For Quick Alerts
ALLOW NOTIFICATIONS  
For Daily Alerts
 

ನಿಸಂಕಾ ಶತಕದ ಬಲ ಲಂಕಾಗೆ ಭರ್ಜರಿ ಜಯ: ಜಿಂಬಾಬ್ವೆ ಆಟದ ಮೇಲೆ ಆಸೀಸ್ ಕಣ್ಣು

ಪಲ್ಲೆಕೆಲೆ: ಭರವಸೆಯ ಬ್ಯಾಟರ್‌ ಪಾತುಮ್ ನಿಸ್ಸಂಕಾ ಅವರು ಬಾರಿಸಿದ ಭರ್ಜರಿ ಶತಕದ ನೆರವಿನಿಂದ ಆತಿಥೇಯ ಶ್ರೀಲಂಕಾ ಟಿ20 ವಿಶ್ವಕಪ್‌ನ "ಬಿ" ಗುಂಪಿನ ಪಂದ್ಯದಲ್ಲಿ 8 ವಿಕೆಟ್‌ಗಳಿಂದ ಆಸ್ಟ್ರೇಲಿಯಾ ತಂಡವನ್ನು ಮಣಿಸಿ ಅಬ್ಬರಿಸಿದೆ. ಈ ಮೂಲಕ ಶ್ರೀಲಂಕಾ ಆಡಿರುವ ಮೂರು ಪಂದ್ಯಗಳಲ್ಲಿ ಜಯ ಸಾಧಿಸಿದ್ದು, ಸೂಪರ್ 8 ಹಂತಕ್ಕೆ ಅರ್ಹತೆ ಪಡೆದಿದೆ. ಆಸ್ಟ್ರೇಲಿಯಾ ಮುಂದಿನ ಹಂತವನ್ನು ತಲುಪುವ ಆಸೆ, ಜಿಂಬಾಬ್ವೆ ತಂಡದ ಫಲಿತಾಂಶದ ಮೇಲೆ ನಿಂತಿದೆ.

ಮಹತ್ವದ ಪಂದ್ಯದಲ್ಲಿ ಟಾಸ್‌ ಶ್ರೀಲಂಕಾ ಪಾಲಾಯಿತು. ಈ ಪಂದ್ಯದಲ್ಲಿ ಟಾಸ್‌ ಗೆದ್ದ ಲಂಕಾ ಮೊದಲು ಬೌಲಿಂಗ್ ಮಾಡಲು ಮುಂದಾಯಿತು. ಆಸ್ಟ್ರೇಲಿಯಾ ಪರ ನಾಯಕ ಮಿಚೆಲ್ ಮಾರ್ಷ್ ಹಾಗೂ ಟ್ರಾವಿಸ್ ಹೆಡ್ ಜೊಡಿ ತಂಡಕ್ಕೆ ಭರ್ಜರಿ ಜೊತೆಯಾಟದ ಕಾಣಿಕೆ ನೀಡಿದರು. ಈ ಜೋಡಿ ಪವರ್‌ ಪ್ಲೇನಲ್ಲಿ ಪವರ್ ಫುಲ್ ಬ್ಯಾಟಿಂಗ್ ನಡೆಸಿ ತಂಡಕ್ಕೆ ಆಧಾರವಾಯಿತು. ಅಲ್ಲದೆ ಮೊದಲ 6 ಓವರ್‌ಗಳಲ್ಲಿ ಜೋಡಿ ವಿಕೆಟ್‌ ನಷ್ಟವಿಲ್ಲದೆ 70 ರನ್ ಸೇರಿಸಿತು.

Sri Lanka

ಪವರ್ ಪ್ಲೇ ಮುಗಿದ ಬಳಿಕವೂ ಆಸ್ಟ್ರೇಲಿಯಾ ಎಚ್ಚರಿಕೆಯ ಬ್ಯಾಟಿಂಗ್ ನಡೆಸಿತು. ಈ ವೇಳೆ ಆರಂಭಿಕರು ಮೊದಲ ವಿಕೆಟ್‌ಗೆ 8.3 ಓವರ್‌ಗಳಲ್ಲಿ 104 ರನ್‌ಗಳ ಜೊತೆಯಾಟದ ಕಾಣಿಕೆ ನೀಡಿದರು. ಸ್ಪೋಟಕ ಬ್ಯಾಟರ್‌ ಟ್ರಾವಿಸ್ ಹೆಡ್‌ 29 ಎಸೆತಗಳಲ್ಲಿ 7 ಬೌಂಡರಿ, 3 ಸಿಕ್ಸರ್ ಸಹಾಯದಿಂದ 56 ರನ್ ಸಿಡಿಸಿ ಔಟ್ ಆದರು. ನಾಯಕ ಮಿಚೆಲ್ ಮಾರ್ಷ್ 200ರ ಸ್ಟ್ರೈಕ್‌ ರೇಟ್‌ನಲ್ಲಿ ಬ್ಯಾಟಿಂಗ್ ಮಾಡಿ 54 ರನ್ ಬಾರಿಸಿದರು. ಇವರ ಅಮೋಘ ಇನಿಂಗ್ಸ್‌ನಲ್ಲಿ 8 ಬೌಂಡರಿ, 2 ಸಿಕ್ಸರ್‌ಗಳು ಸೇರಿವೆ.

ಮಧ್ಯಮ ಕ್ರಮಾಂಕದ ಬ್ಯಾಟರ್‌ ವೈಫಲ್ಯ

ಮಧ್ಯಮ ಕ್ರಮಾಂಕದಲ್ಲಿ ಕ್ಯಾಮರೂನ್ ಗ್ರೀನ್, ಟೀಮ್ ಡೇವಿಡ್‌ ರನ್ ಕಲೆ ಹಾಕುವಲ್ಲಿ ವಿಫಲರಾದರು. ಜೋಶ್‌ ಇಂಗ್ಲಿಷ್‌ 27, ಗ್ಲೆನ್ ಮ್ಯಾಕ್ಸ್‌ವೆಲ್ 22 ರನ್‌ ಸಿಡಿಸಿದರು. ಉಳಿದಂತೆ ಕೆಳ ಕ್ರಮಾಂಕದ ಬ್ಯಾಟರ್‌ಗಳು ರನ್‌ ಕಲೆ ಹಾಕುವಲ್ಲಿ ವಿಫಲರಾದರು. ಅಂತಿಮವಾಗಿ ಆಸ್ಟ್ರೇಲಿಯಾ 20 ಓವರ್‌ಗಳಲ್ಲಿ 181 ರನ್‌ಗಳಿಗೆ ಆಲೌಟ್ ಆಯಿತು. ಲಂಕಾ ಪರ ದುಷ್ಮಂತ ಚಮೀರ 3, ದುಶನ್ ಹೇಮಂತ 2 ವಿಕೆಟ್ ಉರುಳಿಸಿದರು.

ಭರ್ಜರಿ ಜೊತೆಯಾಟ

ಗುರಿಯನ್ನು ಬೆನ್ನಟ್ಟಿದ ಶ್ರೀಲಂಕಾ ತಂಡದ ಆರಂಭ ಕಳಪೆಯಾಗಿತ್ತು. ಕುಸಾಲ್ ಪೆರೆರಾ ರನ್ ಕಲೆ ಹಾಕುವಲ್ಲಿ ವಿಫಲರಾದರು. 8 ರನ್‌ಗಳಿಗೆ ಮೊದಲ ವಿಕೆಟ್‌ ಕಳೆದುಕೊಂಡಿದ್ದ ತಂಡಕ್ಕೆ ಪತಮ್ ನಿಸಂಕಾ ಹಾಗೂ ಕುಸಾಲ್ ಮೆಂಡೀಸ್ ಆಧಾರವಾದರು. ಈ ಜೊಡಿ ಆಸ್ಟ್ರೇಲಿಯಾ ಬೌಲರ್‌ಗಳ ಸವಾಲು ಮೆಟ್ಟಿನಿಂತು ರನ್ ಕಲೆ ಹಾಕಿತು. ಅಲ್ಲದೆ ವಿಜಯ್ ಲಕ್ಷ್ಮಿ ತಮ್ಮತ್ತ ವಾಲುವಂತೆ ಮಾಡಿತು. ಈ ಜೋಡಿ ಎರಡನೇ ವಿಕೆಟ್‌ಗೆ 97 ರನ್‌ ಜೊತೆಯಾಟವನ್ನು ನೀಡಿತು. ಈ ಹಂತದಲ್ಲಿ ಕುಸಾಲ್ ಮೆಂಡೀಸ್‌ 51 ರನ್‌ ಬಾರಿಸಿ ಔಟ್ ಆದರು.

ನಿಸಂಕಾ ಶತಕ

ಆರಂಭಿಕ ಆಟಗಾರ ಅಮೋಘ ಬ್ಯಾಟಿಂಗ್ ನಡೆಸಿ ಶತಕ ಬಾರಿಸಿದರು. ಇವರು 52 ಎಸೆತಗಳಲ್ಲಿ 10 ಬೌಂಡರಿ, 5 ಸಿಕ್ಸರ್ ನೆರವಿನಿಂದ ಅಜೇಯ 100 ರನ್‌ ಸಿಡಿಸಿದರು. ಈ ಮೂಲಕ ಟಿ20 ವಿಶ್ವಕಪ್‌ನಲ್ಲಿ ಲಂಕಾ ಪರ ಶತಕ ಬಾರಿಸಿದ ದಾಖಲೆಯನ್ನು ಬರೆದರು. ಇದಕ್ಕೂ ಮೊದಲು ಲಂಕಾ ತಂಡದ ಪರ ದಿಗ್ಗಜ ಬ್ಯಾಟರ್ ಮಹೇಲ ಜಯವರ್ಧನೆ ಈ ಸಾಧನೆ ಮಾಡಿದ್ದರು.

ಅಂತಿಮವಾಗಿ ಶ್ರೀಲಂಕಾ 18 ಓವರ್‌ಗಳಲ್ಲಿ 2 ವಿಕೆಟ್‌ ನಷ್ಟಕ್ಕೆ 184 ರನ್ ಸೇರಿಸಿ ಜಯ ಸಾಧಿಸಿತು.

ಆಸ್ಟ್ರೇಲಿಯಾ ಲೆಕ್ಕಾಚಾರ

ಆಸ್ಟ್ರೇಲಿಯಾ ಪ್ರಸಕ್ತ ವಿಶ್ವಕಪ್‌ನಲ್ಲಿ ಕಳಪೆ ಪ್ರದರ್ಶನ ನೀಡಿದೆ. ಆಸ್ಟ್ರೇಲಿಯಾ ಆಡಿದ ಮೂರು ಪಂದ್ಯಗಳಲ್ಲಿ 1 ಜಯ, 2 ಸೋಲು ಕಂಡಿದ್ದು 2 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಜಿಂಬಾಬ್ವೆ ತಂಡ ಲೀಗ್‌ ಹಂತದಲ್ಲಿ ಆಡಿದ ಎರಡೂ ಪಂದ್ಯಗಳನ್ನು ಗೆದ್ದಿದ್ದು ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ.

ಜಿಂಬಾಬ್ವೆ ಲೀಗ್ ಹಂತದ ಮುಂದಿನ ಪಂದ್ಯವನ್ನು ಐರ್ಲೆಂಡ್‌ ವಿರುದ್ಧ ಫೆ.17 ರಂದು, ಶ್ರೀಲಂಕಾ ವಿರುದ್ಧ ಫೆ.19 ರಂದು ಲೀಗ್‌ ಹಂತದ ಕೊನೆಯ ಪಂದ್ಯವನ್ನು ಆಡಲಿದೆ. ಈ ಎರಡೂ ಪಂದ್ಯಗಳಲ್ಲಿ ಜಿಂಬಾಬ್ವೆ ಸೋತಲ್ಲಿ ಆಸ್ಟ್ರೇಲಿಯಾದ ಆಸೆ ಚಿಗುರುತ್ತದೆ. ಇಲ್ಲದೆ ಇದಲ್ಲಿ ಈ ಬಾರಿ ಆಸೀಸ್ ಲೀಗ್‌ ಹಂತದಲ್ಲೇ ಟೂರ್ನಿಗೆ ಗುಡ್ ಬಾಯ್ ಹೇಳಬೇಕಾಗುತ್ತದೆ.

Story first published: Monday, February 16, 2026, 22:37 [IST]
Other articles published on Feb 16, 2026
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+