವಾಹನ ಚಲಾಯಿಸಿಕೊಂಡು ಹೋಗುತ್ತಿದ್ದ ಶೆಹನ್ ಮಧುಶಂಕಾ ಅವರನ್ನು ಪೊಲೀಸರು ತಡೆದರು. ವಾಹನ ಮತ್ತು ಮೂವರೂ ವ್ಯಕ್ತಿಗಳನ್ನೂ ಪರಿಶೀಲಿಸಿದಾಗ ಪೊಲೀಸರಿಗೆ ಸುಮಾರು 2.5 ಗ್ರಾಂ ತೂಕದ ಹೆರಾಯಿನ್ ದೊರಕಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಭಾನುವಾರ ಶ್ರೀಲಂಕಾ ದೇಶದಾದ್ಯಂತ ಕರ್ಫ್ಯೂ ಜಾರಿಯಲ್ಲಿತ್ತು. ಆ ಸಮಯದಲ್ಲಿ ಶೆಹನ್ ಮಧುಶಂಕಾ ಮತ್ತು ಸಹಚರರು ವಾಹನ ಚಲಾಯಿಸುತ್ತಿದ್ದರಿಂದ ಪೊಲೀಸರು ಅವರನ್ನು ತಡೆದು ವಿಚಾರಿಸಿದ್ದರು. ಮಧುಶಂಕಾ ಅವರನ್ನು ಸದ್ಯ 2 ವಾರಗಳ ಕಸ್ಟಡಿಗೆ ಒಪ್ಪಿಸಲಾಗಿದೆ.
ಫಾಸ್ಟ್ ಬೌಲರ್ ಆಗಿರುವ ಶೆಹನ್ ಮಧುಶಂಕಾ ಬಾಂಗ್ಲಾದೇಶ, ಪಾಕಿಸ್ತಾನ ನಡುವಣ ತ್ರಿಕೋನ ಸರಣಿಯಲ್ಲಿ ಲಂಕಾ ತಂಡಕ್ಕೆ ಆಯ್ಕೆಯಾಗಿದ್ದರು. ಅಸಲಿಗೆ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು.
ಕೇವಲ 3 ಪ್ರಥಮದರ್ಜೆ ಪಂದ್ಯಗಳು, 3 ಲಿಸ್ಟ್ 'ಎ' ಪಂದ್ಯಗಳನ್ನು ಆಡಿರುವ ಮಧುಶಂಕಾ ಅಂತಾರಾಷ್ಟ್ರೀಯ ಪಾದಾರ್ಪಣೆ ಪಂದ್ಯದಲ್ಲೇ ಹ್ಯಾಟ್ರಿಕ್ ವಿಕೆಟ್ ಪಡೆದು ಬೆರಗು ಮೂಡಿಸಿದ್ದರು. ಮಶ್ರಫ್ ಮೊರ್ಟಾಜಾ, ರುಬೆಲ್ ಹೊಸೈನ್ ಮತ್ತು ಮಹಮದುಲ್ಲ ವಿಕೆಟ್‌ಗಳನ್ನು ಮುರಿದು ಹ್ಯಾಟ್ರಿಕ್ ದಾಖಲೆ ನಿರ್ಮಿಸಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications