Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಶ್ರೀಲಂಕಾ ಟೆಸ್ಟ್ ಕ್ರಿಕೆಟ್ ತಂಡದ ನಾಯಕ ದಿಮುತ್ ಕರಣರತ್ನೆ ಬಂಧನ

Sri Lanka’s Test captain Dimuth Karunaratne arrested for drunk driving

ಕೊಲಂಬೋ, ಮಾರ್ಚ್ 31: ಶ್ರೀಲಂಕಾ ಟೆಸ್ಟ್ ಕ್ರಿಕೆಟ್ ತಂಡದ ನಾಯಕ ದಿಮುತ್ ಕರುಣರತ್ನೆ ಅವರನ್ನು ಭಾನುವಾರ (ಮಾರ್ಚ್ 31) ಮುಂಜಾನೆ ಕೊಲಂಬೋದಲ್ಲಿ ಬಂದಿಸಲಾಗಿದೆ. ಕುಡಿದು ವಾಹನ ಚಲಾಯಿಸಿದ ಆರೋಪದ ಮೇಲೆ ಕರುಣರತ್ನೆ ಅವರನ್ನು ಬಂಧಿಸಲಾಗಿತ್ತು.

ಪೊಲೀಸರ ಪ್ರಕಾರ, ಭಾನುವಾರ 5:40 amಗೆ ಕರುಣರತ್ನೆ ಅವರನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿತ್ತು. ಅನಂತರ ದಿಮುತ್‌ಗೆ ಬೇಲ್ ಲಭಿಸಿತ್ತು. ಕರುಣರತ್ನೆ ಅವರಿಂದಾಗಿ ಆದ ವಾಹನ ಅಪಘಾತದಿಂದ ಮತ್ತೊಂದು ವಾಹನದ ಚಾಲಕ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ ಎನ್ನಲಾಗಿದೆ.

ಕರುಣರತ್ನೆ ಮುಂದಾಳತ್ವದ ಶ್ರೀಲಂಕಾ ತಂಡ ಶುಕ್ರವಾರ (ಮಾರ್ಚ್ 29) ದಕ್ಷಿಣ ಆಫ್ರಿಕಾದಲ್ಲಿ ಟೆಸ್ಟ್ ಸರಣಿಯನ್ನು ಗೆದ್ದಿತ್ತು. ಲಸಿತ್ ಮಾಲಿಂಗ ಗಮನಾರ್ಹ ಪ್ರದರ್ಶನ ನೀಡದಿದ್ದರಿಂದ ಶ್ರೀಲಂಕಾ ನಿಗದಿತ ಓವರ್‌ ನಾಯಕತ್ವವೂ ಕರುಣರತ್ನೆ ಪಾಲಿಗೆ ಸಿಗಲಿದೆ ಎಂಬ ಗಾಳಿ ಸುದ್ದಿ ಸದ್ಯ ಹರಿದಾಡುತ್ತಿತ್ತು.

Story first published: Sunday, March 31, 2019, 17:11 [IST]
Other articles published on Mar 31, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+