ಕೊಲಂಬೋ: ಮುಂಬರಲಿರುವ ಟಿ20 ವಿಶ್ವಕಪ್ನಲ್ಲಿ ಶ್ರೀಲಂಕಾದ ಅನುಭವಿ ಆಟಗಾರ ಕುಸಾಲ್ ಪೆರೆರಾ ಆಡೋದು ಅನುಮಾನವಾಗಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಟಿ20ಐ ವೇಳೆ ಹ್ಯಾಮ್ಸ್ಟ್ರಿಂಗ್ ಗಾಯಕ್ಕೀಡಾಗಿರುವ ಪೆರೆರಾ ಪ್ರತಿಷ್ಠಿತ ಟಿ20 ವಿಶ್ವಕಪ್ ವೇಳೆ ಅಲಭ್ಯರಾಗುವ ಸಾಧ್ಯತೆಯಿದೆ.
ಟಿ20 ವಿಶ್ವಕಪ್ 2021: ಎಲ್ಲಾ ತಂಡಗಳು, ವೇಳಾಪಟ್ಟಿ, ಸಂಪೂರ್ಣ ಮಾಹಿತಿ
ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಟಿ20ಐ ವೇಳೆ ಕುಸಾಲ್ ಪೆರೆರಾ ರನ್ ಓಡುವಾಗ ನೋವಿನಲ್ಲಿ ಪರದಾಡುತ್ತಿದ್ದುದು ವಿಡಿಯೋದಲ್ಲಿ ಸೆರೆಯಾಗಿತ್ತು. ಪಂದ್ಯದ ವೇಳೆ ರನ್ ಓಡುವಾಗ ನೋವು ಕಾಣಿಸಿಕೊಂಡಿರುವುದಾಗಿ ತಿಳಿದು ಬಂದಿದೆ.
"ಸ್ಟ್ರಿಂಟರ್ ಇಂಜುರಿ ಇದು. ವಿಕೆಟ್ಗಳ ಮಧ್ಯೆ ಓಡುವಾಗ ಈ ನೋವು ಕಾಣಿಸಿಕೊಂಡಿದೆ. ಈ ಗಾಯ ಬೇಗ ಗುಣವಾಗುವುದಿಲ್ಲ. ಗಾಯದ ಗುಣವೇ ಹೀಗಿರುವುದರಿಂದ ನಾವು ಪೆರೆರಾಗೆ ಶೀಘ್ರ ಚೇತರಿಸುವಂತೆ ಮಾಡಲು ಸಾಧ್ಯವಿಲ್ಲ," ಎಂದು ಶ್ರೀಲಂಕಾ ತಂಡದ ಫಿಸಿಯೋ ದಮಿಂದ ಅತ್ತ ನಾಯಕೆ ಇಎಸ್ಪಿಎನ್ ಕ್ರಿಕ್ಇನ್ಫೋ ಜೊತೆ ಹೇಳಿಕೊಂಡಿದ್ದಾರೆ.
2017ರ ಚಾಂಪಿಯನ್ಸ್ ಟ್ರೋಫಿ ಫೈನಲ್ನಂತೆ ಭಾರತ ಸೋಲಿಸುತ್ತೇವೆ: ಅಲಿ
ಕಳೆದ ಭಾನುವಾರ ಶ್ರೀಲಂಕಾ ಕ್ರಿಕೆಟ್ ತಂಡ ಟಿ20 ವಿಶ್ವಕಪ್ಗೆ ಸಂಬಂಧಿಸಿ 15 ಮಂದಿಯ ತಂಡ ಪ್ರಕಟಿಸಿತ್ತು. ತಂಡದಲ್ಲಿ ದಾಸುನ್ ಶನಕಾ ನಾಯಕರಾಗಿ ಹೆಸರಿಸಲ್ಪಟ್ಟಿದ್ದರು. ಗ್ರೂಪ್ 'ಎ'ಯಲ್ಲಿರುವ ಶ್ರೀಲಂಕಾ ಅಕ್ಟೋಬರ್ 18ರಂದು ನಮೀಬಿಯಾ ವಿರುದ್ಧದ ಪಂದ್ಯದೊಂದಿಗೆ ಸ್ಪರ್ಧೆ ಶುರು ಮಾಡಲಿದೆ.
ಸೆಪ್ಟೆಂಬರ್ 19ರಿಂದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ದ್ವಿತೀಯ ಹಂತದ ಪಂದ್ಯಗಳು ಆರಂಭಗೊಳ್ಳಲಿವೆ. ಐಪಿಎಲ್ ಮುಗಿದು ಅಕ್ಟೋಬರ್ 17ರಿಂದ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಮತ್ತು ಓಮನ್ನಲ್ಲಿ ಟಿ20 ವಿಶ್ವಕಪ್ ಶುರುವಾಗಲಿದೆ. ನವೆಂಬರ್ 14ರಂದು ಫೈನಲ್ ನಡೆಯಲಿದೆ.