For Quick Alerts
ALLOW NOTIFICATIONS  
For Daily Alerts
 

ವೇತನ ವಿವಾದದ ಹೊರತಾಗಿಯೂ ಇಂಗ್ಲೆಂಡ್ ಪ್ರವಾಸಕ್ಕೆ ಶ್ರೀಲಂಕಾ ಕ್ರಿಕೆಟರ್ಸ್ ಒಪ್ಪಿಗೆ

Sri Lanka players agree to England tour despite contract controversy

ಕೊಲಂಬೋ: ಶ್ರೀಲಂಕಾ ಕ್ರಿಕೆಟ್ ಬೋರ್ಡ್ ಜೊತೆಗಿನ ಒಪ್ಪಂದದ ವಿವಾದದ ಹೊರತಾಗಿಯೂ ಶ್ರೀಲಂಕಾ ಕ್ರಿಕೆಟ್ ಆಟಗಾರರು ಈ ತಿಂಗಳು ಇಂಗ್ಲೆಂಡ್‌ಗೆ ಪ್ರವಾಸ ಕೈಗೊಳ್ಳಲು ಒಪ್ಪಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ವೇತನ ಒಪ್ಪಂದಕ್ಕೆ ಸಂಬಂಧಿಸಿ ಶ್ರೀಲಂಕಾ ಕ್ರಿಕೆಟ್ ಬೋರ್ಡ್ ಮತ್ತು ಅಲ್ಲಿನ ಆಟಗಾರರ ಮಧ್ಯೆ ಅಸಮಾಧಾನ ಇದೆ.

ಕಡಿಮೆ ಸಂಬಳ ಪಡೆದು ಹೆಚ್ಚು ಪ್ರದರ್ಶನ ನೀಡಬೇಕು ಎನ್ನುವ ರೀತಿಯಲ್ಲಿರುವ ಶ್ರೀಲಂಕಾ ಕ್ರಿಕೆಟ್ ಬೋರ್ಡ್‌ನ ಹೊಸ ಒಪ್ಪಂದಕ್ಕೆ ಅಲ್ಲಿನ ಆಟಗಾರರು ಒಪ್ಪಿಗೆ ನೀಡಿಲ್ಲ. ಟೆಸ್ಟ್‌ ನಾಯಕ ದಿಮುತ್ ಕರುಣರತ್ನೆ ಮತ್ತು ಏಕದಿನ ನಾಯಕ ಕುಸಾಲ್ ಪೆರೆರಾ ಒಪ್ಪಂದಕ್ಕೆ ಸಹಿ ಹಾಕಿಲ್ಲ. ಈ ಸಮಸ್ಯೆ ಇನ್ನೂ ಬಗೆ ಹರಿಯದೆ ಉಳಿದುಕೊಂಡಿದೆ.

ನೂತನ ಒಪ್ಪಂದ ಪಾರದರ್ಶಕವಾಗಿಲ್ಲ ಎಂದು ಆಟಗಾರರು ಭಾವಿಸಿದ್ದಾರೆ ಎಂದು ಶ್ರೀಲಂಕಾದ ಮಾಧ್ಯಗಳಲ್ಲಿ ವರದಿಯಾಗಿರುವುದಾಗಿ ತಿಳಿದು ಬಂದಿದೆ. 'ಅವರು ಹೊಸ ಒಪ್ಪಂದಕ್ಕೆ ಸಹಿ ಹಾಕದೆಯೇ ಇಂಗ್ಲೆಂಡ್‌ ಪ್ರವಾಸ ಸರಣಿಯನ್ನು ಆಡಲಿದ್ದಾರೆ,' ಎಂದು ಆಟಗಾರರ ಪ್ರತಿನಿಧಿ ಇಎಸ್‌ಪಿಎನ್‌ಕ್ರಿಕ್‌ಇನ್ಫೋಗೆ ಮಾಹಿತಿ ನೀಡಿದ್ದಾರೆ.

'ಲಂಕಾ ಆಟಗಾರರು ಸ್ವಯಂ ಪ್ರೇರಿತ ಘೋಷಣೆಗೆ ಸಹಿ ಹಾಕಿದ್ದಾರೆ. ಆದರೆ ಇದರಲ್ಲಿ ಆಟಗಾರರ ಗಳಿಕೆಯ ಬಗ್ಗೆ ಯಾವುದೇ ಉಲ್ಲೇಖವಿಲ್ಲ. ಹಾಗಂತ ಆಟಗಾರರು ಯಾವತ್ತಿಗೂ ತಂಡಕ್ಕಾಗಿ ಆಡಲು ಬದ್ಧರಾಗಿದ್ದಾರೆ,' ಎಂದು ಆ ಪ್ರತಿನಿಧಿ ಹೇಳಿದ್ದಾರೆ.

ಶ್ರೀಲಂಕಾ-ಇಂಗ್ಲೆಂಡ್ ಸರಣಿ ಜೂನ್ 23ರಿಂದ ಆರಂಭಗೊಳ್ಳಲಿದೆ. ಪ್ರವಾಸ ಸರಣಿಯು ಮೂರು ಏಕದಿನ ಪಂದ್ಯಗಳು ಮತ್ತು ಮೂರು ಟಿ20ಐ ಪಂದ್ಯಗಳನ್ನು ಒಳಗೊಂಡಿರಲಿದೆ. ಭಾರತ-ನ್ಯೂಜಿಲೆಂಡ್ ಟೆಸ್ಟ್ ಮುಗಿಯುತ್ತಲೇ ಲಂಕಾ-ಇಂಗ್ಲೆಂಡ್ ಸರಣಿ ಆರಂಭವಾಗಲಿದೆ.

Story first published: Tuesday, June 8, 2021, 11:28 [IST]
Other articles published on Jun 8, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+