ದಕ್ಷಿಣ ಆಫ್ರಿಕಾ ಟೆಸ್ಟ್‌ನಿಂದ ಶ್ರೀಲಂಕಾದ ಏಂಜಲೋ ಮ್ಯಾಥ್ಯೂಸ್ ಹೊರಕ್ಕೆ

ಕೊಲಂಬೋ: ಮುಂಬರಲಿರುವ ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗಳಿಗೆ ಸಂಬಂಧಿಸಿ ಶ್ರೀಲಂಕಾ ತಂಡ ಪ್ರಕಟಗೊಂಡಿದೆ. ಆದರೆ ಆರಂಭದಲ್ಲಿ ನಡೆಯುವ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಿಂದ ಲಂಕಾ ಅನುಭವಿ ಆಟಗಾರ ಏಂಜಲೋ ಮ್ಯಾಥ್ಯೂಸ್ ಹೊರ ಬಿದ್ದಿದ್ದಾರೆ.
ಗಾಯಕ್ಕೀಡಾಗಿರುವ ಏಂಜಲೋ ಮ್ಯಾಂಥ್ಯೂಸ್ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಆಡುತ್ತಿಲ್ಲ. 33ರ ಹರೆಯದ ಏಂಜಲೋ ಹ್ಯಾಮ್‌ಸ್ಟ್ರಿಂಗ್ ಸಮಸ್ಯೆ ಎದುರಿಸುತ್ತಿದ್ದಾರೆ. ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್ ಎರಡೂ ಟೆಸ್ಟ್ ಸರಣಿಗಳಿಗೂ ದಿಮುತ್ ಕರುಣರತ್ನೆ ತಂಡವನ್ನು ಮುನ್ನಡೆಸಲಿದ್ದಾರೆ.
ಎಡಗೈ ಬ್ಯಾಟ್ಸ್‌ಮನ್ ಕುಸಾಲ್ ಪೆರೆರಾ ಪ್ರಕಟಿತ ತಂಡದಲ್ಲಿ ಹೆಸರಿಸಲ್ಪಟ್ಟಿದ್ದಾರೆ. ದಕ್ಷಿಣ ಆಫ್ರಿಕಾಕ್ಕೆ ಪ್ರವಾಸ ಹೋಗಿರುವ ಶ್ರೀಲಂಕಾ, ಸೆಂಚುರಿಯನ್‌ನಲ್ಲಿರುವ ಸೂಪರ್ ಪಾರ್ಕ್ ಸ್ಟೇಡಿಯಂನಲ್ಲಿ ಡಿಸೆಂಬರ್ 26ರಿಂದ ಮೊದಲ ಟೆಸ್ಟ್, ಜೋಹಾನ್ಸ್ ಬರ್ಗ್‌ನಲ್ಲಿ ಜನವರಿ 3ರಿಂದ ದ್ವಿತೀಯ ಟೆಸ್ಟ್ ಆಡಲಿದೆ. ಲಂಕಾಕ್ಕೆ ಪ್ರವಾಸ ಬರುವ ಇಂಗ್ಲೆಂಡ್ ಜನವರಿ 14ರಿಂದ ಗ್ಯಾಲೆಯಲ್ಲಿ ಟೆಸ್ಟ್ ಸರಣಿಯಲ್ಲಿ ಆಡಲಿದೆ.
ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಗೆ ಲಂಕಾ ತಂಡ
ದಿಮುತ್ ಕರುಣರತ್ನ (ನಾಯಕ), ಕುಸಾಲ್ ಪೆರೆರಾ, ದಿನೇಶ್ ಚಂಡಿಮಾಲ್, ಕುಸಾಲ್ ಮೆಂಡಿಸ್, ಏಂಜೆಲೊ ಮ್ಯಾಥ್ಯೂಸ್ *, ಓಷಾದಾ ಫರ್ನಾಂಡೊ, ಧನಂಜಯ ಡಿ ಸಿಲ್ವಾ, ನಿರೋಷನ್ ಡಿಕ್ವೆಲ್ಲಾ, ಮಿನೋದ್ ಭನುಕಾ, ಲಹಿರು ತಿರಿಮನ್ನೆ, ಲಸಿತ್ ಎಂಬುಲ್ಡೆನ್ಯಾ, ವನಿಂದು ಹಸರಂಗ, ದುಲ್ರುವಾನ್ ಪೆರೆರಾ, ಸುರಂಗ ಲಕ್ಮಲ್, ಲಹಿರು ಕುಮಾರ, ವಿಶ್ವ ಫರ್ನಾಂಡೊ, ಕಸುನ್ ರಾಜಿತಾ, ದುಷ್ಮಂತಾ ಚಮೀರಾ, ದಾಸುನ್ ಶಾನಕಾ, ಸಂತುಶ್ ಗುಣತಿಲಕ, ಅಸಿತಾ ಫರ್ನಾಂಡೊ, ದಿಲ್ಶನ್ ಮಧುಶಂಕ.
* ಏಂಜಲೋ ಮ್ಯಾಥ್ಯೂಸ್ ಇಂಗ್ಲೆಂಡ್ ಸರಣಿಗೆ ಮಾತ್ರ ಲಭ್ಯರಿರಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications