Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವಿಶ್ವಕಪ್‌ನಲ್ಲಿ ಫಿಕ್ಸಿಂಗ್ ಆರೋಪ: ಅರವಿಂದ ಡಿಸಿಲ್ವ ಹಾಗೂ ಉಫುಲ್ ತರಂಗ ವಿಚಾರಣೆ

Sri Lanka Police Questions Aravinda De Silva Over 2011 World Cup Fixing Charge

2011ರ ಏಕದಿನ ವಿಶ್ವಕಪ್‌ನಲ್ಲಿ ಫಿಕ್ಸಿಂಗ್ ನಡೆದಿದೆ ಎಂಬ ಆರೋಪ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಪ್ರಕರಣವನ್ನು ಕ್ರಿಮಿನಲ್ ತನಿಖೆಗೆ ಒಪ್ಪಿಸಲಾಗಿದ್ದು ಚುರುಕಿನಿಂದ ತನಿಖೆ ಆರಂಭವಾಗಿದೆ. ಮೊದಲಿಗೆ ಭ್ರಷ್ಟಾಚಾರ ನಿಗ್ರಹದಳದ ಪೊಲೀಸರು ಅಂದಿನ ಆಯ್ಕೆ ಸಮಿತಿಯ ಅಧ್ಯಕ್ಷ ಅರವಿಂದ ಡಿಸಿಲ್ವರನ್ನು ಸುದೀರ್ಘ ವಿಚಾರಣೆಗೆ ಒಳಪಡಿಸಿದ್ದಾರೆ.

2011ರ ವಿಶ್ವಕಪ್‌ನ ಸಂದರ್ಭದಲ್ಲಿ ಶ್ರೀಲಂಕಾ ಕ್ರಿಕೆಟ್‌ ಆಯ್ಕೆ ಸಮಿತಿಯ ಅಧ್ಯಕ್ಷರಾಗಿ ಮಾಜಿ ಕ್ರಿಕೆಟಿಗ ಅರವಿಂದ ಡಿಸಿಲ್ವ ಕಾರ್ಯ ನಿರ್ವಹಿಸುತ್ತಿದ್ದರು. ಸುಮಾರು ಆರು ಗಂಟೆಗಳ ಕಾಲ ಅರವಿಂದ ಡಿಸಿಲ್ವ ಅವರನ್ನು ಭ್ರಷ್ಟಾಚಾರ ನಿಗ್ರಹದಳದ ಪೊಲೀಸರು ವಿಚಾರಣೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ನಾವು ಇಂದು 2011ರ ವಿಶ್ವಕಪ್‌ ಫೈನಲ್ ಪಂದ್ಯ ಮ್ಯಾಚ್ ಫಿಕ್ಸಿಂಗ್ ಆರೋಪಕ್ಕೆ ಸಂಬಂಧಿಸಿ ತನಿಖೆಯನ್ನು ಕೈಗೆತ್ತಿಕೊಂಡಿದ್ದೇವೆ. ಕ್ರೀಡೆಗೆ ಸಂಬಂಧಿಸಿ ಹೊಸತಾಗಿ ರಚಿಸಲಾಗಿರುವ ಭ್ರಷ್ಟಾಚಾರ ನಿಗ್ರಹ ಘಟಕ ಶ್ರೀಲಂಕಾ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಮಾಜಿ ಮುಖ್ಯ ಆಯ್ಕೆಗಾರ ಅರವಿಂದ ಡಿಸಿಲ್ವ ಅವರನ್ನು ಪ್ರಶ್ನಿಸುವ ಮೂಲಕ ತನಿಖೆ ಆರಂಭಿಸಿದ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.

ಅರವಿಂದ ಡಿಸಿಲ್ವ ಹೇಳಿಕೆಯ ಆಧಾರದಲ್ಲಿ ನಾವು 2011ರ ತಂಡದಲ್ಲಿದ್ದ ಆಟಗಾರರಿಗೆ ಸಮನ್ಸ್ ನೀಡಿದ್ದು ಉಫುಲ್ ತರಂಗ ವಿಚಾರಣೆಗೆ ಹಾಜರಾಗಿದ್ದಾರೆ ಎಂದು ಅಧಿಕಾರಿ ಜಗತ್ ಮಾಧ್ಯಮಗಳಿಗೆ ಮಾಹಿತಿಯನ್ನು ನೀಡಿದ್ದಾರೆ. ವಿಶ್ವಕಪ್‌ ಫೈನಲ್ ಪಂದ್ಯದಲ್ಲಿ ತರಂಗ 30 ನಿಮಿಷಗಳ ಕಾಲ ಕ್ರೀಸ್‌ನಲ್ಲಿದ್ದು 20 ಎಸೆತಗಳನ್ನು ಎದುರಿಸಿ ಕೇವಲ 2 ರನ್ ಗಳಿಸಿದ್ದರು.

ಶ್ರೀಲಂಕಾದ ಮಾಜಿ ಕ್ರೀಡಾ ಸಚಿವ ಮಹಿಂದಾನಂದ ಅಲುತ್‌ಗಮಗೆ ಇತ್ತೀಚೆಗೆ ಖಾಸಗೀ ವಾಹಿನಿಯೊಂದರ ಜೊತೆ ಮಾತನಾಡುತ್ತಾ 2011ರ ವಿಶ್ವಕಪ್‌ನಲ್ಲಿ ಫಿಕ್ಸಿಂಗ್ ನಡೆದಿದೆ ಎಂಬ ಆರೋಪವನ್ನು ಮಾಡಿದ್ದರು. ಈ ಆರೋಪಕ್ಕೆ ಅಂದಿನ ನಾಯಕ ಸಂಗಕ್ಕರ ಮತ್ತು ಹಿರಿಯ ಆಟಗಾರನಾಗಿದ್ದ ಜಯವರ್ಧನೆ ಪ್ರತಿಕ್ರಿಯಿಸುತ್ತಾ ಈ ಆರೋಪಕ್ಕೆ ಆಧಾರಗಳಿದ್ದರೆ ತನಿಖೆ ನಡೆಯಲಿ ಎಂದಿದ್ದರು. ಶ್ರೀಲಂಕಾ ಸರ್ಕಾರ ಈ ಆರೋಪವನ್ನು ಗಂಭೀರವಾಗಿ ಪರಿಗಣಿಸಿದ್ದು ತನಿಖೆ ಚುರುಕಿನಿಂದ ನಡೆಯುತ್ತಿದೆ.

Story first published: Wednesday, July 1, 2020, 16:46 [IST]
Other articles published on Jul 1, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+