Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಪಿಚ್ ಫಿಕ್ಸಿಂಗ್: ಶ್ರೀಲಂಕಾ ಕ್ರಿಕೆಟ್ ನಿಂದ ಮೂವರು ಅಮಾನತು

Sri Lanka says pitch-fixing claims difficult to believe

ಕೊಲಂಬೋ, ಮೇ 28: ಶ್ರೀಲಂಕಾದ ಗಾಲೆ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನವನ್ನು ವಿರೂಪಗೊಳಿಸಿ ಮ್ಯಾಚ್ ಫಿಕ್ಸಿಂಗ್ ಮಾಡಲಾಗಿದೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿ ಶ್ರೀಲಂಕಾ ಕ್ರಿಕೆಟ್ ಮಂಡಳಿ ಮೂವರನ್ನು ಅಮಾನತುಗೊಳಿಸಿದೆ.

ಮಾಚ್ ಫಿಕ್ಸಂಗ್ ಆರೋಪ ಕೇಳಿ ಬಂದಿದ್ದರ ಬಗ್ಗೆ ಸೋಮವಾರ ಪ್ರತಿಕ್ರಿಯಿಸಿದ ಶ್ರೀಲಂಕಾ ಕ್ರಿಕೆಟ್, 'ಇದನ್ನು ನಂಬಲು ಕಷ್ಟವಾಗುತ್ತಿದೆ' ಎಂದಿದೆ. ಜೊತೆಗೆ ಪ್ರಕರಣಕ್ಕೆ ಸಂಬಂಧಿಸಿ ಅಂತಾರಾಷ್ಟ್ರೀಯ ಮಟ್ಟದ ತನಿಖೆಗೆ ಬೇಕಾದ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಹೇಳಿದೆ.

ಅಲ್ ಜಜೀರಾ ಚಾನೆಲ್ ಭಾನುವಾರ ಬಿಡುಗಡೆಗೊಳಿಸಿರುವ ಸಾಕ್ಷ್ಯಚಿತ್ರದಲ್ಲಿ ಶ್ರೀಲಂಕಾ-ಆಸ್ಟ್ರೇಲಿಯಾ ನಡುವೆ 2016ರಲ್ಲಿ ನಡೆದಿದ್ದ ಎರಡನೇ ಟೆಸ್ಟ್ ಪಂದ್ಯವನ್ನು ಫಿಕ್ಸ್ ಮಾಡುವ ರೀತಿಯಲ್ಲಿ ಇಬ್ಬರು ಶ್ರೀಲಂಕನ್ನರು ಚರ್ಚಿಸುತ್ತಿರುವುದನ್ನು ತೋರಿಸಿತ್ತು. ಈ ಪಂದ್ಯದಲ್ಲಿ ಶ್ರೀಲಂಕಾ ತಂಡ ಆಸ್ಟ್ರೇಲಿಯಾ ವಿರುದ್ಧ 229 ರನ್ ಜಯ ಸಾಧಿಸಿತ್ತು. ಈ ಪ್ರಕರಣವೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿದೆ.

ಫಿಕ್ಸಿಂಗ್ ಅನುಮಾನ ಮೂಡುವ ರೀತಿಯಲ್ಲಿ ಗಾಲೆ ಗ್ರೌಂಡ್ ಮನ್ ತರಂಗ ಇಂಡಿಕಾ ಮತ್ತು ವೃತ್ತಿಪರ ಆಟಗಾರ ತರಿಂದು ಮೆಂಡೀಸ್ ಅವರು ವರ್ತಿಸಿದ್ದು ಕಂಡುಬಂದಿತ್ತು. ಹಾಗಾಗಿ ಅವರಿಬ್ಬರನ್ನೂ ಅಮಾನತುಗೊಳಿಸಲಾಗಿದೆ. ಜೊತೆಗೆ ಪ್ರಾಂತೀಯ ಕೋಚ್ ಜೀವಂತ ಕುಲತುಂಗ ಅವರನ್ನೂ ಶ್ರೀಲಂಕಾ ಕ್ರಿಕೆಟ್ ಅಮಾನತುಗೊಳಿಸಿದೆ.

Story first published: Tuesday, May 29, 2018, 10:13 [IST]
Other articles published on May 29, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+